ಮಾದಿಗ ಮೀಸಲಾತಿ ಹೋರಾಟ ಸಮಿತಿಯಿಂದ


ಬಳ್ಳಾರಿ, ಏ.14 ಭಾರತಕ್ಕೆ ಸಂವಿಧಾನ ರಚನೆ ಸಾಮಾಜಿಕ ನ್ಯಾಯ ಹಾಗೂ ಆಸ್ಪೃಶ್ಯತೆ ನಿವಾರಣೆ ಮತದಾನದ ಹಕ್ಕು ನೀಡಿದ ಜನರಿಗೆ ನಿಜವಾದ ಹೋರಾಟಗಾರ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ರವರು ಎಂದು ಎಂ.ಆರ್.ಹೆಚ್.ಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಎ.ಈಶ್ವರಪ್ಪ ಅವರು ಕರೆ ನೀಡಿದರು.
ಇಂದು ನಗರದ ಅಂಬೇಡ್ಕರ್ ರವರ 132 ನೇ ಜಯಂತಿ ಪ್ರಯುಕ್ತ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುತ್ತ, ಬಾಬಾ ಸಾಹೇಬ್ ಅಂಬೇಡ್ಕರ್ ರವರು ದೀನ ದಲಿತರ ಅಲ್ಪಸಂಖ್ಯಾತರ ಹಕ್ಕುಗಳಿಗೆ ಹೋರಾಟ ಮಾಡಿ ಸಮಾಜದಲ್ಲಿ ಸಾಮಾಜಿಕ ನ್ಯಾಯ ಒದಗಿಸಿದರು. ಆದರೆ ಇಂದು ಮೇಲ್ವರ್ಗದ ಜನರು ಇದನ್ನು ತಿರಸ್ಕರಿಸಿ ನಮ್ಮಗಳನ್ನು ಹೀನಾಯ ಸ್ಥಿತಿಯಲ್ಲಿ ಬದುಕುವಂತೆ ನೋಡಿಕೊಳ್ಳುತ್ತಿರುವುದು. ವಿಷಾದನೀಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಸಿ.ಸೋಮಶೇಖರ್, ಕಾರ್ಯಾಧ್ಯಕ್ಷರಾದ ಹೆಚ್.ತಿಪ್ಪೇಸ್ವಾಮಿ, ಬಿ.ಗುರುಸಿದ್ಧಪ್ಪ, ಉಪಾಧ್ಯಕ್ಷರಾದ ರಾಮಣ್ಣ ತೊಂಡಲಂ, ಮುಖಂಡರುಗಳಾದ ಇ.ಮೇಘನಾಥ, ಜಿ.ಸಾಗರ್, ರಾಮು, (ಎಸ್.ಕೆ.ಪಿ. ಕಾಲೋನಿ) ಬಾಬು, ಮೌನೇಶ್, ಅರ್ಜುನ್, ಮುಕ್ಕಣ್ಣ, ಮುಂತಾದವರು ಉಪಸ್ಥಿತರಿದ್ದರು.