ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿಯಿಂದ ಧರಣಿ

ಭಾಲ್ಕಿ :ಸೆ.16: ಜಸ್ಟಿಸ್ ಸದಾಶಿವ ಆಯೋಗ ವರದಿ ಜಾರಿಗೆ ಒತ್ತಾಯಿಸಿ ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ಒತ್ತಾಯಿಸಿದೆ. ಈ ಕುರಿತು ಪಟ್ಟಣದ ಶಾಸಕ ಈಶ್ವರ ಖಂಡ್ರೆ ಮನೆ ಎದುರು ಸೋಮವಾರ ಸಮಿತಿಯ ಪ್ರಮುಖರು ಧರಣಿ ನಡೆಸಿ, ಸುಪ್ರೀಂ ಕೋರ್ಟ್‍ನ ಐದು ಸದಸ್ಯ ಪೀಠ ಮೀಸಲಾತಿಯಲ್ಲಿ ಒಳಮೀಸಲಾತಿ ವರ್ಗೀಕರಣ ಮಾಡಲು ಸಕಾರಾತ್ಮಕವಾಗಿ ಸ್ಪಂದಿಸಿದೆ. ಇದು ಆಶಾದಾಯಕ ತೀರ್ಪು ಆಗಿದ್ದು, ಈ ವರದಿ ಜಾರಿ ಮಾಡಲು ಅನುಕೂಲಕರ ವಾತಾವರಣವಾಗಿದೆ. ಹಾಗಾಗಿ ಸೆ.21 ರಿಂದ ಆರಂಭವಾಗಲಿರುವ ರಾಜ್ಯ ವಿಧಾನ ಸಭೆಯ ಅಧಿವೇಶನದಲ್ಲಿ ಸ್ಥಳೀಯ ಶಾಸಕ ಖಂಡ್ರೆ ಅವರು ಸದಾಶಿವ ಆಯೋಗ ವರದಿಯ ಬಗ್ಗೆ ಚರ್ಚಿಸಿ, ಸದಾಶಿವ ಆಯೋಗ ವರದಿ ಜಾರಿಗೆ ತರಲು ಬೆಂಬಲ ವ್ಯಕ್ತ ಪಡಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾದಿಗ ದಂಡೋರ ಹೋರಾಟ ಸಮಿತಿ ತಾಲೂಕು ಘಟಕದ ಅಧ್ಯಕ್ಷ ದತ್ತಾತ್ರಿ ಜ್ಯೋತಿ, ಪ್ರಮುಖರಾದ ಸಚಿನ ಅಂಬೆಸಾಂಗವಿ, ಲಕ್ಷ್ಮಣ ಮುದಾಳೆ, ಸತೀಶ ನಿಟ್ಟೂರೆ, ಪುಟರಾಜ ನೇಳಗೆ, ಸುಧಾಕರ ಕಿಸಕಿಂದಾ, ರಜಕುಮಾರ ಸೂರ್ಯವಂಶಿ, ದೇವಿದಾಸ ರೇಷ್ಮೆ, ಬಸವರಾಜ ಸೈನೂರೆ, ಪ್ರೇಮಕುಮಾರ್, ರಾಜಶೇಖರ ರೇಷ್ಮೆ, ಶ್ಯಾಮ ತಮಗ್ಯಾಳ, ರಾಜಕುಮಾರ ಭಟಾರೆ, ಸಂಜು ಲಂಜವಾಡ್, ಲಕ್ಷ್ಮಣ ಬೋರಾಳೆ, ಅಶೋಕ ಮೇತ್ರೆ, ಸತೀಶ ಸೂರ್ಯವಂಶಿ, ಶಾಲಿವಾನ ಮದಕಟ್ಟಿ, ರವಿ ಕೆರೂರೆ, ಸತೀಶ ಮಾಳಗೆ, ಗುರುದಾಸ ಹುಪಳೇಕರ್, ರಾಜಕುಮಾರ ಡಾವರಗಾಂವ, ಅನೀಲಕುಮಾರ್, ಸುಲೇಮನ ಸಾಗರ್, ಸಂಜೀವಕುಮಾರ ಜ್ಯೋತಿ, ಓಂಕಾರ ಶಂಕರ್, ರಾಜಕುಮಾರ ಭೀಮರಾವ, ಭಾಸ್ಕರ್ ಸೈನೂರೆ, ಜೀವನ ಕೋರುರ್, ಸಚಿನ ಮೊರೆ, ಶಾಂತಕುಮಾರ ಮೊರೆ, ಲಾಲಪ್ಪ ಮಲ್ಲಪ್ಪ, ಪ್ರವೀಣ ಜೈವಂತ, ಧನರಾಜ ರತ್ನಪ್ಪ, ಸೂರ್ಯಕಾಂತ ಕಾಶಿನಾಥ, ಮಲ್ಲಣ್ಣ ಘಾಳೆಪ್ಪ ಸೇರಿದಂತೆ ಹಲವರು ಇದ್ದರು.