ಮಾದಿಗರಿಗೆ ಕಾಂಗ್ರೆಸ್ ಟಿಕೆಟ್ ನೀಡದಿದ್ದರೆ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋಲು

ಲಿಂಗಸುಗೂರ,ಏ.೦೪- ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಟಿಕೆಟ್ ಮಾದಿಗರಿಗೆ ನೀಡದಿದ್ದರೆ ವಿಧಾನಸಭಾ ಚುನಾವಣೆಯಲ್ಲಿ ಮಾದಿಗ ಸಮುದಾಯ ಮುಖಂಡರು ಕಾರ್ಯಕರ್ತರು ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸುವುದು ಖಚಿತ ಎಂದು ಮಾದಿಗ ಸಮುದಾಯ ಮುಖಂಡ ವಿಜಯ ಕುಮಾರ್ ಹಟ್ಟಿ ಇವರು ನಿನ್ನೆ ನಡೆದ ಬೃಹತ್ ಕಾಲ್ನಡಿಗೆ ಜಾಥಾ ಮೂಲಕ ಕಾಂಗ್ರೆಸ್ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷದ ನಿಷ್ಠಾವಂತ ನಾಯಕ ಎಚ್.ಬಿ ಮುರಾರಿ ಇವರಿಗೆ ಟಿಕೆಟ್ ನೀಡಬೇಕು ಎಂಬುದು ಸಮುದಾಯದ ಮುಖಂಡರ ಆಶಯವಾಗಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಏನಾದರೂ ಮಾದಿಗ ಸಮುದಾಯಕ್ಕೆ ಟಿಕೆಟ್ ವಂಚನೆ ಮಾಡಿದರೆ ಲಿಂಗಸುಗೂರು ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ ಯಾಗುವದಂತು ಖಂಡಿತ ಹಾಗೂ ಇಲ್ಲಿರುವ ಮಾದಿಗರ ಸ್ವಾಭಿಮಾನ ಕೆಣಬೇಡ ಎಂದು ಹೊರಾಟಗಾರರು ಎಚ್ಚರಿಕೆ ನೀಡಿದರು .
ಕಾಂಗ್ರೆಸ್ ಹೇಳುವಂತೆ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದು ಮೂಲ ಅಸ್ಪುಶ್ಯರಿಗೆ ಪ್ರಾತಿನಿದ್ಯ ನೀಡುತ್ತದೆ ಎಂಬುದು ಈಗಾಗಲೇ ಹೈಕಮಾಂಡ್ ನಲ್ಲಿ ಹರಿದಾಡುತ್ತಿದೆ ಎಂಬುದು ಈಗಾಗಲೇ ಕ್ಷೇತ್ರದಲ್ಲಿ ಸಂಚಲನವನ್ನು ಸೃಷ್ಟಿಸಿದೆ. ಆದರು ಕೂಡ ಕಾಂಗ್ರೆಸ್ ಪಕ್ಷವು ರಾಯಚೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗಳ ಗೆಲುವು ಸಾಧಿಸಬೇಕಾದರೆ ಮಾದಿಗ ಜನಾಂಗದ ನಾಯಕ ಎಚ್.ಬಿ ಮುರಾರಿಗೆ ಟಿಕೆಟ್ ಕೊಡಬೇಕು ಎಂದು ಶರಣಪ್ಪ ಕಟ್ಟಿಮನಿ ಮುದಗಲ್ ಕಾಂಗ್ರೆಸ್ ಹೈಕಮಾಂಡ್ ಗೆ ಮನವಿ ಮಾಡಿದರು.
ಎರಡನೇ ಪಟ್ಟಿಯಲ್ಲಿ ಎಚ್.ಬಿ ಮುರಾರಿಗೆ ಟಿಕೆಟ್ ನೀಡಬೇಕು ಎಂಬುದು ಮಹಿಳೆಯರ ಕೂಗು ಆಗಿದೆ
ಕ್ಷೇತ್ರದ ಅಭಿವೃದ್ಧಿಗೆ ಸಾಮಾಜಿಕ ಕಳಕಳಿ ಹಾಗೂ ಸರ್ವ ಜನಾಂಗದ ಶಾಂತಿಯ ತೋಟ ಸಂದೇಶ ಸಾರುವ ನಾಯಕ ಎಚ್.ಬಿ ಮುರಾರಿಗೆ ಟಿಕೆಟ್ ನೀಡಲು ಹೈಕಮಾಂಡ್ ಮುಂದಾಗಬೇಕು ಎಂದು ಸಂಕೇತ ಗದಾರ, ಮೋಕ್ಷಮ್ಮ, ಮೂಕಮ್ಮ, ಆರೋಗ್ಯಮ್ಮ ಸೇರಿದಂತೆ ಇತರರು ಮಹಿಳೆಯರು ಇವರು ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ಗೆ ಒತ್ತಾಯಿಸಿದ್ದಾರೆ.