ಮಾದರಿ ಶಾಲೆಗೆ ಶಂಕುಸ್ಥಾಪನೆ

ಹುಬ್ಬಳ್ಳಿ,ಮಾ17: ಶಿಕ್ಷಣದಿಂದಲೇ ಸರ್ವಾಂಗೀಣ ಎಂಬ ಡಾ.ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಯಂತೆ ಶೈಕ್ಷಣಿಕ ಅಭಿವೃದ್ಧಿಗೆ ಕ್ಷೇತ್ರದಲ್ಲಿ ಒತ್ತ ನೀಡಲಾಗುತ್ತಿದ್ದು, ಇಂದು 2ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಮೌಲಾನಾ ಆಜಾದ್ ಮಾದರಿ ಶಾಲೆಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.
ಅವರು, ಪಾಲಿಕೆ ವಾರ್ಡ್ ಸಂಖ್ಯೆ 82ರಲ್ಲಿ ಬರುವ ಬಿಡನಾಳ ಎರಡನೇ ಹಂತದ ಬೀಡಿ ಕಾರ್ಮಿಕರ ನಗರದಲ್ಲಿ 1ಎಕರೆ 20ಗುಂಟೆ ವಿಸ್ತೀರ್ಣದಲ್ಲಿ ನಿರ್ಮಿಸಲಾಗುತ್ತಿರುವ ಮೌಲಾನಾ ಆಜಾದ್ ಮಾದರಿ ಶಾಲೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಬಡವರಿಗೆ ಅನುಕೂಲ ಆಗಲಿ ಎಂಬ ಉದ್ದೇಶದಿಂದ ಕ್ಷೇತ್ರದಲ್ಲಿ ಮೌಲಾ ಆಜಾದ್ ಮಾದರಿ ಶಾಲೆ ನಿರ್ಮಾಣಕ್ಕೆ ಸರ್ಕಾರದ ಮಟ್ಟದಲ್ಲಿ ನಿರಂತರವಾಗಿ ಹೋರಾಡಿದ ಫಲವಾಗಿ ಇಂದು ಮೊದಲ ಹಂತದ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಒಟ್ಟು 10ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಶಾಲೆ ನಿರ್ಮಾಣ ಮಾಡುವ ಯೋಜನೆ ಹೊಂದಲಾಗಿದೆ ಎಂದು ಹೇಳಿದರು.
ಮಾಜಿ ಸಚಿವರಾದ ಎ.ಎಂ. ಹಿಂಡಸಗೇರಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಮುಸ್ಲಿಂ ಧರ್ಮಗುರುಗಳಾದ ಪೀರ್-ಏ-ತರಿಖತ್ ಅಲಹಜ್ ಸೈಯದ್ ತಾಜುದ್ದಿನ್ ಖಾದ್ರಿಸಾಹೇಬ್, ಕೆಪಿಸಿಸಿ ಸದಸ್ಯರಾದ ಮೋಹನ್ ಅಸುಂಡಿ, ಪಾಲಿಕೆ ಮಾಜಿ ಸದಸ್ಯರಾದ ಅಲ್ತಾಫ್ ಕಿತ್ತೂರ, ಬಶೀರ್ ಗುಡಮಾಲ್, ಮುಖಂಡರಾದ ಎನ್.ಡಿ. ಗದಗಕರ್, ಅಶ್ರಫ್ ಅಲಿ, ಅಬ್ದುಲ್ ವಹಾಬ್‍ಮುಲ್ಲಾ, ಶಾಮ ಜಾಧವ್, ಮಝರ್ ಖಾನ್, ಬಾಬಾಜಾನ್ ಕಾರಡಗಿ, ಸಲೀಂ ಮುಲ್ಲಾ, ಶರೀಫ್ ಅದ್ವಾನಿ, ಮೆಹಮೂದ್ ಕೋಳೂರು, ಪ್ರಸನ್ನಾ ಮಿರಜಕರ್, ಶ್ರೀನಿವಾಸ ಬೆಳದಡಿ, ವಾದಿರಾಜ ಕುಲಕರ್ಣಿ, ರೋಹಿತ್ ದುಂಡರೆಡ್ಡಿ, ಸಮದ್ ಗುಲಬರ್ಗಾ, ಲತೀಫ್ ಶರಬತ್‍ವಾಲಾ ಸೇರಿದಂತೆ ಮೊದಲಾದವರು ಇದ್ದರು.