ಮಾದರಿ ಮತಗಟ್ಟೆಯ ಮೂಲಕ ಮತಯಂತ್ರ ಬಳಕೆಯ ಜಾಗ್ರತಿ

ಕಲಬುರಗಿ, ಮಾ.18- ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಚುನಾವಣಾ ಆಯೋಗ ಹಮ್ಮಿಕೊಂಡಿದ್ದ ಮತದಾನದ ಮಹತ್ವ ಮತ್ತು ಮತಯಂತ್ರ ಬಳಕೆಯ ಜಾಗ್ರತಿ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವ ಮತದಾರರು ಪಾಲ್ಗೊಂಡು ಮಾಹಿತಿ ಪಡೆದುಕೊಂಡರು.
ಬರಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಥಮಬಾರಿಗೆ ತಮ್ಮ ಮತಹಕ್ಕು ಚಲಾಯಿಸಲು ಬಹು ಕಾತುರದಿಂದ ಕಾಯುತ್ತಿರುವ ಯುವ ಮತದಾರರು, ಇಲ್ಲಿ ಅಳವಡಿಸಿದ ಮಾದರಿ ಮತಗಟ್ಟೆ ಕೆಂದ್ರ, ಮಾದರಿ ಮತಯಂತ್ರಗಳನ್ನು ವಿಕ್ಷಿಸಿದರಲ್ಲದೇ ಮತದಾನವನ್ನು ಯಾವ ರೀತಿಯಾಗಿ ಮಾಡಬೇಕು ಎಂಬ ಮಾಹಿತಿಯನ್ನು ಕೇಂದ್ರದ ಸಿಬ್ಬಂದಿಗಳಿಂದ ಪಡೆದುಕೊಳ್ಳುತ್ತಿರುವುದು ಶುಕ್ರವಾರ ಮಧ್ಯಾಹ್ನ ಭೇಟಿ ನೀಡಿದ ಸಂಜೆವಾಣಿಗೆ ಕಂಡು ಬಂದಿತು.
ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಇಲ್ಲಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಸ್ಥಾಪಿಸಲಾದ ಮತಗಟ್ಟೆ ಮಾದರಿ ಕೇಂದ್ರದಲ್ಲಿ ಅಧಿಕಾರಿ- ಸಿಬ್ಬಂದಿಗಳು ಇವ್ಹಿಎಂ ಮತ ಯಂತ್ರ ಬಳಕೆ, ಮತ ಚಲಾಯಿಸಿದ ನಂತರ ತಾವು ಯಾರಿಗೆ ಮತ ನೀಡಿದ್ದೀರಿ ಎಂಬುವುದನ್ನು ದೃಡಿಕರಿಸಿಕೊಳ್ಳಲು ಇಲ್ಲಿ ಅಳವಡಿಸಿರುವ ಬಾಕ್ಸನಲ್ಲಿ ಹರಿದು ಬಿಳುವ ಮತಚೀಟಿ, ಸೇರಿದಂತೆ ಮತದಾನಕ್ಕೆ ಕನಿಷ್ಟ ಬೇಕಾಗುವ ಕಾಲವಧಿಯ ಕುರಿತು ವಿಕ್ಷಕರಿಗೆ ಮತ್ತು ಅಸಕ್ತ ನಾಗರಿಕರಿಗೆ ಸಿಬ್ಬಂದಿಗಳು ಪರಿಚಯ ಮಾಡಿಕೊಟ್ಟರು.