ಮಾದಾರ ಚೆನ್ನಯ್ಯ ಪಲ್ಲಕ್ಕಿ ಮಹೋತ್ಸವ

ಮಾದನಹಿಪ್ಪರಗಿ: ಸೆ.22:ಗ್ರಾಮದಲ್ಲಿ ನಿನ್ನೆ ಗುರುವಾರದಂದು ಕಾಯಕಯೋಗಿ ಮಾದಾರ ಚೆನ್ನಯ್ಯನವರ ಪಲ್ಲಕ್ಕಿ ಮಹೋತ್ಸವ ಸಡಗರ ಸಂಭ್ರಮದಿಂದ ಜರುಗಿತು. ಶಿವಲಿಂಗೇರ್ಶವರ ವಿರಕ್ತ ಮಠದ ಅಭಿನವ ಶಿವಲಿಂಗ ಸ್ವಾಮಿಗಳು ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿದರು. ಬಸಲಿಂಗಯ್ಯ ಸ್ವಾಮಿ, ಸಿದ್ದರಾಮ ಅರಳಿಮಾರ, ಸಿದ್ದು ತೋಳನೂರ, ನಿಲೇಶ ತೋಳನೂರ ಪರಮೇಶ್ವರ ಮಾಶಾಳಕರ್,ಶಿವಲಿಂಗಪ್ಪ ಮಾತಂಗಿ ಇದ್ದರು.