ಮಾಧ್ಯಮದವರಿಗೆ ಆರೋಗ್ಯ ತಪಾಸಣೆ

ಧಾರವಾಡ,ಡಿ 27: ಎಸ್.ಡಿ.ಎಂ ನಾರಾಯಾಣ ಹೃದಯಾಲಯ ವತಿಯಿಂದ ಇಂದು ಧಾರವಾಡದ ಖಾಸಗಿ ಹೊಟೇಲೊಂದರಲ್ಲಿ ಮಾದ್ಯಮದವರ ಹಾಗೂ ಅವರ ಕುಟುಂಬದವರಿಗೆ ಉಚಿತ ಹೃದಯರೋಗ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
ರಕ್ತ ತಪಾಸಣೆ, ರಕ್ತದೊತ್ತಡ, ಇಸಿಜಿ ಹಾಗೂ ಇಕೋ ತಪಾಸಣೆ ನಡೆಸಿ ಹೃದಯ ತಜ್ಞರೊಂದಿಗೆ ಸಮಾಲೋಚನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಎಸ್. ಡಿ. ಎಮ ನಾರಾಯಣ ಹಾರ್ಟ್ ಸೆಂಟರ್ ಹೃದಯ ರೋಗ ತಜ್ಞ ರಾದ ಡಾ. ರವಿ ಜೈನಾಪೂರ. ಸಾರ್ವಜನಿಕ ಸಂಪರ್ಕಾಧಿಕಾರಿಯಾದ ತಡಕೋಡ. ಮಹಾದೇವ ಪಾಟೀಲ. ರವಿಕುಮಾರ್ ಕಗ್ಗಣ್ಣವರ, ಜಾವೀದ್ ಆದೋನಿ, ಶಶಿಧರ ಬುದ್ನಿ, ಸೂರ್ಯಕಾಂತ ಶಿರೂರ, ಡಿ ಬಿ ಕಮ್ಮಾರ ರವರು ಇದ್ದರು.