ಮಾನವನಲ್ಲಿಯ ವಿಶ್ವಾಸ ಸಹನೆಗೆ ಬೆಲೆ ಇದೆ:ಗುಂಡಕನಾಳಶ್ರೀ

ತಾಳಿಕೋಟೆ:ಜು.31: ಯಾವುದೇ ಒಬ್ಬ ವ್ಯಕ್ತಿ ತನ್ನ ವರ್ಚಸ್ಸು ಘನತೆ ಬೆಳೆಸಿಕೊಳ್ಳಬೇಕಾದರೆ ಆತನಲ್ಲಿ ಸಹನೆ, ವಿಸ್ವಾಸ, ದೃಢ ನಂಬಿಕೆ ಎಂಬುದು ಇರಬೇಕೆಂದು ಗುಂಡಕನಾಳ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.

ಶನಿವಾರರಂದು ಸ್ಥಳೀಯ ದಿ.ತಾಳಿಕೋಟಿ ಸಹಕಾರಿ ಬ್ಯಾಂಕ್ ನಿ,ದಲ್ಲಿ ಪ್ರಭಾರ ಪ್ರಧಾನ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ ಸಿ.ಬಿ.ತಂಗಡಗಿ ಅವರು ನಿವೃತ್ತರಾದ ಪ್ರಯುಕ್ತ ಏರ್ಪಡಿಸಲಾದ ಬಿಳ್ಕೊಡುವ ಸಮಾರಂಭದಲ್ಲಿ ದಿವ್ಯ ಸಾನಿದ್ಯ ವಹಿಸಿ ಮಾತನಾಡುತ್ತಿದ್ದ ಶ್ರೀಗಳು ಕೇವಲ 18 ವರ್ಷದಲ್ಲಿಯೇ ಕಡಿಮೆ ವೇತನ ಪಡೆಯುತ್ತಾ ಅಂದಿನ ಸಹಕಾರಿ ಕ್ಷೇತ್ರದ ಸ್ಥಿತಿಗತಿಯೊಂದಿಗೆ ಸೇವೆಗೆ ಮುಂದಾದ ಸಿ.ಬಿ.ತಂಗಡಗಿ ಅವರು ಸುಮಾರು 8, 10 ಹುದ್ದೆಗಳಿಂದ ಬಡ್ತಿ ಹೊಂದುತ್ತಾ ಸಾಗಿ ಗ್ರಾಹಕರ ಹಾಗೂ ಸಿಬ್ಬಂದಿಗಳ ಅಲ್ಲದೇ ಬ್ಯಾಂಕಿನ ನಿರ್ದೇಶಕ ಮಂಡಳಿಯವರಿಂದ ವಿಸ್ವಾಸ ಪಡೆದ ತಂಗಡಗಿ ಅವರು ಉನ್ನತ ಸ್ಥಾನವಾದ ಪ್ರಧಾನ ವ್ಯವಸ್ಥಾಪಕ ಹುದ್ದೆಯಿಂದ ಇಂದು ನಿವೃತ್ತರಾಗಿರುವದಕ್ಕೆ ಅವರ ಘನತೆ ಗೌರವ ಹೇಗಿತ್ತೆಂಬುದು ಇಂದು ಸುರಿಮಳೆ ಗೈದ ಸನ್ಮಾನ ಸಮಾರಂಭದಿಂದಲೇ ಗೊತ್ತಾಗುತ್ತದೆ ಎಂದರು. ಮಾನವನಿಗೆ ಮೊದಲು ಮನೆಯ ಸಂಸ್ಕಾರವೆಂಬುದು ಇರಬೇಕು ಆ ಒಳ್ಳೆಯ ಸಂಸ್ಕಾರವೆಂಬುದೇ ಸಿ.ಬಿ.ತಂಗಡಗಿ ಅವರಿಗೆ ಗೌರವ ತಂದುಕೊಡಲು ಕಾರಣವಾಗಿದೆ ಈಗಾಗಲೇ ಅವರ ಕುರಿತು ಸಿಬ್ಬಂದಿ ವರ್ಗದವರು ಹಾಗೂ ಅವರ ಮೇಲಿಟ್ಟ ಪ್ರೀತಿ ಕುರಿತು ತಮ್ಮ ಅನಿಸಿಕೆಯಲ್ಲಿ ವ್ಯಕ್ತಪಡಿಸಿರುವದು ಸಂತಸದ ಸಂಗತಿಯಾಗಿ ಪರಿಣಮಿಸಿದೆ ಎಂದು ಹೇಳಿದ ಶ್ರೀಗಳು ನಿವೃತ್ತ ಹೊಂದಿದ ತಂಗಡಗಿ ಅವರು ಮುಂದೆ ಸಾಮಾಜಿಕ ಸೇವೆಯಲ್ಲಿ ಮುಂದುವರೆದು ಜನ ಪ್ರೀಯತೆ ಗಳಿಸಿಕೊಳ್ಳಲಿ ಎಂದು ಆಶಿಸುತ್ತೇನೆಂದು ಶ್ರೀಗಳು ನುಡಿದರು.

ಇನ್ನೋರ್ವ ಬಿಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಬಿ.ಎಸ್.ಪಾಟೀಲ(ಯಾಳಗಿ) ಅವರು ಮಾತನಾಡಿ ಇಂದಿನ ಕಾರ್ಯಕ್ರಮ ನೋಡಿದರೆ ಎಲ್ಲರೊಂದಿಗೆ ಸಿ.ಬಿ.ತಂಗಡಗಿ ಅವರು ಪ್ರೀತಿ ಪ್ರೇಮ ಬೆಳೆಸಿಕೊಂಡಿರುವದು ಕಂಡು ಬರುತ್ತದೆ ಅವರಿಗೆ ನೂರಾರು ಜನ ಸನ್ಮಾನಿಸಿರುವದು ಸಂತಸ ತಂದಿದೆ ಅವರ ತಂದೆ ಬಸ್ಸಪ್ಪಣ್ಣನವರೂ ಕೂಡಾ ತಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕೊಟ್ಟಿದ್ದಾರೆ ಅವರು ನೀಡಿದ ಸಂಸ್ಕಾರದಿಂದಲೇ ಉನ್ನತ ಮಟ್ಟದ ಶಿಕ್ಷಣ ಕಲಿತು, ಉನ್ನತ ಹುದ್ದೆಗೇರಲು ತಂಗಡಗಿ ಅವರ ಸಾಧನೆಯೇ ಕಾರಣವಾಗಿದೆ ಎಂದರು. 41 ವರ್ಷ ಸೇವೆಗೈದು ಯಾವುದೇ ಕಪ್ಪು ಚುಕ್ಕೆ ಇರಲಾರದೇ ನಿವೃತ್ತಿ ಹೊಂದಿರುವದು ಇದು ತಾಳ್ಮೆ, ಸಹನೆ, ಅವರಲ್ಲಿರತ್ತಕ್ಕಂತಹ ಪ್ರೀತಿಯೇ ಕಾರಣವಾಗಿದೆ ಅಲ್ಲದೇ ಅವರು ಕಷ್ಟ ಜೀವಿಗಳು ಕಷ್ಟ ಪಟ್ಟ ವ್ಯಕ್ತಿಗಳಿಗೆ ಮಾತ್ರ ಉನ್ನತ ಸ್ಥಾನಮಾನ ದೊರಕುತ್ತದೆ ಎಂದರು.

ಇನ್ನೋರ್ವ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷರಾದ ಕೆ.ಸಿ.ಸಜ್ಜನ ಅವರು ಮಾತನಾಡಿ ನಿರಂತರವಾಗಿ ಬ್ಯಾಂಕಿನಲ್ಲಿ ಸೇವೆಗೈದ ಸಿ.ಬಿ.ತಂಗಡಗಿ ಅವರು ಗ್ರಾಹಕರ ಹಾಗೂ ಸಿಬ್ಬಂದಿಯವರಿಂದ ಮೆಚ್ಚುಗೆ ಪಡೆದವರಾಗಿದ್ದಾರೆ ಕಷ್ಟದಲ್ಲಿ ಬೆಳೆದವರಿಗೆ ದೇವರು ಹೇಗೆ ಎತ್ತಿ ಹಿಡಿಯುತ್ತಾನೆಂಬುದು ಈ ಸಿ.ಬಿ.ತಂಗಡಗಿ ಅವರ ಸೇವೆಯಿಂದಲೇ ಗೊತ್ತಾಗುತ್ತದೆ 25 ಸಾವಿರ ರೂ.ಯಿಂದ ಪ್ರಾರಂಭಗೊಂಡ ಈ ಸಹಕಾರಿ ಬ್ಯಾಂಕ್ ಈಗ 176 ಕೋಟಿ ಬಂಡವಾಳದೊಂದಿಗೆ ಮುನ್ನಡೆದಿದೆ ಇದಕ್ಕೆ ಗ್ರಾಹಕರ, ನಿರ್ದೇಶಕ ಮಂಡಳಿ ಹಾಗೂ ಸಿಬ್ಬಂದಿಯವರ ಸೇವೆಯೇ ಕಾರಣವೆಂದರು.

ಇನ್ನೋರ್ವ ಬ್ಯಾಂಕಿನ ಸಿಬ್ಬಂದಿವರಾದ ಆರ್.ಎಸ್.ಬಿರಾದಾರ, ಜೆಎಸ್‍ಜಿ ಪೌಂಡೇಶನ್ ಕಾರ್ಯದರ್ಶಿ ಶ್ರೀಕಾಂತ ಪತ್ತಾರ, ಜಿ.ಎ.ಕಸ್ತೂರಿ ಅವರು ಮಾತನಾಡಿ ಚಂದ್ರಶೇಖರ ತಂಗಡಗಿ ಅವರ ವೃತ್ತಿ ಕೌಶ್ಯಲ್ಯ ಕುರಿತು ಅವರಲ್ಲಿದ್ದ ಭಾವನೆ ಆತ್ಮೀಯತೆಯಿಂದ ಕೂಡಿತ್ತು ಸಹನೆ, ತಾಳ್ಮೆ, ಶ್ರದ್ದೆ, ಸಮಯ, ಇವೇಲ್ಲವುಗಳು ಅವರಲ್ಲಿ ಅಳವಡಿಸಿಕೊಂಡಿದ್ದವು, ಸಹನೆ ಮತ್ತು ತಾಳ್ಮೆಯಿಂದ ಸಿ.ಬಿ.ತಂಗಡಗಿ ಅವರು ಸಹಕಾರಿ ಕ್ಷೇತ್ರದಲ್ಲಿ ಛಾಪು ಮೂಡಿಸಿ ಸೇವೆಯಲ್ಲಿಯೇ ನಿವೃತ್ತ ಹೊಂದುತ್ತಿರುವದು ಇದೊಂದು ದೊಡ್ಡ ಪವಾಡವಾದಂತಾಗಿದೆ ಎಂದರು.

ಸನ್ಮಾನ ಸ್ವಿಕರಿಸಿದ ನಿವೃತ್ತ ಪ್ರಧಾನ ವ್ಯವಸ್ಥಾಪಕ ಸಿ.ಬಿ.ತಂಗಡಗಿ ಅವರು ಮಾತನಾಡಿ 1981 ರಲ್ಲಿ ಸೇವೆಗೆ ಮುಂದಾಗಿದೆ ಜೂಲೈ 2022 ಕ್ಕೆ 41 ವರ್ಷ ಸೇವೆ ಸಹಕಾರಿ ಬ್ಯಾಂಕಿನಲ್ಲಿ ಮಾಡಿದೆ ನನ್ನ ಸೇವೆಗೆ ಬ್ಯಾಂಕಿನ ನಿರ್ದೇಶಕ ಮಂಡಳಿಯವರು ಸಹಕಾರ ವಿಸ್ವಾಸ ದಾಯಕವಾದಂತಹ ಸ್ಪೂರ್ತಿ ನೀಡಿದ್ದೇ ನನಗೆ ಉನ್ನತ ಮಟ್ಟಕ್ಕೆ ಏರಿ ಇಂದು ಎಲ್ಲರ ಪ್ರೀತಿಯೊಂದಿಗೆ ನಿವೃತ್ತ ಹೊಂದಲು ಸಾದ್ಯವಾಗಿದೆ ನಮ್ಮ ತಂದೆಯವರೂ ಕೂಡಾ ಬಡತನದಲ್ಲಿ ಓದು ಬರಹ ಕಲಿಸಿ ಪಧವಿದರ ಸ್ಥಾನಕ್ಕೆ ಮೇಟ್ಟಿಲೇರಲು ಕಾರಣಿಬೂತರಾದ ಅವರನ್ನು ಇಂದು ನೆನಪಿಸದೇ ಇರಲಾರೆ ಕೇವಲ 3 ರೂ. ದಿನಗೂಲಿಯಿಂದ ಬಡತನದಲ್ಲಿ ಬೇರೆಯೊಂದು ಸ್ಥಾನದಲ್ಲಿ ಕೆಲಸಕ್ಕೆ ಮುಂದಾದಾಗ ಅನೇಕ ಹಿರಿಯರು ನನ್ನ ವಿಸ್ವಾಸದಾಯಕ ಸೇವಾ ಕಾರ್ಯ ನೋಡಿ ಈಗೀನ ಅಧ್ಯಕ್ಷರಾದ ವಿಠ್ಠಲಸಿಂಗ್ ಹಜೇರಿ ಅವರು ಈ ಹಿಂದಿನ ಅಧ್ಯಕ್ಷ ದಿ.ಸುಬ್ಬಯ್ಯ ಹೆಬಸೂರ ಅವರು ಈ ಬ್ಯಾಂಕಿನಲ್ಲಿ ನನಗೆ ಸೇವೆ ನೀಡಿ ನನ್ನ ಕಾರ್ಯ ಚಟುವಟಿಕೆಗಳನ್ನು ಮನಗಂಡು ಬಡ್ತಿ ನೀಡುತ್ತಾ ಸಾಗಿ ಉನ್ನತ ಹುದ್ದೆಯೂ ಕೂಡಾ ನೀಡಿ ನನ್ನ ಒಂದು ಮನೆತನದ ಸಂಸಾರಕ್ಕೆ ಅನುಕೂಲ ಕಲ್ಪಿಸಿರುವದನ್ನು ಈ ಎಲ್ಲ ಕಾರಣೀಬೂತರನ್ನು ಎಂದು ಮರೆಯಲಾರೆ ಎಂದರು.

ಇದೇ ಸಮಯದಲ್ಲಿ ಸಹಕಾರಿ ಬ್ಯಾಂಕಿನ ನಿರ್ದೇಶಕ ಮಂಡಳಿ ವತಿಯಿಂದ ಅಧ್ಯಕ್ಷರಾದ ವಿಠ್ಠಲಸಿಂಗ್ ಹಜೇರಿ ಅವರು ಚಿನ್ನದ ಉಂಗೂರ ನೀಡಿ ಸಿ.ಬಿ.ತಂಗಡಗಿ ಅವರಿಗೆ ಸನ್ಮಾನಿಸಿ ಗೌರವಿಸಿದರು.

ಇದು ಅಲ್ಲದೇ ಮಿಣಜಗಿ ಶಾಖೆ ವತಿಯಿಂದ, ರಜಪೂತ ಸಮಾಜದ ವತಿಯಿಂದ, ಅಡತ್ ಮರ್ಚಂಟ್ ಅಸೋಶೇಶನ್ ವತಿಯಿಂದ, ಬಸವೇಶ್ವರ ಸೌಹಾರ್ದ, ಶ್ರೀನಿಧಿ ಸೌಹಾರ್ದ, ರಾಜವಾಡೆಯ ವತಿಯಿಂದ, ಪಿಕೆಪಿಎಸ್ ವತಿಯಿಂದ, ಎಸ್.ಕೆ.ಸೋಸಾಯಿಟಿ, ಅಲ್ಲದೇ ಬಿಡಿಸಿಸಿ ಬ್ಯಾಂಕ್ ತಾಳಿಕೊಟೆ ವತಿಯಿಂದ, ಮುಸ್ಲಿಂ ಬ್ಯಾಂಕ್, ಪಂಚಾಚಾರ್ಯ ಬ್ಯಾಂಕ್, ಸರ್ಕಾರಿ ಪ್ರೌಢ ಶಾಲೆ, ಬಿ.ಕೆ.ಬ್ಯಾಂಕ್, ವತಿಯಿಂದ ಸಿ.ಬಿ.ತಂಗಡಗಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಸಮಯದಲ್ಲಿ ಎಂ.ಎಸ್.ಸರಶೆಟ್ಟಿ, ಡಿ.ಎಸ್.ಹೆಬಸೂರ, ಆಯ್.ಬಿ.ಬಿಳೇಭಾವಿ, ಚಿಂತಪ್ಪಗೌಡ ಯಾಳಗಿ, ಎನ್.ಎ.ಚಿನಗೂಡಿ, ಎಸ್.ಸಿ.ಪಾಟೀಲ, ಎಚ್.ಬಿ.ಬಾಗೇವಾಡಿ, ಶ್ರೀಮತಿ ಆರ್.ಬಿ.ಕಾರ್ಜೋಳ, ಎಸ್.ವಾಯ್.ಬರದೇನಾಳ, ಆರ್.ಬಿ.ಕಟ್ಟಿಮನಿ, ಎಂ.ಬಿ.ಕೊಣ್ಣೂರ,

ಶ್ರೀಮತಿ ಎಸ್.ಬಿ.ದೇಸಾಯಿ, ಬಿ.ಕೆ.ಮಣೂರ ನಿರೂಪಿಸಿದರು. ಆರ್.ಎಸ್.ಬಿರಾದಾರ ವಂದಿಸಿದರು.