ಮಾಧ್ಯಮದವರೊಂದಿಗೆ ಪೊಲೀಸ್ ಆಯುಕ್ತರ ಸಂವಾದ

ಮೈಸೂರು:ಮಾ:26: ನಗರ ಪೆÇಲೀಸ್ ಆಯುಕ್ತ ಡಾ.ಚಂದ್ರಗುಪ್ತರವರಿಂದ ಮಾಧ್ಯಮದವರೊಂದಿಗೆ ಸಂವಾದ ಕಾರ್ಯಕ್ರಮ.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಇಂದು ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮತ್ತು ಜಾಗೃತಿ ಕುರಿತು ಚರ್ಚೆ, ರಿಂಗ್ ರಸ್ತೆ ಅಪಘಾತ ಪ್ರಕರಣ ಕುರಿತು ಸ್ಪಷ್ಟನೆ ನೀಡಿದರಲ್ಲದೆ ಕಾನೂನು ಸುವ್ಯವಸ್ಥೆ ಮತ್ತು ಸುಗಮ ಸಂಚಾರ ಜಾಗೃತಿ ಕುರಿತು ಮಾತುಕತೆ ನಡೆಸಿದರು.
ಮೈಸೂರಿನಲ್ಲಿ ಸಂಚಾರ ನಿಯಮ ಉಲ್ಲಂಘನೆಯ 36 ಲಕ್ಷ ಕೇಸ್‍ಗಳು ಬಾಕಿ ಇವೆ. 2016ರಿಂದ ಇದುವರೆಗೆ 36 ಲಕ್ಷ ಕೇಸ್ ಬಾಕಿ ಉಳಿದಿವೆ. ಸರ್ಕಾರಕ್ಕೆ ದಂಡ ರೂಪದಲ್ಲಿ ಬರಬೇಕಾದ ಇಷ್ಟು ಆದಾಯ ಕುಂಠಿತ ಆಗಿರುವ ಬಗ್ಗೆ ಆಡಿಟ್ ಆಕ್ಷೇಪ ಕೂಡ ಬಂದಿತ್ತು. ಮೈಸೂರಿನಲ್ಲಿ ನಿತ್ಯವೂ 5000 ಸಂಚಾರ ನಿಮಯ ಉಲ್ಲಂಘನೆ ಕೇಸ್ ದಾಖಲಾಗುತ್ತಿವೆ.ಈ ಪೈಕಿ 500 ಕೇಸ್ ಪೆÇಲೀಸರಿಂದ ದಾಖಲಾಗುತ್ತಿದ್ದು, ಉಳಿದ 4500 ಕೇಸ್‍ಗಳು ಸಿಸಿ ಕ್ಯಾಮರಾ ಮತ್ತು ತಂತ್ರಜ್ಞಾನದ ಆಧಾರದ ಮೇಲೆ ದಾಖಲಾಗುತ್ತಿವೆ.
ಒಬ್ಬರ ಮೇಲೆ 100ಕ್ಕೂ ಅಧಿಕ ಕೇಸ್‍ಗಳಿದ್ದು, ಅವರು ಮೊದಲ ಉಲ್ಲಂಘನೆಯಲ್ಲೇ ದಂಡ ಕಟ್ಟಿದ್ದರೆ ಅಷ್ಟು ಕೇಸ್ ಆಗುತ್ತಿರಲಿಲ್ಲ ಎಂದರು.
ನಡು ರಸ್ತೆಯಲ್ಲಿ ಬಾಕಿ ಕೇಸ್ ಕ್ಲಿಯರ್ ಮಾಡಲು 5- 10 ಸಾವಿರ ಕಟ್ಟಿ ಅಂತ ಕೇಳಿದರೆ ಕಷ್ಟ ಆಗುತ್ತೆ. ನಮಗೂ ಹಾಗೆ ಕೇಳುವುದಕ್ಕೂ ಇಷ್ಟ ಇಲ್ಲ. ಆರ್‍ಟಿಒ ಇಲಾಖೆಯ ವೆಬ್‍ಸೈಟ್ ಲಿಂಕ್ ಮಾಡುವ ಮೂಲಕ ಬಾಕಿ ಕೇಸ್ ಕ್ಲಿಯರ್ ಮಾಡುವ ಪ್ರಯತ್ನ ಯಶಸ್ವಿಯಾಗಿದೆ. ಸ್ಥಳ ದಂಡ ಕಡಿಮೆ ಮಾಡಬೇಕು ಅನ್ನೋದು ನಮ್ಮ ಉದ್ದೇಶ ಎಂದು ವಿವರಿಸಿದರು.
ಮೈಸೂರು ರಿಂಗ್ ರಸ್ತೆ ಅಪಘಾತ ಪ್ರಕರಣ: ಇತ್ತೀಚೆಗೆ ನಡೆದ ಅಪಘಾತದ ಘಟನೆ ಸಂಬಂಧ ಶೀಘ್ರ ಸ್ಪಂದಿಸಿದ 112 ವಾಹನ ಸಿಬ್ಬಂದಿಗಳ ಆತ್ಮಸ್ಥೈರ್ಯ ಕುಂದದಂತೆ ನೋಡಿಕೊಳ್ಳಲು ಪ್ರಶಂಸೆ ಮಾಡಲಾಗಿದೆ. ಘಟನೆ ಸಂಬಂಧ ಸ್ಥಳದಲ್ಲಿದ್ದ ಸಿಬ್ಬಂದಿಗಳ ವಿಚಾರಣೆ ನಡೆಯುತ್ತಿದೆ. ಇನ್ನೂ ಯಾವುದೇ ಕ್ರಮ ಆಗಿಲ್ಲ. ಮುಂದೆ ಇಂತಹ ತಪ್ಪುಗಳನ್ನು ಮರುಕಳಿಸದಂತೆ ನೋಡಿಕೊಳ್ಳುತ್ತೇವೆ.
ನಗರದಲ್ಲಿ ಸ್ವಯಂ ತಪಾಸಣಾ ಕೇಂದ್ರ ಸ್ಥಾಪನೆ ಮಾಡುತ್ತೇವೆ. ಪ್ರಯೋಗಾರ್ಥವಾಗಿ ಒಂದು ತಿಂಗಳ ಕಾಲ ಈ ವ್ಯವಸ್ಥೆ ತರುತ್ತೇವೆ. ಎಷ್ಟು ಮಂದಿ ಸಾರ್ವಜನಿಕರು ಸ್ವತಃ ಬಂದು ತಪಾಸಣೆ ಮಾಡಿಸಿಕೊಳ್ಳುತ್ತಾರೆ ನೋಡೊಣ.
ಕಾರ್ಯಕ್ರಮದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಸುಬ್ರಮಣ್ಯ, ನಗರ ಕಾರ್ಯದರ್ಶಿ ರಂಗಸ್ವಾಮಿ ಉಪಸ್ಥಿತರಿದ್ದರು.