ಮಾಧವ ಭವನ, ಪ್ರಸಾದ ನಿಲಯ ಉದ್ಘಾಟನೆ ಮಾ.19ಕ್ಕೆ

ಕಲಬುರಗಿ,ಮಾ.17- ನಗರದ ರುಕ್ಮತೋಲಾ ದರ್ಗಾ ರಸ್ತೆ ಮಾಧವಾನಂದ ಬಡಾವಣೆ ಶ್ರೀಸದ್ಗುರು ಮಾಧವಾನಂದ ಪ್ರಭುಜಿ ಇಂಚಗೇರಿ ಶಾಖಾ ಮಠದಲ್ಲಿ ಮಾ.19ರ ಬೆಳಿಗ್ಗೆ 10ಕ್ಕೆ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರು, ಶ್ರೀಮಾಧವ ಭವನ ಹಾಗೂ ಜಗನ್ನಾಥ ಮಹಾರಾಜರ ಪ್ರಸಾದ ನಿಲಯದ ಉದ್ಘಟನಾ ಸಮಾರಂಭಕ್ಕೆ ಚಾಲನೆ ನೀಡುವರು.
ಇಂಚಗೇರಿ ಮಠದ ಪೂಜ್ಯ ರೇವಣಸಿದ್ದೇಶ್ವರ ಮಹಾರಾಜರು, ಪೂಜ್ಯ ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು, ಚವದಾಪೂರಿ ಹಿರೇಮಠದ ಪೂಜ್ಯ ಡಾ.ರಾಜೇಶಖರ ಶಿವಾಚಾರ್ಯರ ಸಮ್ಮುಖದಲ್ಲಿ ಜರುಗುವ ಈ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಜೇರಟಗಿ, ರಾಜು ತಳವಾರ, ಪ್ರಭುಲಿಂಗ ತಳಕೇರಿ, ಪ್ರವೀಣ ಕಾಸರ ಸೇರಿದಂತೆ ಗಣ್ಯಮಾನ್ಯರು, ಹಿತೈಷಿಗಳು ಭಾಗವಹಿಸಲಿದ್ದಾರೆ ಎಂದು ಇಂಚಗೇರಿ ಶಾಖಾಮಠ ಪ್ರಕಟಣೆಯಲ್ಲಿ ತಿಳಿದೆ.