ಮಾದಿಗ ದಂಡೋರ ಹೋರಾಟಕ್ಕೆ ಸಿಕ್ಕ ಜಯ

ರಾಯಚೂರು ಮಾ ೨೭
ಮಾದಿಗ ದಂಡೋರ (ಒಖPS)ರಾಷ್ಟ್ರೀಯ ನಾಯಕರಾದ ಮಂದಕೃಷ್ಣ ಮಾದಿಗ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ೧೯೯೭ ರ ಅಕ್ಟೊಬರ್ ೧೩ನೇ ತಾರೀಕು ಶಿವಾಜಿ ನಗರದಲ್ಲಿ ಪ್ರಾರಂಭವಾಯಿತು ಅಲ್ಲಿಂದ ಇಲ್ಲಿಯವರೆಗೂ ಹೋರಾಟ ಮಾಡುತ್ತಿದ್ದೇವೆ ಆದರೆ ಯಾವುದೇ ಸರ್ಕಾರ ತಲೆಗೆ ಹಾಕಿಕೊಳ್ಳಲಿಲ್ಲ ಆದರೆ ಬಿಜೆಪಿ ಸರ್ಕಾರ ನಮ್ಮ ಮಾದಿಗ ದಂಡೋರ ಹೋರಾಟಕ್ಕೆ ಮಾನ್ಯತೆ ನೀಡಿ ಮೀಸಲಾತಿ ನೀಡಿದೆ ಇದು ನಮ್ಮ ಸಮಾಜಕ್ಕೆ ಅತ್ಯಂತ ದೊಡ್ಡ ಜಯವಾಗಿದೆ ಎಂದು ಮಾದಿಗ ದಂಡೋರದ ರಾಜ್ಯಾಧ್ಯಕ್ಷರಾದ ಬಿ ನರಸಪ್ಪ ದಂಡೋರವರು ತಿಳಿಸಿದರು.
ಇಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ದಿನಾಂಕ.೨೪/೦೩/೨೦೨೩ರಂದು ನ್ಯಾಯಮೂರ್ತಿ ಎ. ಜೆ. ಸದಾಶಿವ ಅಯೋಗ ಶಿಫಾರಸ್ಸಿನಂತೆ ಎಸ್ ಸಿ ಸಮುದಾಯಗಳಾದ ಎಡಗೈ ಸಮುದಾಯಕ್ಕೆ ಶೇ ೬%ಬಲಗೈ ಸಮುದಾಯಕ್ಕೆ ಶೇ ೫.೫%ಸ್ಪರ್ಶ ಜಾತಿಗಳಿಗೆ ಶೇ ೪.೫%ಇತರೆ ಜಾತಿಗಳಿಗೆ ಶೇ ೧%ರಂತೆ ಒಳ ಮೀಸಲಾತಿ ಅಂಗೀಕರಿಸಿ ವರ್ಗಿಕರಣವನ್ನು ಕೇಂದ್ರ ಸರ್ಕಾರಕ್ಕೆ ಸಚಿವ ಸಂಪುಟದಲ್ಲಿ ಶಿಫಾರಸ್ಸು ತೀರ್ಮಾನ ಕೈಗೊಂಡಿದ್ದಾರೆ ಎಂದು ತಿಳಿಸಿದರು.
ಕಳೆದ ೨೮ವರ್ಷಗಳಿಂದ ಸುದೀರ್ಘವಾಗಿ ನಾವು ಮಾಡಿದ ಹೋರಾಟಕ್ಕೆ ನ್ಯಾಯ ದೊರತಿದ್ದು, ರಾಜ್ಯ ಸರ್ಕಾರ ಆಡಳಿತದಲ್ಲಿ ಒಳಮೀಸಲಾತಿ ಬೇಡಿಕೆ ಈಡೇರಿಸಲಾಗಿದೆ, ಇದಕ್ಕೆ ಕಾರಣಭೂತರಾದ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ರವರು, ಕರ್ನಾಟಕ ರಾಜ್ಯ ನೀರಾವರಿ ಸಚಿವರಾದ ಗೋವಿಂದ್ ಕಾರಜೋಳ ಹಾಗೂ ಕೇಂದ್ರ ಸಚಿವರಾದ ಎ. ನಾರಾಯಣ ಸ್ವಾಮಿ ರವರು ಇದಕ್ಕೆ ಸಹಕರಿಸಿದ ಎಲ್ಲರಿಗೂ ನಮ್ಮ ಜಿಲ್ಲಾ ಸಮಿತಿಯಿಂದ ತುಂಬಾ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲಾಗಿದೆ ಎಂದು ಜಿಲ್ಲಾಧ್ಯಕ್ಷರಾದ ಮಾನಪ್ಪ ಮೇಸ್ತ್ರಿ ಅವರು ತಿಳಿಸಿದರು.
ಈ ಸಂಧರ್ಭದಲ್ಲಿ ಮಾದಿಗ ದಂಡೋರದ ತಾಲೂಕು ಅಧ್ಯಕ್ಷರಾದ ದುಳ್ಳಯ್ಯಗುಂಜಹಳ್ಳಿ,ಜಿಲ್ಲಾ ಯುವ ಅಧ್ಯಕ್ಷರಾದ ರಂಜಿತ್ ದಂಡೋರ, ಶಿವಕುಮಾರ್ ಬಿಟ್ಟು,ಜಕ್ರಪ್ಪ ಹಂಚಿನಾಳ, ಗೋವಿಂದ, ರವಿ ದೇವನಪಲ್ಲಿ, ಹನುಮಂತು, ಗ್ಯಾರಿಕೇಶ್ ಯರಗೇರಾ ಇದ್ದರು.