ಮಾಧ್ಯಮ ಮೇಲ್ವಿಚಾರಣಾ ಕೇಂದ್ರಕ್ಕೆ ಎಡಿಸಿ ಭೇಟಿ:

ರಾಯಚೂರು,ಏ.08 :- ಮುಂಬರುವ ವಿಧಾನಸಭೆಯ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಕಾರ್ಯದ ಲಯದ ಆವರಣದಲ್ಲಿ ಸ್ಥಾಪನೆಗೊಂಡಿರುವ ಮೀಡಿಯಾ ಮೇಲ್ಚಾವಿಚಾರಣಿ ಸಮಿತಿಯ ಕೇಂದ್ರಕ್ಕೆ ಇಂದು ಅಪಾರ ಜಿಲ್ಲಾಧಿಕಾರಿಗಳಾದ ರವೀಂದ್ರ ಕರ ಲಿಂಗಣ್ಣನವರ್ ಭೇಟಿ ನೀಡಿದರು.

ಅವರು ಟಿ.ವಿ.ಯಲ್ಲಿ ಬರತಕ್ಕಂತ ಚುನಾವಣೆಗೆ ಸಂಬಂಧಪಟ್ಟ ವಿಷಯಗಳನ್ನು ವೀಕ್ಷಣೆ ಮಾಡಿ ನಂತರ ಸಿಬ್ಬಂದಿಗಳು ದೃಶ್ಯ ಮಾಧ್ಯಮದ ದೃಶ್ಯಗಳನ್ನು ದಾಖಲೀಕರಣ ಮತ್ತು ವೃತ್ತ ಪತ್ರಿಕೆಯಲ್ಲಿ ಚುನಾವಣೆ ವಿಷಯಕ್ಕೆ ಬಂದಿರುವಂತಹ ದಾಖಲೀಕರಣಗಳನ್ನು ವೀಕ್ಷಣೆ ಮಾಡಿ ದಾಖಲೆಗಳನ್ನು ಪರಿಶೀಲನೆ ಮಾಡಿದರು. ನಂತರ ಸಿಬ್ಬಂದಿಗಳ ತಮಗೆ ಕೊಟ್ಟಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಬೇಕು .ಸರಿಯಾಗಿ ದೃಶ್ಯ ಮಾಧ್ಯಮದ ಮತ್ತು ಪತ್ರಿಕೆಯಲ್ಲಿ ಚುನಾವಣೆಯ ಅಂಶಗಳನ್ನು ಸರಿಯಾಗಿ ದಾಖಲಿಸಬೇಕೆಂದು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಮಾಧ್ಯಮ ಮೇಲ್ಚೋಣ ಸಮಿತಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಾದ ವಿಜಯಶಂಕರ್, ಡಾ. ದಂಡಪ್ಪ ಬಿರಾದಾರ್. ಮಮ್ಮದ್ ಯುಸಪ ಅಲಿ. ವಿದ್ಯಾ, ಜ್ಯೋತಿ, ಗೀತಾ, ಸುಮಾ, ಈರಮ್ಮ, ಪ್ರಕಾಶ್ ಇನ್ನಿತರು ಉಪಸ್ಥಿತರಿದ್ದರು.