
ಕಾಳಗಿ :ಮಾ.26: ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಸಚಿವ ಸಂಪುಟ ಸಭೇಯಲ್ಲಿ ನ್ಯಾಯಮೂರ್ತಿ ಎಜೆ ಸದಾಶಿವ ಆಯೋಗದ ವರದಿಯಂತೆ ಎಡಗೈ ಸಮೂದಾಯಕ್ಕೆ ಶೇ.6% ರಷ್ಠು ಒಳಮೀಸಲಾತಿಯನ್ನು ಒದಗಿಸುವಂತೆ ಕೇಂದ್ರಕ್ಕೆ ಸೀಫಾರಸ್ಸು ಮಾಡಿರುವುದರಿಂದ ರಾಜ್ಯದ ಸಮಗ್ರ ಮಾದಿಗರ 30ವರ್ಷಗಳ ಬೇಡಿಕೆಯನ್ನು ಇಡೇಸಿದ್ದು, ಮಾದಿಗರ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಮಾದಿಗ ಸಮಾಜದ ಹಿರಿಯ ಮುಖಂಡ ಗೋಪಾಲರಾವ ಕಟ್ಟಿಮನಿ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಾಳಗಿ-ಚೊಂಚೋಳಿ ತಾಲೂಕಿನ ಮಾದಿಗ ಸಮಾಜದ ಪ್ರಮುಖರು ಸೇರಿಕೊಂಡು ಶನಿವಾರ ಏರ್ಪಡಿಸಲಾಗಿರುವ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು, ಮಾತನಾಡುತ್ತಿದ್ದರು.
ಸ್ವಾತಂತ್ರ್ಯ ಸಿಕ್ಕು 76ವರ್ಷಗಳು ಗತಿಸುತ್ತಿದ್ದರೂ ಕೂಡ ಮಾದಿಗ ಸಮಾಜಕ್ಕೆ ಸಾಮಾಜೀಕ ನ್ಯಾಯವನ್ನು ಸಿಕ್ಕಿರಲಿಲ್ಲ. ಸುದೀರ್ಘ ಕಾಲ ಕಳೆದ ಮೇಲಾದರೂ ತುಳಿತಕ್ಕೋಳಗಾಗಿರುವ ಮಾದಿಗರನ್ನು, ಒಳಮೀಸಲಾತಿಗೆ ಸೀಪಾರಸ್ಸು ಮಾಡುವ ಮೂಲಕ ಬಿಜೆಪಿ ಸರ್ಕಾರ ಈ ಸಮಾಜಕ್ಕೆ ಸಂವಿಧಾನ ಬದ್ಧ ನ್ಯಾಯ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದ ಅವರು, ಪಕ್ಷ-ಭೇದ ಮರೆತು ತಾಲೂಕಿನ ಎಲ್ಲಾ ಗ್ರಾಮಗಳಿಂದ ಆಗಮಿಸಿರುವ ನೂರಾರು ಜನ ಮಾದಿಗ ಸಮಾಜದ ಮನಸುಗಳು ಬಿಜೆಪಿ ಸರ್ಕಾರಕ್ಕೆ ಹರಸಿ-ಹಾರೈಸಿದರು.
ರಾಜ್ಯ ಸರ್ಕಾರ ಕೇಂದ್ರಕ್ಕೆ ಮಾಡಿರುವ ಸೀಫಾರಸ್ಸು, ಶೀಘ್ರದಲ್ಲಿ ಕೇಂದ್ರ ಅನುಮೋದಿಸಿ, ಕಾರ್ಯರೂಪಕ್ಕೆ ಬರುವಂತಾಗಲಿ ಎಂದ ಸವiಜ ಮುಖಂಡರು, ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡೆಗೆ ಅಭಿಮಂದಿಸಿದರು.
ಪಟ್ಟಣದ ರಾಮನಗರದಲ್ಲಿರುವ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ವಿಶ್ವಗುರು ಬಸವೇಶ್ವರರ ಮೂರ್ತಿಗಳಿಗೆ ಮಾಲಾರ್ಪಣೆ ಮಾಡಿ, ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿಕೊಂಡ ಮಾದಿಗ ಮುಖಂಡರು, ಬಸವರಾಜ ಮೊಮ್ಮಾಯಿ ಅವರಿಗೆ ಜೋರಾದ ಜೈ…ಕಾರ ಹಾಕಿ, ಕೇಂದ್ರ ಮಂತ್ರಿ ನಾರಾಯಣಸ್ವಾಮಿ, ಗೋವಿಂದ ಕಾರಜೋಳ, ಎಚ್. ಆಂಜನೇಯ ಸೇರಿದಂತೆ ವಿವಿಧ ಗಣ್ಯರ ಹೆಸರಿನಲ್ಲಿ ಜೈ..ಘೋಷಗಳನ್ನಿಕ್ಕುತ್ತ ಹರ್ಷವ್ಯಕ್ತಪಡಿಸಿದರು.
ಎ.ಜೆ ಸದಾಶಿವ ಆಯೋಗದ ಜಾರಿಗಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ ಮಾಡಿ ಪ್ರಾಣ ಕಳೆದುಕೊಂಡ ಸಮಾಜದ ಜನತೆಗೆ ಶ್ರದ್ದಾಂಜಲಿ ಸಲ್ಲಿಸಿದರು.
ಎಗಗೈ ಒಳಮೀಸಲಾತಿಗಾಗಿ ಹೋರಾಟ ಮಾಡಿರುವ ಸಾವಿರಾರು ಜನ ಸಮಾಜದ ಮುಖಂಡರುಗಳ ಮೇಲೆ ಆಗಿರುವ ಕೇಸ್ ಗಳನ್ನು ತೆಗೆಯುವಂತೆ ಸರ್ಕಾರಕ್ಕೆ ಒತ್ತಾಯಿಸಿದರು.
ತಾಲೂಕು ಮಾದಿಗ ಸಮಾಜದ ಹಿರಿಯ ಮುಖಂಡ ರೇವಣಸಿದ್ದ ಕಟ್ಟಿಮನಿ, ಸುಂದರ ಡಿ.ಸಾಗರ, ಶಾಮರಾವ ಕೊರವಿ, ಸೂರ್ಯಕಾಂತ ಕಟ್ಟಿಮನಿ ಕಾಳಗಿ, ಹರೀಶ ಸಿಂಗೆ, ವಿನೋದ ಓಂಕಾರ ಹೊಡೆಬೀರನಳ್ಳಿ, ರವಿಸಿಂಗೆ, ಮಹೇಶ ಭರತನೂರ, ಶರಣು ರಾಜಾಪೂರ, ಹಣಮಂತ ಕೋಡ್ಲಿ, ಸಾಬಣ್ಣ ಓಂಕಾರ, ಹಣಮಂತ ಮೆಲಿನಕೇರಿ, ಕರಣ ರಾಜಾಪೂರ, ಸುನೀಲ ಸಲಗರ, ರಮೇಶ ಮೆಲಿನಕೇರಿ, ಅಜೀತ್ ರಟಕಲ್, ಕೃಷ್ಣಾ ಬೆಡಸೂರ, ಮಾರ್ಷಲ್ ಮಂಗಲಗಿ ಸೇರಿದಂತೆ ಅನೇಕರಿದ್ದರು.