
ಲಿಂಗಸೂಗೂರ,ಏ.೨೦- ಸಾರ್ವತ್ರಿಕ ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಪ್ರಬಲ ಸ್ಥಳೀಯ ಆಕಾಂಕ್ಷಿ ಮಾದಿಗ ಸಮಾಜದ ಹೆಚ್.ಬಿ.ಮುರಾರಿಯವರಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ಕಟ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಮಾದಿಗ ಸಮಾಜದ ವಿರೋಧಿಗಳಾದ ಮಹಾ ವಂಚಕರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಮತ್ತು ಜಿಲ್ಲೆಯ ಎ. ವಸಂತಕುಮಾರ ಇವರ ಭಾವಚಿತ್ರಕ್ಕೆ ಕಸಬಾರಿಗೆಯಿಂದ ಹೊಡೆದು, ಚಪ್ಪಲಿ ಹಾರ ಹಾಕಿ ಬಸ್ ನಿಲ್ದಾಣ ಸರ್ಕಲ್ ದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಅವರ ಪ್ರತಿಕೃತಿ ದಹನ ಮಾಡಲಾಯಿತು.
ಕ್ಷೇತ್ರದಲ್ಲಿ ಮಾದಿಗ ಸಮಾಜದ ಜನಸಂಖ್ಯೆ ಬಹಳಷ್ಟು ಇರುವುದರಿಂದ ಇಲ್ಲಿನ ಜನರ ಅಪೇಕ್ಷೆಯ ಮೇರೆಗೆ ಸ್ಥಳೀಯವರಾದ ಹೆಚ್.ಬಿ ಮುರಾರಿಯವರಿಗೆ ಟಿಕೆಟ್ ನೀಡಿದಲ್ಲಿ ಸಂಪೂರ್ಣ ಬೆಂಬಲದೊಂದಿಗೆ ಈ ಸಾರಿ ಚುನಾವಣೆ ಎದುರಿಸಲು ಒಂದು ಸಾರಿ ಅವಕಾಶ ಕೊಡದೆ ಇರುವುದು ನಮ್ಮ ಸಮಾಜಕ್ಕೆ ದೊಡ್ಡ ನೋವಿನ ಸಂಗಾತಿ, ಈ ಕ್ಷೇತ್ರದಲ್ಲಿ ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯಾರ್ಥಿಯನ್ನು ಶತ ಸಿದ್ದವಾಗಿ ಸೋಲಿಸಲು ಪಣತೋಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನಾಗರಾಜ ತಿಪ್ಪಣ್ಣ, ಶ್ರೀಕಾಂತ ಮುರಾರಿ, ಪಂಪಾಪತಿ ಪರಂಗಿ, ವಿಜಯಕುಮಾರ ಹಟ್ಟಿ, ಹನುಮಂತ ಜಾಲಿಬೆಂಚಿ ಬಸಲಿಂಗಪ್ಪ ಐದನಾಳ ಹನುಮಂತ ಬೊಮ್ಮನಾಳ ನೀತಿ ರಾಜ್ ಹಾಗೂ ಸಮಾಜದ ಮುಖಂಡರು ಇದ್ದರು.