ವಿಜಯಪುರ:ಜು.26: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿನಿಯರು ತುಮಕೂರು ವಿಶ್ವವಿದ್ಯಾನಿಲಯ ಹಮ್ಮಿಕೊಂಡಿದ್ದ ಮಾಧ್ಯಮ ಹಬ್ಬ-2023 ರಲ್ಲಿ ಭಾಗಿಯಾಗಿ ಹಲವಾರು ಬಹುಮಾನ ಪಡೆದುಕೊಳ್ಳುವುದರ ಮೂಲಕ ಸಾಧನೆಗೈದಿದ್ದಾರೆ.
ಕಿರುಚಿತ್ರ ಸ್ಫಧರ್Éಯಲ್ಲಿ ಮೊದಲ ಬಹುಮಾನವನ್ನು ವಿದ್ಯಾರ್ಥಿನಿಯರಾದ ಲಕ್ಷ್ಮೀ ಬಾಗಲಕೋಟಿ, ತನುಜಾ ಕೆಂಗಲಗುತ್ತಿ ಹಾಗೂ ಶಿಲ್ಪಾ ಚವಾಣ್ ತಂಡ ಪಡೆದುಕೊಂಡಿದೆ.
ರೇಡಿಯೋ ಜಾಕಿ ಸ್ಪರ್ಧೆಯಲ್ಲಿ ಲಕ್ಷ್ಮೀ ಬಾಗಲಕೋಟಿ ದ್ವಿತೀಯ ಬಹುಮಾನ ಪಡೆದಿದ್ದು, ಜಾಹೀರಾತು ನಿರ್ಮಾಣ ಸ್ಪರ್ಧೆಯಲ್ಲಿ ನೀಲಮ್ಮ ಹೊಸಮನಿ, ಅಕ್ಷತಾ ಕಮತಗಿ, ತನುಜಾ ಕೆಂಗಲಗುತ್ತಿ, ಶೃತಿ ಬೆಳ್ಳುಂಡಗಿ ಹಾಗೂ ದೀಪಿಕಾ ಖತ್ರಿ ತಂಡ ತೃತಿಯ ಬಹುಮಾನ ಪಡೆದುಕೊಂಡಿದೆ.
ರಾಜ್ಯದ ವಿವಿಧ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಒಂಬತ್ತು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
ವಿದ್ಯಾರ್ಥಿಗಳ ಈ ಸಾಧನೆಗೆ ವಿವಿಯ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ, ಕುಲಸಚಿವ ಪ್ರೊ.ಬಿ.ಎಸ್.ನಾವಿ, ಕುಲಸಚಿವ (ಮೌಲ್ಯಮಾಪನ) ಪ್ರೊ.ಎಚ್.ಎಮ್.ಚಂದ್ರಶೇಖರ ಹಾಗೂ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ.ಓಂಕಾರ ಕಾಕಡೆ ಅವರು ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.