
ನಟ ವಿನೋದ್ ಪ್ರಭಾಕರ್ ಅಭಿನಯದ ಮುಂಬರುವ ಚಿತ್ರ “ಮಾದೇವ” ನಿಗೆ ನಾಯಕಿಯಾಗಿ ಕರಾವಳಿ ಬೆಡಗಿ ಸೋನಲ್ಮಾಂಥೆರೋ ಜೋಡಿಯಾಗಿ ಆಯ್ಕೆಯಾಗಿದ್ದಾರೆ.
ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರಕ್ಕೆ ಸೋನಲ್ ಮೊಂಥೆರೋ ಚಿತ್ರತಂಡ ಸೇರಿಕೊಂಡಿದ್ದಾರೆ.ಆಕೆಯ ಕೈಯಲ್ಲಿ ಸಾಲು ಸಾಲು ಚಿತ್ರಗಳಿವೆ. ಇದರ ನಡುವೆ ವಿನೋದ್ ಪ್ರಭಾಕರ್ ನಾಯಕಿಯಾಗಿದ್ದಾರೆ.
ವಿನೋದ್ ಹಾಗೂ ಸೋನಲ್ ರಾಬರ್ಟ್ ಚಿತ್ರದಲ್ಲಿ ತನು-ರಾಘವ ಪಾತ್ರದ ಮೂಲಕ ಪ್ರೇಕ್ಷಕರ ಮನೆ ಗೆದ್ದಿದ್ದರು. ಇದೀಗ ಈ ಜೋಡಿ ಜೊತೆಯಾಗಿ ನಟಿಸುತ್ತಿರುವುದು ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ.
ನವೀನ್ ಬಿ ರೆಡ್ಡಿ ನಿರ್ದೇಶನದ ” ಮಾದೇವ” ಚಿತ್ರದಲ್ಲಿ ಸೋನಲ್ 80ರ ದಶಕದ ಮಧ್ಯಮವರ್ಗದ ಹುಡುಗಿಯಾಗಿ ಬಣ್ಣ ಹಚ್ಚಲಿದ್ದಾರೆ.ಎಮೋಷನಲ್ ಹಾಗೂ ಮಾಸ್ ಎಲಿಮೆಂಟ್ ಕಂಟೆಂಟ್ ಹೊಂದಿರುವ ಮಾದೇವ ಚಿತ್ರ ರೈಲು ಮತ್ತು ಜೈಲಿನ ಹಿನ್ನೆಲೆಯಲ್ಲಿ ನಡೆಯಲಿದೆ. ವಿನೋದ್ ಪ್ರಭಾಕರ್ ಗೆ ಈ ಹಿಂದಿನ ಪಾತ್ರಗಳಿಗಿಂತ ಚಿತ್ರದಲ್ಲಿ ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ.
ಚಿತ್ರವನ್ನು ಶಿವಮೊಗ್ಗ, ಧಾರವಾಡ ಮತ್ತು ಹೈದರಾಬಾದ್ನಲ್ಲಿ ಚಿತ್ರೀಕರಣ ನಡೆಸಲು ತಂಎ ಸಿದ್ದತೆ ಮಾಡಿಕೊಂಡಿದೆ.ಚಿತ್ರದಲ್ಲಿ ಹಿರಿಯ ನಟಿ ಶ್ರುತಿ, ಪೋಷಕ ಕಲಾವಿದ ಅಚ್ಯುತ್ ಕುಮಾರ್, ಕಾಕ್ರೋಚ್ ಸುಧಿ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದು, ಬಾಲಕೃಷ್ಣ ತೋಟ ಕ್ಯಾಮೆರಾ, ಪ್ರದ್ಯೋಥನ್ ಸಂಗೀತ ಚಿತ್ರಕ್ಕಿದೆ.
ಗಾಯತ್ರಿ ರಾಜೇಶ್ ಹಾಗೂ ಲವ್ ಗುರು ಸುಮಂತ್ ನಿರ್ಮಾಣದ ಮಾದೇವ ಚಿತ್ರದ ಚಿತ್ರೀಕರಣದ ಭರದಿಂದ ಸಾಗಿದೆ.