
ಧಾರವಾಡ, ಫೆ 27: ಮಾಧ್ಯಮವು ಸಮಾಜದಲ್ಲಿ ಜಾಗೃತಿ ಮೂಡಿಸುವ ಸಾಧನವಾಗಿದ್ದು, ದೇಶದಲ್ಲಿ ಆಗಿರುವ ಬದಲಾವಣೆ ಹಾಗೂ ಪ್ರಚಲಿತ ವಿದ್ಯಮಾನಗಳ ಕುರಿತು ಮಾಹಿತಿ ಒದಗಿಸಿ ದೇಶ ನಿರ್ಮಾಣಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿವೆ ಎಂದು ಪತ್ರಕರ್ತ ಅಜೀತ ಹನುಮಕ್ಕನವರ ಹೇಳಿದರು.
ಧಾರವಾಡ ವಿವೇಕಾನಂದ ಆಶ್ರಮದ ಆವರಣದಲ್ಲಿ ರಾಮಕೃಷ್ಣ ವಿಶ್ವಭಾವೈಕ್ಯ ಮಂದಿರದ 18ನೇ ವಾರ್ಷಿಕೋತ್ಸವ ಸಮಾರಂಭದ ಮೂರನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಭವಿಷ್ಯದ ದೃಷ್ಟಿಯಿಂದ ಅಭಿವೃದ್ಧಿ ಯೋಜನೆಯ ಮುನ್ಸೂಚನೆಯನ್ನು ಮಾಧ್ಯಮಗಳ ವರದಿ ಮೂಲಕ ಸಾರುವುದು ಬಹಳಷ್ಟು ಪ್ರಮುಖವಾಗುತ್ತದೆ. ಅಭಿವೃದ್ಧಿಗೆ ಪೂರಕವಾಗುವಂತೆ ಮಾಧ್ಯಮಗಳು ವರದಿ ಬಿತ್ತರಿಸುವ ಕೆಲಸವನ್ನು ಪ್ರತಿ ಹಂತದಲ್ಲೂ ಮಾಡುತ್ತಿವೆ ಎಂದರು.
ಕಾರ್ಯಕ್ರಮದಲ್ಲಿ ಮಡಿಕೇರಿ ಪೆÇನ್ನಂಪೇಠೆಯ ರಾಮಕೃಷ್ಣ ಶಾರದಾ ಆಶ್ರಮದ ತತ್ವರೂಪಾನಂದ ಸ್ವಾಮೀಜಿ, ಧಾರವಾಡ ಆಶ್ರಮದ ಸ್ವಾಮಿ ವಿಜಯಾನಂದ ಸರಸ್ವತಿ ಸ್ವಾಮೀಜಿ ಸೇರಿದಂತೆ ರಾಜ್ಯದ ರಾಮಕೃಷ್ಣ ವಿವೇಕಾನಂದ ಭಾವಪರಿಷತ್ ಕರ್ನಾಟಕದ ಎಲ್ಲ ಹಿರಿಯ ಯತಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದ ವೇದಿಕೆಯಲ್ಲಿ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ, ಯುವಕರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.