ಮಾನವಕುಲಕ್ಕೆ ಬಹುದೊಡ್ಡ ಗ್ರಂಥ ನೀಡಿದ ಮಹರ್ಷಿ ವಾಲ್ಮೀಕಿ

ಸಂಜೆವಾಣಿ ವಾರ್ತೆ

ಜಗಳೂರು.ಅ.೩೦ : ಮಹರ್ಷಿ ವಾಲ್ಮೀಕಿಯವರು ರಾಮಾಯಣ ಕೃತಿಯನ್ನು ರಚಿಸಿ ಮಾನವಕುಲಕ್ಕೆ ಬಹುದೊಡ್ಡ ಗ್ರಂಥವನ್ನು ನೀಡಿದ್ದಾರೆ ಎಂದು ಶಾಸಕ ಬಿ ದೇವೇಂದ್ರಪ್ಪ ಹೇಳಿದರು.ಜಗಳೂರು ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿತಾಲ್ಲೂಕು ಆಡಳಿತ,ತಾಲ್ಲೂಕು ಪಂಚಾಯತಿ,ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಪಟ್ಟಣ ಪಂಚಾಯತಿ ಸಂಯುಕ್ತ ಶ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿಬೇಡ ಕುಲದಲ್ಲಿ ಜನಿಸಿ ಶ್ರೀಗಳು ವಿಶ್ವಕ್ಕೆ ಸಂದೇಶ ಸಾರುವಂಥ ರಾಮಯಾಣ ಕೃತಿಯನ್ನು ರಚಿಸಿ ವಿಶ್ವ ಮಾನವರಾಗಿದ್ದಾರೆ. ದೇಶದಲ್ಲಿ ಸಾಧು ಸಂತರು ದಾರ್ಶನಿಕರು ಸಮಾಜದಲ್ಲಿರುವ ಅಂಕು ಡೊಂಡುಗಳನ್ನು ತಿದ್ದುವಂತ ಕೆಲಸ ಮಾಡಲಿಕ್ಕೆತಮ್ಮದೇ ಆದ ಕೊಡುಗೆಗಳನ್ನು ನೀಡಿ ದ್ದಾರೆ ಇವರು ನೀಡಿದ ಸಲಹೆ ಗಳನ್ನು ನಾವೆಲ್ಲರೂ ಆಳವಡಿಸಿಕೊಂಡು ನಡೆದಾಗ ಮಾತ್ರ ಜಯಂತಿಗಳನ್ನು ಆಚರಿಸಿದಕ್ಕೆ ಸಾರ್ಥಕವಾಗಲಿದೆ. ಪ್ರತಿಯೋಬ್ಬರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ದಾಗ ಮಾತ್ರ ಆ ಮಕ್ಕ ಳು ಸಮಾಜಕ್ಕೆ ತಮ್ಮದೇ ಆದ ಕೊಡುಗೆಗೆಳನ್ನು ನೀಡಲು ಸಹಕಾರಿಯಾಗಲಿದೆ ಎಂದು ಹೇಳಿದರು.ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ ಮಾತನಾಡಿ ಈ ಸೃಷ್ಟಿ ಇರುವ ತನಕವೂ ರಾಮಾಯಣ ಎಂಬ ಮಹಾ ಕಾವ್ಯವು ಲೋಕದಲ್ಲಿ ಪ್ರಸಿದ್ಧ ವಾಗಿರುತ್ತದೆ.ಎಂಬ ಪ್ರಶಸ್ತಿ ಯ ಮಾತೊಂದು ಇದೆ.ಪರಂಪರೆಯಲ್ಲಿ ಇದು ಏಕಕಾಲ ದಲ್ಲಿ ವಾಲ್ಮೀಕಿಯನ್ನೂ ರಾಮಯಣವನ್ನೂ ರಾಮನನ್ನೂ ನಿತ್ಯ ಸತ್ಯವನ್ನಾಗಿಸಿದೆ.ರಾಮಾಯಣ ಎಂದರೇನೇ ಅದು ಮಾತಿನ ಮಹಿಮೆ ಎಂದು ಹೇಳಿದರು.ಪೋಲಿಸ್ ಇನ್ಸ್ಪೆಕ್ಟರ್ ಎಂ ಶ್ರೀ ನಿವಾಸ್ ರಾವ್ ಮಾತ ನಾಡಿ ದೇಶದಲ್ಲಿ ಹಲವಾರು ಕವಿಗಳು ಬಂದರು ಆದರೆ ಅವರಲ್ಲಿ ವಿಶೇಷವಾದ ಕವಿ ಎಂದು ವಾಲ್ಮೀಕಿ ಅವರನ್ನು ಹೇಳ ಬಹುದು.ರಾಮಾಯಣದಲ್ಲಿ ರಾಮನಿಗೂ ವಿಶೇಷ ವಾದ ಸ್ಥಾನಮಾನ ವನ್ನು ನೀಡಲಾಗಿದೆ.ಇವರ ಗ್ರಂಥ ಅದ್ಬುತ.ಹೆಣ್ಣು.ಹೊನ್ನ.ಮಣ್ಣು ಒಲಿಯ ಬೇಕು, ನಾವು ಅದರ ಹಿಂದೆ ಹೋಗಬಾರದು.ಬ್ರಿಟಿಷರ ಆಳ್ವಿಕೆಯಲ್ಲಿ ಸಮಾಜದ ಪಾತ್ರ ಬಹಳ ಮುಖ್ಯವಾಗಿತ್ತು.ವಾಲ್ಮೀಕಿ ಅವ ರು ನಡೆದು ಬಂದ ಹಾದಿಯಲ್ಲಿ ನಾವುಗಳು ನಡೆಯೋಣ ಎಂದು ಕಿವಿ ಮಾತು ಹೇಳಿದರು.ಪ್ರಾಸ್ತವಿಕವಾಗಿ ವಕೀಲ ಬಸವರಾಜ್ ಮರೇನಹಳ್ಳಿ ಮಾತನಾಡಿ ಮುಂದಿನ ದಿನಗಳಲ್ಲಿ ನಮ್ಮ ಸಮಾಜದ ವರು ಸೇರಿ ವಾಲ್ಮೀಕಿ ಜಯಂತಿಯನ್ನು ಆಚರಣೆಯನ್ನು ಮಾಡಲಾಗುವುದು.ನಮ್ಮ ಸಮಾಜದ ನಾಯಕರು ಪ್ರತಿ ಹಳ್ಳಿಗಳಲ್ಲಿ ಆಚರಣೆಯನ್ನು ಮಾಡಲಾಗುತ್ತಿದೆ.ಈ ಜಯಂತಿ ಒಂದೇ ಅಲ್ಲದೆ ಎಲ್ಲಾ ಜಯಂತಿಗಳನ್ನು ತಾಲ್ಲೂಕು ಆಡಳಿತ ಅಚ್ಚುಕಟ್ಟಾಗಿ ಮಾಡಬೇಕು.ಯಾವು ದೇ ಸಮಾಜದ ಜಯಂತಿ ಗಳನ್ನು ಮಾಡಿದರೂ ಆಯ ಸಮಾಜದವನ್ನು ಕರೆದು ಸಭೆಯನ್ನು ಮಾಡಿರೂಪ ರೇಷೆ ಯನ್ನು ರೂಪಿಸಬೇಕು ಎಂದು ತಿಳಿಸಿದರು.