ಮಾಧ್ಯಮದವರ ಕಾರ್ಯ ಶ್ಲಾಘನೀಯ – ತಿಪ್ಪರಾಜು ಹವಲ್ದಾರ್

ತಿಪ್ಪರಾಜು ಜನಸೇವಾ ಕೇಂದ್ರ : ಪತ್ರಕರ್ತರರಿಗೆ ಆಹಾರ ಕಿಟ್ ವಿತರಣೆ
ರಾಯಚೂರು.ಜು.೦೯- ಮಾಧ್ಯಮ ಮಿತ್ರರು ಹಗಲು, ರಾತ್ರಿ ಎನ್ನದೆ ಕ್ಷಣ ಕ್ಷಣದ ಮಾಹಿತಿಯನ್ನು ಜನತೆಗೆ ನೀಡಲು ಸದಾ ಮುಂದೆ ಇರುತ್ತಿದ್ದು, ಇವರ ಸಾಧನೆ ಅಪಾರವಾಗಿದೆ ಎಂದು ಮಾಜಿ ಗ್ರಾಮೀಣ ಶಾಸಕ ಹಾಗೂ ಬಿಜೆಪಿ ಪಕ್ಷದ ರಾಜ್ಯ ಎಸ್.ಟಿ ಮೋರ್ಚಾದ ರಾಜ್ಯಾಧ್ಯಕ್ಷರಾದ ತಿಪ್ಪರಾಜು ಹವಲ್ದಾರ್ ಅವರು ಹೇಳಿದರು.
ಅವರಿಂದು ನಗರದ ರಾಯಲ್ ಪ್ಯಾಲೇಸ್‌ನಲ್ಲಿ ತಿಪ್ಪರಾಜು ಜನಸೇವಾ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ಪತ್ರಕರ್ತರಿಗೆ ಆಹಾರ ಕಿಟ್ ವಿತರಿಸುವ ಕಾರ್ಯಕ್ರಮವನ್ನು ಮಾಧ್ಯಮ ಮಿತ್ರರಿಗೆ ಸನ್ಮಾನಿಸಿ ಮಾತನಾಡಿದ ಅವರು ಕೊರೊನಾ ಎರಡನೇ ಅಲೆಯಿಂದ ದೇಶವೇ ತತ್ತರಿಸಿದ್ದು, ಸಾಕಷ್ಟು ಜನರು ಈ ಸೋಂಕಿನಿಂದ ಮೃತಪಟ್ಟಿದ್ದಾರೆ.
ಕೋವಿಡ್ ನಿಂದ ಬಡವರಿಗೆ, ಮಧ್ಯಮ ವರ್ಗದವರಿಗೆ ತೊಂದರೆಯಾಗಿದ್ದು, ಇಂತಹ ಸಂಕಷ್ಟ ಸಂದರ್ಭದಲ್ಲಿ ನಮ್ಮ ಜೀವನ ಉಳಿಸಿಕೊಳ್ಳಲು ರಾಯಚೂರು ತಾಲೂಕಿನ ೯ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಆಹಾರ ಕಿಟ್ ವಿತರಿಸುವ ಕೆಲಸ ಮಾಡಿದ್ದೇನೆ.
ನಗರದಲ್ಲಿ ತಿಪ್ಪರಾಜು ಜನಸೇವಾ ಕೇಂದ್ರ ವತಿಯಿಂದ ಸಹಾಯವಾಣಿಯನ್ನು ಈಗಾಗಲೇ ಪ್ರಾರಂಭ ಮಾಡಿದ್ದೇವೆ. ಕೊರೊನ ಸೋಂಕಿತರಿಗೆ ಯಾವುದೇ ಸಮಸ್ಯೆ ೭೬೧೯೨೯೩೯೪೯ ಸಂಖ್ಯೆಗೆ ಕರೆ ಮಾಡಿದ ನಂತರ ತಕ್ಷಣವೇ ನಮ್ಮ ಪಕ್ಷದ ಕಾರ್ಯಕರ್ತರು ಆಗಮಿಸಿ ಅವರಿಗೆ ಸೇವೆಯನ್ನು ಮಾಡುತ್ತಾರೆ. ಇಂದು ಕೊರೊನ ವಾರಿಯರ್ಸ್ ಆಗಿ ಮಾಧ್ಯಮದವರು ಹಗಲು, ರಾತ್ರಿ ಎನ್ನದೆ ಸೇವೆ ಸಲ್ಲಿಸುತ್ತಿರುವ ಜನರಿಗೆ ಕ್ಷಣ ಕ್ಷಣದ ಮಾಹಿತಿಯನ್ನು ತಲುಪಿಸುವ ಕೆಲಸ ಮಾಡುತ್ತಿದೆ. ಆದ್ದರಿಂದ ಇಂದು ನಾನು ಸಣ್ಣ ಅಳಿಲು ಸೇವೆಯನ್ನು ಮಾಡಲು ಮುಂದಾಗಿದ್ದೇನೆ.
ಇಂದು ಸುಮಾರು ನಗರದ ಜನತೆಗೆ ಆಹಾರ ಕಿಟ್ ವಿತರಣೆ ಮಾಡಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ರಮಾನಂದ ಯಾದವ್, ಶಂಕರ ರೆಡ್ಡಿ, ಸುಲೋಚನಾ ಬಸವರಾಜ ಸ್ವಾಮಿ, ಜಗದೀಶ್ ವಕೀಲ, ವರಪ್ರಸಾದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.