ಮಾಧ್ಯಮ ಪ್ರತಿನಿಧಿಗಳಿಗೆ ಮೀಡಿಯಾ ಕಿಟ್ ವಿತರಣೆ

ಯಾದಗಿರಿ : ಜೂ 17 : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಮಾನ್ಯತಾ ಕಾರ್ಡ್ ಹೊಂದಿರುವ ಹಿಂದುಳಿದ ವರ್ಗಗಳ ಐವರು ಪತ್ರಕರ್ತರಿಗೆ ಸರಕಾರ ಕೊಡಮಾಡಿದ ಲ್ಯಾಪ್ ಟಾಪ್, ಡಿಎಸ್‍ಎಲ್‍ಆರ್ ಕ್ಯಾಮೆರಾ ಒಳಗೊಂಡಂತೆ ಮಾಧ್ಯಮ ಕಿಟ್‍ಗಳನ್ನು (ಐವರುಗಳಿಗೆ) ವಿತರಿಸಲಾಯಿತು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು (ಪ್ರ) ಸುಲೈಮಾನ ಡಿ.ನದಾಫ್ ಅವರು ನಗರದ ವಾರ್ತಾ ಇಲಾಖೆಯಲ್ಲಿ ಜೂ.16 ಶುಕ್ರವಾರ ರಂದು ಮಾಧ್ಯಮ ಕಿಟ್ ಗಳನ್ನು ವಿತರಿಸಿದರು.
ನಂತರ ಮಾತನಾಡಿದ ಅವರು, ಮಾಧ್ಯಮ ಪ್ರತಿನಿಧಿಗಳಿಗೆ ವೃತ್ತಿ ಕೌಶಲ್ಯ ಹೆಚ್ಚಿಸಿಕೊಳ್ಳುವುದರ ಜತೆಗೆ ಪರಿಣಾಮಕಾರಿಯಾಗಿ ಕೆಲಸ ಮಾಡಲು ಅನುಕೂಲವಾಗುವಂತಹ ಪರಿಕರಗಳನ್ನು ಸರಕಾರ ನೀಡಿದೆ. ಅವುಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳು ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ದತ್ತಾಂಶ ನಮೂದು ಸಹಾಯಕ (ಬೆರಳಚ್ಚುಗಾರ) ಭೀಮಣ್ಣ ನಾಯಕ, ಹಿರಿಯ ವಾಹನ ಚಾಲಕ ಗುರುನಾಥ, ಅಪ್ರೇಂಟಿಸ್ ತರಬೇತಿದಾರ ಚನ್ನಬಸವ, ಹೊರ ಗುತ್ತಿಗೆ (ಡಿ.ಗ್ರೂಪ್) ಸಿಬ್ಬಂದಿ ವಿಜಯ ಲಕ್ಷಿ??ೀ ಉಪಸ್ಥಿತರಿದ್ದರು.