ಮಾದಿಗ ಸಮುದಾಯಕ್ಕೆ ನಿಗಮ ಮಂಡಳಿಗಳಲ್ಲಿ ಸ್ಥಾನಮಾನ ನೀಡಲಿ

ರಾಯಚೂರು,ಜು.೯- ರಾಯಚೂರು ಜಿಲ್ಲಾ ಮಾದಿಗ ಸಮುದಾಯದ ಹಿರಿಯ ಸಂಘಟಕರಿಗೆ ನಿಗಮ ಮಂಡಳಿಗಳಿಗೆ ನಾಮನಿರ್ದೇಶನ ಮಾಡಬೇಕು ಎಂದು ಎಂ.ಆರ್.ಎಚ್.ಎಸ್ ಜಿಲ್ಲಾಧ್ಯಕ್ಷ ಹನುಮಂತಪ್ಪ ಮನ್ನಾಪೂರ ಸರಕಾರಕ್ಕೆ ಒತ್ತಾಯಿಸಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,ಜಿಲ್ಲೆಯ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾದ ಲಿಂಗಸೂಗೂರು ಕ್ಷೇತ್ರದಲ್ಲಿ ಕಳೆದ ೨೦ ವರ್ಷಗಳಿಂದ ಪರಿಶಿಷ್ಟ ಜಾತಿಗಳ ಬಹುಸಂಖ್ಯಾತ ಮಾದಿಗ ಸಮುದಾಯಕ್ಕೆ ಎಲ್ಲಾ ರಾಜಕೀಯ ಪಕ್ಷಗಳು ಶಾಸಕರ ಟಿಕೆಟ್ ವಂಚನೆ ಮಾಗಿವೆ.ಆದ್ದರಿಂದ ಸರ್ಕಾರ ಈ ಜಿಲ್ಲೆಯ ಮಾದಿಗ ಸಮುದಾಯಕ್ಕೆ ರಾಜಕೀಯ ಕ್ಷೇತ್ರದ ಇತರೆ ನಿಗಮ, ಮಂಡಳಿಗಳ ಸ್ಥಾನಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.
೧೯೯೭ ರಿಂದ ಆರಂಭಗೊಂಡ ಜಿಲ್ಲೆಯ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೋರಾಟದ ಹಿರಿಯ ಶ್ರೇಣಿ ನಾಯಕರಾದ ಶಿವಪುತ್ರಪ್ಪ ಬೇರಿ, ಜೆ. ಬಿ.ರಾಜು,ಎಸ್.ಮಾರೆಪ್ಪ ವಕೀಲರು, ಹೇಮರಾಜ ಅಸ್ಕಿಹಾಳ,ಶಿವಪ್ಪ ಬಲ್ಲಿದ,ಹಣಮಂತ ಮನ್ನಾಪೂರ,ದಿ.ತಿಮ್ಮಪ್ಪ ಗುಂಜಳ್ಳಿ ಆಂಜಿನೆಯ್ಯ ಉಟ್ಕೂರು, ಶಿವರಾಯ ಅಕ್ಕಾರಕಿ ಸೇರಿ ಇನ್ನು ಅನೇಕ ಹೋರಾಟಗಾರರು ಹೋರಾಟಕ್ಕೆ ಜೀವತುಂಬಿ ಮುನ್ನಡೆಸಿದ್ದಾರೆ.
ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೋರಾಟಕ್ಕೆ ರಾಯಚೂರು ಜಿಲ್ಲೆಯು ನಾಯಕತ್ವ ನೀಡಿದ ಕೀರ್ತಿ ಇದೆ.ಕಾರಣ ಜಿಲ್ಲೆಯ ಹಿರಿಯ ಹಿರಿಯ ಸಂಘಟಕರಾದ ಹೇಮರಾಜ ಅಸ್ಕಿಹಾಳ ಅವರಿಗೆ ನಿಗಮ ಮಂಡಳಿಗಳಲ್ಲಿ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ನರಸಿಂಹಲು, ಎ.ರಾಮು,ಅಬ್ರಹಾಂ,ರವಿಕುಮಾರ ಗಬ್ಬೂರು, ಅಂಜಿನೆಯ್ಯ ಉಟ್ಕೂರು ಸೇರಿದಂತೆ ಇತರರು ಉಪಸ್ಥಿತರಿದ್ದರು.