
ಸೈದಾಪುರ:ಮಾ.9:ಮಾನವ ಸಂಕುಲಕ್ಕೆ ಜಯ ತೋರಿ ಮಾನವನಿಂದಲೇ ವಿಶ್ವಕ್ಕೆ ಶಾಂತಿ ಎಂದು ಸಾರಿದ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿಯನ್ನು ಸರ್ಕಾರ ಆದೇಶದಂತೆ ಯುಗಮಾನೋತ್ಸವ ದಿನಾಚರಣೆಯಾಗಿ ಆಚರಿಸಲಾಗಿದೆ ಎಂದು ಗ್ರಾಮ ಪಂಚಾಯತ ಅಧ್ಯಕ್ಷ ಮರೆಪ್ಪ ನಾಟೇಕಾರ ಹೇಳಿದರು.
ಇಲ್ಲಿಗೆ ಸಮೀಪದ ಕಿಲ್ಲನಕೇರಾ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಅವರ ವಿಚಾರಧಾರೆಗಳು ನಮ್ಮದಾಗಬೇಕು ಎಂದು ಹೇಳಿದರು.
ಅರ್ಚಕರಾದ ರಾಚಯ್ಯ ಸ್ವಾಮಿ ಮಾತನಾಡಿ, ರೇಣುಕಾಚಾರ್ಯರು ವೀರಶೈವ ಧರ್ಮವನ್ನು ಸ್ಥಾಪಿಸಿ ವಿಶ್ವಕ್ಕೆ ಶಾಂತಿಯನ್ನು ಬಯಸಿದ ಜಗದ್ಗುರುಗಳ ಜಯಂತಿಯನ್ನು ಸರಕಾರಿ ಕಚೇರಿಗಳಲ್ಲಿ ಆಚರಿಸಲು ಅವಕಾಶ ಮಾಡಿಕೊಟ್ಟ ಸರ್ಕಾರಕ್ಕೆ ಕೃತಜ್ಞಗಳ ಸಲ್ಲಿಸಿ ಹರ್ಷ ವ್ಯಕ್ತಪಡಿಸಿದರು.
ಗ್ರಾ.ಪಂಚಾಯತ ಸದಸ್ಯರಾದ ಶಾಹೀನ ಬಾನು ಮೋದಿನ ಕತ್ತಣೋರ, ವಿರುಪಾಕ್ಷಿ ಕೋರಿ, ಬಸವರಾಜ್ ಸಜ್ಜನ್, ಜಗದೀಶ ಸಾಹುಕಾರ, ಸಮನ್ವಯ ಸೇವಾ ಸಂಸ್ಥೆಯ ಅಧ್ಯಕ್ಷ ದೇವಿಂದ್ರ, ಶಿವರಾಜ ಕುಂಬಾರ, ಜಾಲಲಾಸಾಬ್, ಸದ್ದಾಂ ಹುಸೇನ್, ಯಂಕಪ್ಪ ಉಪ್ಪಾರ ಸೇರಿದಂತೆ ಇತರರಿದ್ದರು.