ಮಾಧ್ಯಮ ಕ್ಷೇತ್ರ ಹೊಣೆಗಾರಿಕೆ, ಹೆಸರು ಕೀರ್ತಿ ತಂದು ಕೊಡಬಲ್ಲದು :ಡಾ ಗೋವಿಂದರಾಜು

ಹೊಸಪೇಟೆ ಏ2: ರಾತ್ರೋ-ರಾತ್ರಿ ಹೆಸರನ್ನು ಕೀರ್ತಿಯನ್ನು ನೀಡಲು ಹಾಗೂ ಒಂದೊಮ್ಮೆ ಪ್ರಪಾತಕ್ಕೂ ಕೆಡವಲು ಮಾಧ್ಯಮ ಕ್ಷೇತ್ರಕ್ಕೆ ಶಕ್ತಿಇದೆ ಈ ಹಿನ್ನೆಲೆಯಲ್ಲಿ ಹೊಣೆಗಾರಿಕೆಯೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಕನ್ನಡ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನಗಳ ನಿಕಾಯದ ಡೀನರಾದ ಡಾ.ಸಿ.ಆರ್.ಗೋವಿಂದರಾಜು ಅಭಿಪ್ರಾಯಪಟ್ಟರು.
ಕನ್ನಡ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪತ್ರಿಕೋದ್ಯಮ ಇತರೆ ಕ್ಷೇತ್ರಗಳಿಗಿಂತ ಭಿನ್ನವಾಗಿದ್ದು, ಹಲವಾರು ಉದ್ಯೋಗಾವಕಾಶಗಳನ್ನು ಸೃಷ್ಠಿಸುವ ಮಾದ್ಯಮ ಕ್ಷೇತ್ರ ಕೀರ್ತಿ ಅಪಕೀರ್ತಿಗಳನ್ನು ನೀಡಲು ಸಾಧ್ಯವಿದೆ ಎಂದರು. ಪತ್ರಕರ್ತರಾಗಲು ಹೊರಟಿರುವ ವಿದ್ಯಾರ್ಥಿಗಳು ತಾಳ್ಮೆ, ನಿರಂತರ ಶ್ರಮ ಮತ್ತು ಪ್ರಾಮಾಣಿಕತೆ ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಧ್ಯಯನಾಂಗದ ನಿರ್ದೇಶಕ ಡಾ.ಪಿ.ಮಹಾದೇವಯ್ಯ ಮಾತನಾಡಿ, ಕನ್ನಡ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗವು ಉತ್ತಮ ರೀತಿಯಲ್ಲಿ ಕೆಲಸ–ಕಾರ್ಯಗಳನ್ನು ನಿರ್ವಹಿಸುತ್ತಿದೆ. ಪಠ್ಯ ಮತ್ತು ಪ್ರಾಯೋಗಿಕ ಕೆಲಸ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ. ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಅದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಕುಲಸಚಿವ ಡಾ.ಎ.ಸುಬ್ಬಣ್ಣ ರೈ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಎಸ್.ವೈ.ಸೋಮಶೇಖರ್, ಕನ್ನಡ ಸಾಹಿತ್ಯ ವಿಭಾಗದ ಪ್ರಾಧ್ಯಾಪಕ ಡಾ. ವೆಂಕಟಗಿರಿ ದಳವಾಯಿ, ದೃಶ್ಯಕಲಾ ವಿಭಾಗದ ಡಾ. ಕೃಷ್ಣೇಗೌಡ ಮತ್ತು ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರಾದ ಲೋಕೇಶ ಎಸ್.ಕೆ., ಸಂತೋಷಕುಮಾರ್, ಕೆ.ಪದ್ಮಾವತಿ ಇತರರು ಪಾಲ್ಗೊಂಡಿ ತಮ್ಮ ಅನಿಸಿಕೆ ಹಂಚಿಕೊಂಡರು. .
ವಿದ್ಯಾರ್ಥಿನಿ ಈರವೇಣಿ ನಿರೂಪಿಸಿದರು. ವಿದ್ಯಾರ್ಥಿ ರಾಘವೇಂದ್ರ ಸ್ವಾಗತಿಸಿದರು. ಹನುಮಂತ ವಂದಿಸಿದರು.