ಮಾದಾರ ಚನ್ನಯ್ಯ ಅರಿವು ಪೀಠ ತ್ರಿಪುರಾಂತ ವತಿಯಿಂದ 25ನೇ ಮಾದಾರ ಚನ್ನಯ್ಯ ಉತ್ಸವ

ಬಸವಕಲ್ಯಾಣ:ಜ.23: 12ನೇ ಶತಮಾನದ ಬಸವ ಪೂರ್ವ ಕಾಲದ ಶರಣ ಮಾದಾರ ಚನ್ನಯ್ಯ ಅÀವರ 25ನೇ ಉತ್ಸವವು ತ್ರಿಪುರಾಂತನ ಅರಿವು ಪೀಠದಲ್ಲಿ ಸಂಭ್ರಮದಿಂದ ಜರುಗಿತು. ಎರಡು ದಿನಗಳ ಕಾಲ ನಡೆದ ಉತ್ಸವದಲ್ಲಿ ಮಹಿಳಾ ಗೋಷ್ಠಿ, ವಚನ ಸಂಗೀತ, ಚನ್ನಯ್ಯನವರ ಜೀವನ ಚರಿತ್ರೆ ಸೇರಿದಂತೆ ವಿವಿಧ ಸಾÀಂಸ್ಕ್ರತಿಕ ಕಾರ್ಯಕ್ರಮಗಳು ಜರುಗಿದವು.
ಮಹಾರಾಷ್ಟ್ರದ ಲಹೂಜಿ ಶಕ್ತಿ ಸೇನಾ ಸಂಸ್ಥಾಪಕ ವಿಷ್ಣುಭಾವ ಕಸಬೆ ಉದ್ಘಾಟಿಸಿ ಮಾತನಾಡಿ, ಮಾದಾರ ಚನ್ನಯ್ಯ ಅÀವರ ಕುರಿತು ಇರುವಂತಹ ಕನ್ನಡ ಇತಿಹಾಸವನ್ನು ಹಿಂದಿ, ಮರಾಠಿ ಸೇರಿದಂತೆ ಇನ್ನಿತರ ಭಾಷೆಗಳಲ್ಲಿ ತರ್ಜುಮೆ ಮಾಡಿ ಕೊಟ್ಟಿದಲ್ಲಿ ಚನ್ನಯ್ಯ ಅÀವರ ಕುರಿತು ಹೆಚ್ಚಿನ ಪ್ರಚಾರ ಮತ್ತು ಪ್ರಸಾರ ಮಾಡಲು ಸಹಕಾರಿಯಾಗುತ್ತದೆ ಎಂದರು.
ನಿವೃತ್ತ ಕೆ.ಎ.ಎಸ್ ಅಧಿಕಾರಿ ದಿವಾಕರ ಮಾತನಾಡಿ, ಇಂದಿನ ಸಮಾಜ ಮೂಢ ನಂಬಿಕೆಯಿಂದ ತಪ್ಪು ದಾರಿ ಹಿಡಿಯುತ್ತಿದೆ. ಮೂಢ ನಂಬಿಕೆ ತೊಲಗಿದರೆ ಮಾತ್ರ ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ. ನಾವೆಲ್ಲರು ವಚನ ಸಾಹಿತ್ಯವನ್ನು ಅಳವಡಿಸಿಕೊಂಡು ಹೋದರೆ ಮೇಲು, ಕೀಳು ಬೇಧ ಭಾವ ಎನ್ನದೆ ಸಮಾನಾಗಿ ಬಾಳಬಹುದು ಎಂದ ಅವರು ನಮ್ಮ ಧರ್ಮ ಎಂದು ಪ್ರೀತಿಸಿ, ಆದರೆ ಬೇರೆ ಧರ್ಮವನ್ನು ನಿಂದಿಸಬೇಡಿ. ಮಾದಾರ ಚನ್ನಯ್ಯರವರ ಕುರಿತು ಇನ್ನು ನಿಖರವಾದ ಸಂಶೋಧನೆ ನಡೆಯಬೇಕಾಗಿದೆ. ಅದಕ್ಕಾಗಿ ಮುಂದಿನ ದಿನಗಳಲ್ಲಿ ಹೆಚ್ಚು ಸಂಶೋಧನೆಗಳು ಮಾಡುವ ಅವಶ್ಯಕತೆ ಇದೆ ಎಂದರು.
ಶಾಸಕ ಶರಣು ಸಲಗರ ಮಾತನಾಡಿ, ಮುಗ್ದ ಮನಸ್ಸಿನ ಸಮಾಜವೆಂದರು ಅದು ಮಾದಿಗ ಸಮಾಜವಾಗಿದೆ. ಬೇರೆ ಬೇರೆ ಸಮಾಜದವರು ಹೆಚ್ಚಾನ ಹೆಚ್ಚು ಸರಕಾರಿ ಸೌಲಭ್ಯಗಳು ಪಡೆಯುತ್ತಿದ್ದಾರೆ. ಆದರೆ ಮಾದಿಗ ಸಮಾಜ ಮಾತ್ರ ಸೌಲಭ್ಯಗಳಿಂದ ವಂಚಿತರಾಗಿ ಕಷ್ಟದ ಜೀವನ ನಡೆಸುತ್ತಿದ್ದಾರೆ. ನಾನು ಎರಡು ಸಲ ಶಾಸನಾಗಿ ಆಯ್ಕೆ ಆಗಬೇಕಾದರೆ ಮಾದಿಗ ಸಮುದಾಯದ ಪ್ರಮುಖ ಪಾತ್ರವಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಚನ್ನಯ್ಯ ನವರ ಪೀಠಕ್ಕೆ ಬೇಕಾಗುವಂತಹ ಸೌಲಭ್ಯಗಳು ಒದಗಿಸಿಕೊಡಲು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆಂದರು. ಕೊಪ್ಪಳದ ನಾಗಲಿಂಗ ಮಳೆಕೋಪ್ಪ ಮಾತನಾಡಿದರು.
ವೇದಿಕೆಯಲ್ಲಿ ಮಾದಾರ ಚನ್ನಯ್ಯ ಅರಿವು ಪೀಠದ ಸಂಸ್ಥಾಪಕ ಅಧ್ಯಕ್ಷ ಪೂಜ್ಯ ಶ್ರೀ ಕಾಂತ ಸ್ವಾಮಿ, ಪೂಜ್ಯ ಶರಣೆ ಚಿತ್ರಮ್ಮಾ ತಾಯಿ, ಶ್ರೀ ಶಿವಾನಂದ ದೇವರು, ಶ್ರೀ ಬಸವಪ್ರಭು ಸ್ವಾಮೀಜಿ, ಶ್ರೀ ಪಂಚಾಕ್ಷರಿ ಸ್ವಾಮೀಜಿ, ಉಪಸ್ಥಿತರಿದ್ದರು.
ಪ್ರಮುಖರಾದ ನಗರ ಸಭೆ ಸದಸ್ಯೆ ಶಾಂತಾಬಾಯಿ ಮಾರುತಿ ಲಾಡೆ, ಮುಖಂಡರಾದ ಪ್ರಭು ಲಾಡೆ, ರಾಜಕುಮಾರ ರಾಜೋಳೆ, ಅಜೀತ ಸೂರ್ಯವಂಶಿ, ಉಮೇಶ ಸಂಗನೂರೆ, ಬಬಲು ಭೆಂಡೆ, ಪರಮೇಶ್ವರ ಜಲ್ದೆ, ಧನರಾಜ ಲಾಡೆ, ರಾಜಕುಮಾರ ಮುಜನಾಯಕ, ಸಂತೋಷ ಮುಜನಾಯಕ, ರವಿ ನಾವದಗಿ, ಹರಿಹರ ಗೋಖಲೆ, ಸೂರ್ಯಕಾಂತ ಸಸಾನೆ, ಮಚೇಂದ್ರ ಕಾಂಬಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಪ್ರಕಾಶ ಪೂಜಾರಿ ಮತ್ತು ಸಂಗಡಿಗರು ವಚನ ಸಂಗೀತ ಹಾಗೂ ಕಲ್ಯಾಣ ಮಹಾಮನೆ ಮಕ್ಕಳಿಂದ ವಚನ ನೃತ್ಯ ನಡೆಯಿತು.
ಈ ಸಂದರ್ಭದಲ್ಲಿ ಸಮಾಜದ ಏಳಿಗೆಗೆ ಶ್ರಮಿಸಿದ ಹಾಗೂ ವಿವಿಧ ಕ್ಷೇತ್ರದಲ್ಲಿ ಗಣನಿಯವಾದ ಸೇವೆ ಸಲ್ಲಿಸಿದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಮುಖ್ಯ ಶಿಕ್ಷಕ ರಮೇಶ ಉಮ್ಮಾಪರೆ ಸ್ವಾಗತಿಸಿದರೆ, ಅಣ್ಣಾರಾವ ಖುದಂಪೂರ ನಿರೂಪಿಸಿದರು. ಕು. ಶೃತಿ ಕಾಂಬಳೆ ವಂದಿಸಿದರು. ಕಾರ್ಯಕ್ರಮಕ್ಕು ಮುನ್ನ ಅಪಾರ ಜನಗಳ ಮಧ್ಯ ಬಸವೇಶ್ವರ ವೃತ್ತದಿಂದ ತ್ರಿಪುರಾಂತ ಅರಿವು ಪೀಠದ ವರೆಗೆ ಶರಣ ಮಾದಾರ ಚನ್ನಯ್ಯ ನವರ ಭಾವಚಿತ್ರದ ಭವ್ಯ ಮೇರವಣಿಗೆ ನಡೆಯಿತು.