ಮಾದಿಗ ಸಮುದಾಯದ ಗ್ರಾ.ಪಂ. ಅಧ್ಯಕ್ಷ ಉಪಾಧ್ಯಕ್ಷರಿಗೆ ಸನ್ಮಾನ

ಸಿರವಾರ,ಆ.೨೨-
ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕಿನಲ್ಲಿ ನೂತನವಾಗಿ ಗ್ರಾಮ ಪಂಚಾಯತಿಗಳಲ್ಲಿ ಆಯ್ಕೆಯಾದ ಮಾದಿಗ ಸಮುದಾಯದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಮಾದಿಗ ಸಮಾಜದ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.
ಹಿಂದುಳಿದ ವರ್ಗಗಳ ಜನರ ಧ್ವನಿಯಾಗಿ, ಗ್ರಾಮೀಣ ಪ್ರದೇಶಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ, ಜನರ ಸಮಸ್ಯೆಗಳನ್ನು ನಿವಾರಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಎಂಆರ್ ಹೆಚ್‌ಎಸ್ ಜಿಲ್ಲಾಧ್ಯಕ್ಷ ಅಬ್ರಾಹಂ ಹೊನ್ನಟಗಿ ನೂತನ ಗ್ರಾ.ಪಂ.ಅಧ್ಯಕ್ಷ-ಉಪಾಧ್ಯಕ್ಷರಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಪ.ಪಂ.ಸದಸ್ಯ ಅಜಿತ್ ಕುಮಾರ್ ಹೊನ್ನಟಗಿ, ಜಯಪ್ಪ ಕೆಂಪು, ಚನ್ನಪ್ಪ ಬೂದಿನಾಳ, ಜೆ.ಭೀಮರಾಯ, ಮುತ್ತಣ್ಣ ಚಾಗಭಾವಿ, ಬಸವರಾಜ ಗಚ್ಚಿನಮನೆ, ಮಲ್ಲಪ್ಪ ಜಿಂದಾವಲಿ, ಮಲ್ಲಪ್ಪ ದೊಡ್ಮನಿ, ಯಲ್ಲಪ್ಪ ನವಲಕಲ್, ದಿಡ್ಡಿಬಸವ ಶಾಖಾಪುರ, ಬಸವರಾಜ ಜಂಬಲದಿನ್ನಿ, ಚನ್ನಪ್ಪ ಹುಣಚೇಡ, ರಮೇಶ ಮಲ್ಲಟ, ಬಸವರಾಜ ಶಾಖಾಪುರ, ಹನ್ಮಂತ ಗುಡದಿನ್ನಿ ಸೇರಿದಂತೆ ಅನೇಕರಿದ್ದರು.