ಮಾದಿಗರಿಗೆ ಸಚಿವ ಸ್ಥಾನ ನೀಡಲು ಒತ್ತಾಯ

ಮುದಗಲ್,ಮೇ.೨೬-
ಕಲ್ಯಾಣ ಕರ್ನಾಟಕದ ಮಾದಿಗ ಸಮಾಜದ ವತಿಯಿಂದ ಕರ್ನಾಟಕ ರಾಜ್ಯದ ನೂತನ ಮುಖ್ಯ ಮಂತ್ರಿಗಳಾಗಿ ಆಯ್ಕೆ ಯಾಗಿರುವ ಸಿದ್ದರಾಮಯ್ಯನವರಿಗೆ ಹಾಗೂ ನೂತನ ಉಪ ಮುಖ್ಯ ಮಂತ್ರಿಗಳಾಗಿ ಆಯ್ಕೆಯಾಗಿರುವ ಡಿ.ಕೆ.ಶಿವಕುಮಾರರವರಿಗೆ ಲಿಂಗಸೂಗುರು ತಾಲೂಕಿನ ದಲಿತ ಸಂಘರ್ಷ ಸಮಿತಿ ವತಿಯಿಂದ ಹಾರ್ದಿಕ ಅಭಿನಂದನೆಗಳು.
ಮಾದಿಗರಿಗೆ ಸಚಿವ ಸ್ಥಾನ ಹಾಗೂ ಲಿಂಗಸೂರು ಕ್ಷೇತ್ರದ ಮಾಜಿ ಶಾಸಕ ಡಿ.ಎಸ್ ಹೂಲಿಗೇರಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಲು ಒತ್ತಾಯಿಸಿದರು.
ಲಿಂಗಸೂರು ದಲಿತ ಸಂಘರ್ಷ ಸಮಿತಿಯ ತಾಲೂಕು ಘಟಕದ ಅಧ್ಯಕ್ಷ ಶರಣಪ್ಪ ಕಟ್ಟಿಮನಿ ಹಾಗೂ ದಲಿತ ಸಂಘರ್ಷ ಸಮಿತಿಯ ಮುದಗಲ್ ಸಂಚಾಲಕರಾದ ಬಸವರಾಜ ಬಂಕದ ಮನಿ ಅವರು ಒತ್ತಾಯಿಸಿದರು.
ನಂತರ ಮಾತನಾಡಿದ ಅವರು ಮಾದಿಗರಿಗೆ ಸಚಿವ ಸ್ಥಾನ ಹಾಗೂ ಲಿಂಗಸೂರು ಕ್ಷೇತ್ರದ ಡಿ.ಎಸ್ ಹೂಲಿಗೇರಿ ಅವರು ಮತದಾರರ ಆಶೀರ್ವಾದಿಂದ ಪ್ರಯತ್ನಕ್ಕೆ ಮೀರಿ ಮತ ಹಾಕಿದರು. ಸ್ವಲ್ಪವೇ ಅಂತರದಲ್ಲಿ ಸೋಲು ಅನುಭವಿಸಬೇಕಾಯಿತು.
ಅದಕ್ಕಾಗಿ ನಿಗಮದ ಅಧ್ಯಕ್ಷರಾಗಿ ನೇಮಕ ಮಾಡಿ ಹಾಗೂ ಮಾದಿಗರಿಗೆ ತಮ್ಮ ಘನ ಸರಕಾರದಲ್ಲಿ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಿ ಮುಂದೆ ವಿಧಾನ ಪರಿಷತ್ತಿನ ಸದಸ್ಯರಾಗಿ ನೇಮಕ ಮಾಡಬೇಕೆಂದು ಹಾಗೂ ಇನ್ನೋರ್ವ ಲಿಂಗಸೂರು ಮಾಜಿ ಶಾಸಕರಾದ ಹೂಲಿಗೇರಿ ಅವರಿಗೆ ಒಂದು ಒಳ್ಳೆ ನಿಗಮ ಮಂಡಳಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಿ, ಏಕೆಂದರೆ ವಿಧಾನ ಸಭೆಗೆ ನಡೆದ ಚುನಾವಣೆಯಲ್ಲಿ ಮಾದಿಗ ಸಮಾಜದ ಮತಗಳು ಕಾಂಗ್ರೆಸ್ ಪಕ್ಷದ ಪರವಾಗಿ ಮತ ಹಾಕಿಸಲು ಅವರ ಶ್ರಮ ಬಹಳವಿದೆ ಮತ್ತು ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಲಾಭವಾಗುವದರಿಂದ ಮಾದಿಗ ಸಮಾಜದ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರಿಗೆ ಹೆಚ್ಚಿನ ಸ್ಥಾನಮಾನ ನೀಡಬೇಕಾಗಿ ಎ.ಐ.ಸಿ.ಸಿ. ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹಾಗೂ ನೂತನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಲ್ಲಿ, ಕೆ.ಪಿ.ಸಿ.ಸಿ. ಅಧ್ಯಕ್ಷರು ಹಾಗು ನೂತನ ಉಪ ಮುಖ್ಯ ಮಂತ್ರಿಗಳಾದ ಡಿ.ಕೆ.ಶಿವಕುಮಾರ ಇವರಲ್ಲಿ ಪತ್ರಿಕೆ ಮೂಲಕ ಲಿಂಗಸೂರು ತಾಲೂಕಿನ ದಲಿತ ಸಂಘರ್ಷ ಸಮಿತಿಯ ಸಂಚಾಲಕರಾದ ಶರಣಪ್ಪ ಕಟ್ಟಿಮನಿ ಹಾಗೂ ದಲಿತ ಸಂಘರ್ಷ ಸಮಿತಿಯ ಮುದಗಲ್ ಘಟಕದ ಸಂಚಾಲಕರಾದ ಬಸವರಾಜ ಬಂಕದಮನಿ ಒತ್ತಾಯಿಸಿದ್ದಾರೆ.