ಮಾದಿಗರಿಗೆ ಕಾಂಗ್ರೆಸ್ ಟಿಕೆಟ್ ಸಿಗುವುದು ಖಚಿತ- ಎಚ್.ಬಿ. ಮುರಾರಿ

ಲಿಂಗಸುಗೂರು,ಮಾ.೧೯- ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಬಹುತೇಕವಾಗಿ ಎಡಗೈ ಸಮುದಾಯಕ್ಕೆ ಕಾಂಗ್ರೆಸ್ ಟಿಕೆಟ್ ನೀಡುವದು ಖಚಿತವಾಗಿದೆ ಎಂದು ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ ಎಚ್.ಬಿ ಮುರಾರಿ ಇವರು ಇಂದು ಬೆಳಿಗ್ಗೆ ಸಂಜೆ ವಾಣಿ ವರದಿಗಾರರೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಮಾತನಾಡಿ ಮಾಹಿತಿ ನೀಡಿದರು.
ಲಿಂಗಸುಗೂರ ಮೀಸಲು ಕ್ಷೇತ್ರದಲ್ಲಿ ಎಡಗೈ ಸಮುದಾಯಕ್ಕೆ ಟಿಕೆಟ್ ನೀಡಲು ಕೇಂದ್ರ ನಾಯಕರು ಹಾಗೂ ರಾಜ್ಯ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬಂದು ಮೂಲ ಅಸ್ಪುಶ್ಯರಿಗೆ ಟಿಕೆಟ್ ನೀಡಲು ಮುಂದಾಗಿದೆ ಎಂದು ಮುರಾರಿ ಇವರು ಹೇಳಿದರು.
ಈಗಾಗಲೇ ದೆಹಲಿಯಲ್ಲಿ ಬೀಡುಬಿಟ್ಟಿರುವ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳಲ್ಲಿ ಒಬ್ಬರಾದ ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಹಾಗೂ ಟಿಕೆಟ್ ಆಕಾಂಕ್ಷಿ ಎಚ್.ಬಿ ಮುರಾರಿ ಇವರು ತಮ್ಮದೇ ಆದ ರೀತಿಯಲ್ಲಿ ರಾಜಕೀಯ ಪ್ರಭಾವ ಬಳಸಿ ತಂತ್ರಗಾರಿಕೆ ಮುಂದುವರಿಸಿದ್ದಾರೆ.
ಶತಾಯಗತಾಯ ಪ್ರಯತ್ನಿಸಿ ಟಿಕೆಟ್ ಗಿಟ್ಟಿಸಿಕೊಳ್ಳಲು ಪ್ರಬಲವಾಗಿ ಪೈಪೋಟಿ ನಡೆಸಿದ್ದಾರೆ ರಾಜ್ಯ ಮಾದಿಗ ಸಮುದಾಯ ಮುಖಂಡರ ಮೂಲಕ ಒತ್ತಡವನ್ನು ಹಾಕಿ ಕ್ಷೇತ್ರದ ಟಿಕೆಟ್ ಖಚಿತ ಪಡಿಸಿಕೊಳ್ಳಲು ದೆಹಲಿ ತೆರಳಿದ್ದಾರೆ. ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಂಗಳಕ್ಕೆ ಇವರ ಹೆಸರು ಶಿಫಾರಸು ಮಾಡಿದ್ದಾರೆ ಎಂಬುದು ಕ್ಷೇತ್ರದ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ .
ಎಚ್.ಬಿ ಮುರಾರಿ ಇವರು ಕಾಂಗ್ರೆಸ್ ಪಕ್ಷದ ಸಾಧನೆಗಳು ಜನರಿಗೆ ತಿಳಿಸಲು ಕಳೆದ ಮೂರು ನಾಲ್ಕು ತಿಂಗಳ ಹಿಂದೆ ಕ್ಷೇತ್ರದಲ್ಲಿ ಭಾರತ ಜೋಡೊ ಯಾತ್ರೆ ಮೂಲಕ ಮನೆ ಮನೆಗೆ ತೆರಳಿ ಮತದಾರನ ಮುಂದೆ ಕಾಂಗ್ರೆಸ್ ಪಕ್ಷದ ಸಂಘಟನೆ ಮಾಡಿ ಕಾಂಗ್ರೆಸ್ ಪಕ್ಷವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಪಾದಯಾತ್ರೆ ಕೈಗೊಂಡು ಲಿಂಗಸುಗೂರು ತಾಲೂಕಿನ ಮೂಲೆ ಮೂಲೆಗಳಲ್ಲಿ ಪಾದಯಾತ್ರೆ ಕೈಗೊಂಡು ಲಿಂಗಸುಗೂರು ಕ್ಷೇತ್ರದ ಜನರಿಗೆ ಮನದಟ್ಟು ಮಾಡುವ ಮುಖಾಂತರ ಹೊರಾಟ ಮಾಡಿ ಕ್ಷೇತ್ರದ ಜನರ ಬಾಯಲ್ಲಿ ಈ ಬಾರಿ ಅಸ್ಪುಷ್ಯರಿಗೆ ಟಿಕೆಟ್ ನೀಡಿದರೆ. ಪಕ್ಷಕ್ಕೆ ಗೆಲುವು ಸುಲಭ ಎಂದು ಕ್ಷೇತ್ರದಲ್ಲಿ ಮಾತುಗಳು ಹರಿದಾಡುತ್ತಿದೆ.
ವಲಸೆ ಬಂದ ರಾಜಕಾರಣಿಗಳ ಆಮಿಷಕ್ಕೆ ಬಲಿಯಾಗದೆ ನಿರಾಳವಾಗಿ ಇರಬೇಕು ಎಂದು ಹೇಳುತ್ತೆನೆ. ಕ್ಷೇತ್ರದ ಜನರು ಯಾವುದೇ ಕಾರಣಕ್ಕೂ ಎದೆಗುಂದದೆ ಧೈರ್ಯದಿಂದ ಇರಲು ಮನವಿ ಮಾಡುತ್ತೇನೆ ಎಂದರು.
ಕ್ಷೇತ್ರಾದ್ಯಂತ ಪಕ್ಷದ ಬಲವರ್ಧನೆಗೆ ಸಾಕಷ್ಟು ಶ್ರಮಿಸಿದ್ದೇನೆ ಎಂಬುದು ಹೈಕಮಾಂಡ್ ನನ್ನ ರಿಪೋರ್ಟ್ ಕಾರ್ಡ್ ತರಿಸಿಕೊಂಡು ಸರ್ವೇ ಕಾರ್ಯ ಮಾಡಿದ್ದಾರೆ ಇದಕ್ಕಾಗಿಯೇ ಪಕ್ಷದ ಸಂಘಟನೆ ಮಾಡಿದ ವ್ಯಕ್ತಿಗೆ ಮೊದಲ ಆದ್ಯತೆ ನೀಡಲಾಗುತ್ತದೆ ಎಂಬುದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಯುಗಾದಿ ಹಬ್ಬದ ನಂತರ ಬರುವ ದಿನಗಳಲ್ಲಿ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಎಂದು ಘೋಷಣೆ ಮಾಡುತ್ತಾರೆ ಎಂದು ನಂಬಿಕೆ ಇದೆ ಮುಂದಿನ ಚುನಾವಣೆಯಲ್ಲಿ ಅಸ್ಪುಶ್ಯರಿಗೆ ಟಿಕೆಟ್ ನೀಡಲು ರಾಜ್ಯ ಮಾದಿಗ ಸಮಾಜದ ರಾಜ್ಯ ನಾಯಕರಾದ ಕೆ. ಎಚ್. ಮುನಿಯಪ್ಪ ನೇತೃತ್ವದ ನಿಯೋಗ ಹಾಗೂ ರಾಜ್ಯ ಸಭಾ ಸದಸ್ಯ ಎಲ್. ಹನುಮಂತಯ್ಯ ಎಚ್. ಆಂಜನೇಯ ಆರ್.ಬಿ ತಿಮ್ಮಾಪುರ ಇವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವರಿಕೆ ಮಾಡಿಕೊಡುವ ಮೂಲಕ ಮೂಲ ಅಸ್ಪೃಶ್ಯರಿಗೆ ಎಡಗೈ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಇದಕ್ಕಾಗಿ ಮಾದಿಗ ಸಮುದಾಯ ಜನರು ಯಾವುದೇ ಕಾರಣಕ್ಕೂ ಎದೆಗುಂದದೆ ಧೈರ್ಯದಿಂದ ಇರಲು ಎಚ್.ಬಿ.ಮುರಾರಿ ಇವರು ಕ್ಷೇತ್ರದ ಮತದಾರರಿಗೆ ಮಾದಿಗ ಸಮಾಜಕ್ಕೆ ಮನವಿ ಮಾಡಿದ್ದಾರೆ.