ಮಾನವನಿಗೆ ಜೀವನ ಪಾಠಕ್ಕೆ ದೇವಾಲಯ ಸಹಕಾರಿ

ಸಿರವಾರ,ಮೇ.೨೨-
ದೇವಾಲಯಗಳ ನಿರ್ಮಾಣದಿಂದ ದೇವರ ಸ್ಮರಣೆ, ಸಂಸ್ಕಾರಗಳು ಮೂಡಿಬರುತ್ತದೆ. ಜತೆಗೆ ನಿತ್ಯ ದೇವಾಲಗಳಿಗೆ ಬಂದು ಪ್ರಾರ್ಥನೆ ಸಲ್ಲಿಸುವುದರ ಮೂಲಕ ಪಾವಿತ್ರ್ಯತೆ ಪಡೆಯಬಹುದು ಎಂದು ಬಿಷಪ್ ಡಾ|| ಹೆಡ್ರಿ ಡಿ ಸೋಜ ಧರ್ಮಾದ್ಯಕ್ಷರು ಬಳ್ಳಾರಿ ಹೇಳಿದರು.
ತಾಲೂಕಿನ ಕುರುಕುಂದ ಗ್ರಾಮದ ನೂತನ ಅಮಲೋದ್ಬವ ಮಾತೆ ದೇವಾಲಯ ಉದ್ಘಾಟಿಸಿ ಮಾತನಾಡಿದ ಧರ್ಮಾದ್ಯಕ್ಷರು ನಮ್ಮ ಸಂಸ್ಕಾರಗಳ ಅಳವಡಿಕೆ, ಆಚಾರ-ವಿಚಾರಗಳಿಂದ ಮಾನವನ ಭವಿಷ್ಯ ಉತ್ತಮಗೊಳ್ಳಲು, ಸೃಜನಶೀಲತೆ, ಏಕತೆ, ಒಗ್ಗೂಡುವಿಕೆ, ಸರ್ವತೋಮುಖ ಬೆಳವಣಿಗೆ, ತಾಳ್ಮೆ, ಸಹನೆ, ಶಾಂತಿ ಜೀವನಕ್ಕೆ ಪಾಠವಾಗುವುದಕ್ಕೆ ದೇವಾಲಯಗಳು ಸಹಕಾರಿಯಾಗುವುದು ಎಂದು ಆಶೀರ್ವಚನ ನೀಡಿದರು.
ಮೊದಲು ದೇಗುಲದ ಪರಮ ಪ್ರಸಾದದ ಸಂಪುಟ, ಪವಿತ್ರ ಶಿಲುಬೆ ಮತ್ತು ಬಲಿ ಪೀಠದ ಆಶೀರ್ವಚನ ನಂತರ ಆಡಂಬರ ಗಾಯನ ಬಲಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಸಿರವಾರ ಧರ್ಮ ಕೇಂದ್ರ ಗುರುಗಳಾದ ಭಗವಂತ ರಾಜ್ , ಫಾದರ್ ಅಮ್ಮಲ ರಾಜ್, ಫಾದರ್ ಮರಿಸ್ವಾಮಿ, ಫಾದರ್ ಜ್ಞಾನ ಪ್ರಕಾಶ್, ಮಾಸ್ಟರ್ ಪ್ರಭು, ತನುಜಾ ಕುರುಕುಂದ ಸೇರಿದಂತೆ ಭಕ್ತಾದಿಗಳು ಇದ್ದರು.