ಮಾದಿಗ ಸಮಾಜದಿಂದ ಬಸವ ಜಯಂತಿ ಆಚರಣೆ

ಔರಾದ :ಎ.24: ಪಟ್ಟಣದಲ್ಲಿ ತಾಲೂಕು ಮಾದಿಗ ಸಮಾಜದ ವತಿಯಿಂದ ಭಕ್ತಿ ಭಂಡಾರಿ ವಿಶ್ವಗುರು ಬಸವಣ್ಣನವರ 890 ನೇ ಜಯಂತಿ ಆಚರಿಸಲಾಯಿತು.

ವಿಶ್ವ ಗುರು ಜಗಜ್ಯೋತಿ ಬಸವಣ್ಣನವರು 12ನೇ ಶತಮಾನದಲ್ಲಿ ವಚನಗಳ ಮೂಲಕ ಸಮಾಜದಲ್ಲಿರುವ ಅಂಧಕಾರ ದೂರ ಮಾಡಿದವರು, ಜಾತಿ ವ್ಯವಸ್ಥೆ ಹೊಗಲಾಡಿಸಿ ಜಾತಿಗಿಂತ ನೀತಿ ದೊಡ್ಡದು ಎಂದು ಪ್ರತಿಪಾದಿಸಿದವರು ಅವರ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ನಾವೆಲ್ಲರೂ ಬದುಕಿದಾಗ ಜೀವನ ಸಾರ್ಥಕ ಎಂದು ಮಾದಿಗ ಸಮಾಜ ಮುಖಂಡ ಬಂಟಿ ದರ್ಬಾರೆ ನುಡಿದರು.

ಈ ಸಂದರ್ಭದಲ್ಲಿ ಮಾದಿಗ ಸಮಾಜ ಮುಖಂಡ ಸುಧಾಕರ ಕೊಳ್ಳೂರ ಅವರು ಮಾತನಾಡಿ ಜಗಜ್ಯೋತಿ ಬಸವಣ್ಣನವರು ಶೋಷಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕೊಟ್ಟಂತ ಮಹಾನುಭಾವರು ಅಂಧಕಾರದಲ್ಲಿದ್ದ ಸಮಾಜಗಳಿಗೆ ಬೆಳಕು ನೀಡಿದ ಮಹಾ ಮಾನವತಾವಾದಿ ಬಸವಣ್ಣನವರ ಜಯಂತಿ ನಮ್ಮ ಸಮಾಜದಿಂದ ಪ್ರತಿ ವರ್ಷ ವಿಜೃಂಭಣೆಯಿಂದ ಆಚರಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ಪತ್ರಕರ್ತ ಶರಣಪ್ಪ ಚಿಟ್ಮೆ, ಲಿಂಗಾಯತ ಸಮಾಜ ಮುಖಂಡರಾದ ರಾಜಕುಮಾರ ಎಡವೆ, ಬಾಲಾಜಿ ದಾಮಾ, ತಾಲೂಕು ಮಾದಿಗ ಸಮಾಜದ ಅಧ್ಯಕ್ಷ ಸ್ವಾಮಿದಾಸ ಮೇಘಾ, ಅಶೋಕ ದರಬಾರೆ, ಬಾಬುರಾವ ಮಾನಗೇರಾ, ಮಾದಿಗ ವೆಲ್ಫೇರ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಜಾನ್ಸನ್, ಸಮಾಧಾನ, ಅನಿಲ, ಲಖನೌ, ಅನಿಲ ನೀಡೋದಾ, ಪ್ರಶಾಂತ, ಉಮಾಕಾಂತ ಸೋನೆ, ಸಾಗರ, ವಿಜಯ ಕುಮಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.