ಮಾದೇಶ್ವರ ಬೆಟ್ಟಕ್ಕೆ ಭಕ್ತರ ಪ್ರವೇಶ ನಿಬರ್ಂಧ

ಹನೂರು: ಏ.22: ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆಯನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ನೂತನವಾಗಿ ಹೊರಡಿಸಿರುವ ಮಾರ್ಗ ಸೂಚಿಗಳನ್ವಯ ತಾಲ್ಲೂಕಿನ ಪ್ರಸಿದ್ಧ ಯಾತ್ರಾಸ್ಥಳ ಮಲೆ ಮಾದೇಶ್ವರ ಬೆಟ್ಟದ ದೇವಾಲಯದಲ್ಲಿ ಬುಧವಾರದಿಂದ (21-4-2021) ಮೇ 5ರವರೆಗೆ ಸಾರ್ವಜನಿಕರು, ಭಕ್ತರಿಗೆ ಪ್ರವೇಶ ನಿಬರ್ಂಧಿಸಲಾಗಿದೆ.
ದೇವಾಲಯದಲ್ಲಿ ದಾಸೋಹ, ಲಾಡು ಪ್ರಸಾದ, ತೀರ್ಥ, ನೈವೇದ್ಯ ಪ್ರಸಾದ ವಿತರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಚಿನ್ನದತೇರಿನ ಸೇವೆ ಹಾಗೂ ಇತರೆ ಸೇವೆಗಳು ಸಾರ್ವಜನಿಕರಿಗೆ ಮುಕ್ತ ಇಲ್ಲ ಆನ್ಲೈನ್ ಬುಕಿಂಗ್ ಮಾಡುವುದಕ್ಕೆ ಅವಕಾಶವಿದೆ.
ಭಕ್ತಾಧಿಗಳು ವಸತಿಗೃಹ, ಕಾಲೇಜು, ಡಾರ್ಮಿಟರಿ ಹಾಗೂ ಯಾವುದೇತೆರದ ಸ್ಥಳದಲ್ಲಿ ವಾಸ್ತವ್ಯ ಹೂಡುವುದನ್ನು ಪ್ರಾಧಿಕಾರ ನಿಬರ್ಂಧಿಸಿದೆ.
ಅಭಿಷೇಕ ಮತ್ತು ಇತರೆ ಸೇವೆಗಳನ್ನು (ಚಿನ್ನದತೇರು ವಾಹನ, ರುದ್ರಾಕ್ಷಿ ವಾಹನ, ಹುಲಿವಾಹನ, ಅಭಿಷÉೀಕ) ಸೇರಿದಂತೆಇತರ ವಿಶೇಷÀ ಪೂಜೆಗಳನ್ನು ಭಕ್ತರು ಆನ್ಲೈನ್ ಬುಕ್ ಮಾಡಿದ್ದರೆ ಅವರ ಹೆಸರಿನಲ್ಲಿ ಅವರ ಅನುಪಸ್ಥಿತಿಯಲ್ಲಿ ಪೂಜೆ ನೆರವೇರಿಸಲಾಗುವುದು. ಆದರೆ ದೇವಾಲಯದಿಂದ ನೀಡುವ ಕಳಸ, ಲಾಡು ಇತ್ಯಾದಿ ಪ್ರಸಾದಗಳನ್ನು ಕಳಿಸಲಾಗುವುದಿಲ್ಲ ಎಂದು ಶ್ರೀ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ತವ್ಯ ನಿಮಿತ್ತ ಪ್ರಾಧಿಕಾರದ ಅನುಮತಿ ಮೇರೆಗೆ ಬರುವ ಅಧಿಕಾರಿ ಸಿಬ್ಬಂದಿ ಹಾಗೂ ಗಣ್ಯರಿಗೆ ಅವಕಾಶವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದಲ್ಲದೆ ವ್ಯಾಪಾರಸ್ಥರು ಬೆಳಗಿನ ಸಮಯದಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡಲಾಗಿದೆ.