ಮಾಧ್ಯಮಗಳು ಅಭಿವೃದ್ಧಿಗೆ ಪೂರಕವಾಗಿವೆ : ನಾಗನಗೌಡ ಕಂದಕೂರ

ಗುರುಮಠಕಲ್ :ಜು.26:ಸಂವಿಧಾನದ ನಾಲ್ಕನೇ ಅಂಗವಾಗಿರುವ ಪತ್ರಿಕೆ ಮಾಧ್ಯಮವು ರಾಜಕಾರಣಿಗಳಿಗೆ ಮಾರ್ಗದರ್ಶಕವಾಗಿ ಮತ್ತು ದೇಶದ ಅಭಿವೃದ್ಧಿಗೆ ಪೂರಕವಾಗಿ ಕಾರ್ಯ ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಶಾಸಕ ರಾದ ನಾಗನಗೌಡ ಕಂದಕೂರ ರವರು ಅಭಿಪ್ರಾಯ ಪಟ್ಟರು. ಅವರು ಗುರುಮಠಕಲ್ ತಾಲೂಕಿನ ನೂತನ ಪತ್ರಿಕಾಭವನದ ಉದ್ಘಾಟನೆ ಹಾಗೂ ಪತ್ರಿಕಾ ದಿನಾಚರಣೆಯ ಉದ್ಘಾಟನೆ ನೆರವೇರಿಸಿ ಮಾತನಾಡುತ್ತ ಜುಲೈ ತಿಂಗಳಲ್ಲಿ ವೈದ್ಯರ ದಿನಾಚರಣೆ ಮಾಡುತ್ತಲಿರುವುದು ಸಂತಸದ ಸಗಂತಿಯಾಗಿದೆ ಒಬ್ಬರು ಮನುಷ್ಯರಿಗೆ ಚಿಕಿತ್ಸೆ ನೀಡಿದರೆ ಇನ್ನೂಬ್ಬರು ಸಮಾಜಕ್ಕೆ ಚಿಕಿತ್ಸೆ ನೀಡುತ್ತಾರೆ ಎಂದರು ಇವರಿಬ್ಬರಿಂದ ಇಂದು ಸಮಾಜ ಉತ್ತಮವಾಗಿರಲು ಸಾಧ್ಯ ವಾಗಿದೆ ಎಂದರು. ಉಪನ್ಯಾಸಕರಾಗಿ ಆಗಮಿಸಿದ್ದ ಸೇಡಂ ತಾಲೂಕಿನ ವರದಿಗಾರರು ಅವಿನಾಶ ಬೊರಂಚಿ ಅವರು ಪತ್ರಿಕಾರಂಗ ಸಮಾಜದ ಅಂಕುಡೊಂಕುಗಳನ್ನು ತಿದ್ದಿ ನಿಜವಾಗಿಯೂ ಎಲ್ಲರನ್ನೂ ನಿತ್ಯ ಎಚರಿಸುವಲ್ಲಿ ಜವಾಬ್ದಾರಿಯುತ ವಾಗಿ ಪತ್ರಿಕೆ ಮಾಧ್ಯಮಗಳು ಕೆಲಸದಲ್ಲಿ ತೊಡಗಿವೆ ಎಂದರು. ಜಿಲ್ಲಾಧ್ಯಕ್ಷರಾದ ಮಲ್ಲಪ್ಪ ಸಂಕಿನ್ ಅವರು ಮಾತನಾಡುತ್ತ ಯಾದಗಿರಿ ಜಿಲ್ಲೆಯಲ್ಲಿ ವೃತ್ತಿ ನಿರತ ಪತ್ರಕರ್ತರನ್ನು ಗುರುತಿಸುವ ಕಾರ್ಯವನ್ನು ಜಿಲ್ಲಾ ಘಟಕ ಮಾಡುತ್ತಲಿದ್ದು ಅದಕ್ಕೆ ಜಿಲ್ಲೆಯ ಎಲ್ಲಾ ಪತ್ರಕರ್ತರ ಸಹಕಾರವು ಕೂಡ ಇದೆ ಎಂದರು . ಇದೆ ವೇಳೆ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪರಿಷತ್ ಸದಸ್ಯ ರಾಘವೇಂದ್ರ ಕಾಮಟಗಿ. ಸಂಘದ ಶಾಹಪೂರ ಅಧ್ಯಕ್ಷ ರಾದ ನಾರಾಯಣ ಚಾರ್ಯ ಸಾಗರ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಗುರುಮಠಕಲ್ ತಾಲೂಕ ಸಂಘದ ಅಧ್ಯಕ್ಷ ರಾದ ಚನ್ನಕೇಶವುಲು ಗೌಡ ಅವರು ಅಧ್ಯಕ್ಷ ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಸಂಪಾದಕರಾದ ಕುಮಾರಸ್ವಾಮಿ.ಮುಖ್ಯ ಅತಿಥಿಗಳಾಗಿ ಪುರಸಭೆ ಅಧ್ಯಕ್ಷ ರಾದ ಪಾಪಣ್ಣ ಮನ್ನೆ. ತಾಲೂಕ ನೌಕರರ ಸಂಘದ ಅಧ್ಯಕ್ಷ ರಾದ ಸಂತೋಷ ಕುಮಾರ್ ನೀರೆಟಿ. ತಹಸೀಲ್ದಾರರು ಶರಣಬಸವ ರಾಣಪ್ಪ. ಪಿ ಐ ದೌಲತ್ ಎನ್ ಕೆ. ಪುರಸಭೆ ಯ ಮುಖ್ಯ ಅಧಿಕಾರಿ ಗಳು ಶ್ರೀ ಮತಿ ಭಾರತಿ. ಜಿಲ್ಲಾ ಕಾರ್ಯಕಾರಿಣಿ ಸಧಸ್ಯರಾದ ರವಿಂದ್ರ ಗೌಡ. ಸಿದ್ಧ ರಾಮ ಸ್ವಾಮಿ. ಬಾಬಾ ಚಿಂತಕುಂಟಿ.ನಾಗರಾಜ ಪಂತಗೆ. ಮಲ್ಲಿಕಾರ್ಜುನ ಪಾಟೀಲ ಬಸವರಾಜ ಸಂಜನೋಳ. ಫಹದ್ ಮರ್ಪಷಿ.ನ ವಾಜಖಾನ್. ದಯಾನಂದ. ಎಂ ಬಿ ನಾಯಿಕನ್ ಕಾರ್ಯಕ್ರಮ ನಿರೂಪಿಸಿದರು. ಬಸವರಾಜ ಅಲೆಮನಿ ಪ್ರಾಸ್ತಾವಿಕ ಮಾತನಾಡಿದರು. ಅನಿಲ್ ಬಸುದೆ ಸ್ವಾಗತಿಸಿದರು. ಬಸಪ್ಪ ಸಂಜನೊಳ ವಂದಿಸಿದರು. ರಾಜಲಿಂಗಪ್ಪ ಸಜ್ಜನ್ ಅವರು ಪ್ರಾಥನೆಗೈದರು.