ಮಾಧ್ಯಮ ಭೀಷ್ಮ ಮಾರೂತಿರಾವ ತಾಂದಳೆಗೆ ಶೃದ್ದಾಂಜಲಿ

ಬೀದರ:ಮೇ.3:ಮಾಧ್ಯಮ ಲೋಕದ ಭೀಷ್ಮ ಎಂದೇ ಬಿಂಬಿತರಾಗಿದ್ದ ಜಿಲ್ಲೆಯ ಹಿರಿಯ ಪತ್ರಿಕಾ ಛಾಯಾಗ್ರಾಹಕ ಮಾರೂತಿರಾವ ತಾಂದಳೆ ಅವರಿಗೆ ಜಿಲ್ಲೆಯ ಪತ್ರಕರ್ತರು ಹಾಗೂ ಫೋಟೊಗ್ರಾಫರ್ ಅಸೋಶಿಯಶನ್ ವತಿಯಿಂದ ಇಂದು ಶೃದ್ದಾಂಜಲಿ ಸಲ್ಲಿಸಲಾಯಿತು.

ನಗರದ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಪತ್ರಕರ್ತರು ಹಾಗೂ ಛಾಯಾಗ್ರಹಕರನ್ನು ಉದ್ದೇಶಿಸಿ ಮಾತನಾಡಿದ ಚಿಟಗುಪ್ಪ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಧ್ಯಾಪಕ ವೀರಶೆಟ್ಟಿ ಮೈಲೂರಕರ್ ಅವರು, ಜಿಲ್ಲೆಯ ಪತ್ರಕರ್ತರ ಪಾಲಿಗೆ ಮಾರೂತಿ ಮಾಮಾ ಅವರು ಒಂದು ದೊಡ್ಡ ಆಸ್ತಿಯಾಗಿದ್ದಲ್ಲದೇ ಒಂದು ದೈತ್ಯಶಕ್ತಿಯಾಗಿದ್ದರು. ಇಂದು ಅವರ ಅಗಲಿಕೆ ಜಿಲ್ಲೆಯ ಮಾಧ್ಯಮ ಲೋಕವನ್ನೇ ಬಡವಾಗಿಸಿದ್ದು ಅವರ ಅಗಲಿಕೆಯಿಂದ ಆದ ದುಖ ಅವರ ಕುಟುಂಬಕ್ಕೆ ತಡೆದುಕೊಳ್ಳುವ ಶಕ್ತಿ ಭಗವಂತನು ದಯಪಾಲಿಸಲಿ ಎಂದು ಪ್ರಾಥ್ರ್ನಿಸೋಣ ಎಂದರು. ಅವರ ಆತ್ಮಕ್ಕೆ ಶಾಂತಿ ಕೋರಿ ಎರಡು ನಿಮಿಷಗಳ ಮೌನ ಆಚರಿಸಲಾಯಿತು.

ಶೃದ್ದಾಂಜಲಿ ಸಭೆಯಲ್ಲಿ ಪತ್ರಕರ್ತರಾದ ಸರ್ಫರಾಜ್ ಅಲಿ, ಲಿಂಗೇಶ ಮರಕಲೆ, ಸೂರೇಶ ನಾಯಕ, ಗುರುಪಾದಪ್ಪ ಸಿರ್ಸಿ, ಶ್ರಾವಣಕುಮಾರ ಮೇತ್ರೆ, ಉದಯ ಜೀರ್ಗೆ, ವಿಜಯಕುಮಾರ ಸೂರ್ಯನ್, ಪಂಡಿತ ಜಾಧವ್, ಹಣಮಂತ, ಲಿಂಗರಾಜ, ಫೋಟೊಗ್ರಾಫರ್ ಅಸೋಶಿಯಶನ್ ಪ್ರಮುಖರಾದ ಮಲ್ಲಿಕಾರ್ಜುನ್ ಪಾಟೀಲ, ಪವನ ಠಾಕೂರ್, ವಿನೋದ ಬಚ್ಚಾ, ಪಪ್ಪು, ಬಸು, ವಿನಾಯಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.