ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲಿಸಿ: ಜಿಲ್ಲಾಧಿಕಾರಿ ಸೂಚನೆ

ಚಾಮರಾಜನಗರ, ಮಾ.31:- ವಿಧಾನಸಭಾ ಸಾರ್ವತ್ರಿಕಚುನಾವಣೆ ಸಂಬಂಧ ಮಾದರಿ ನೀತಿ ಸಂಹಿತೆ ಪಾಲನೆಯನ್ನುಕಟ್ಟುನಿಟ್ಟಾಗಿ ಜಾರಿಗೊಳಿಸುವ ಜೊತೆಗೆ ಚುನಾವಣಾ ಸಂಬಂಧಿ ಎಲ್ಲ ಕಾರ್ಯಗಳ ಸಮರ್ಪಕ ನಿರ್ವಹಣೆಗೆ ಮುಂದಾಗುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ನಡೆದ ವಿಧಾನಸಭಾಕ್ಷೇತ್ರವಾರು ಚುನಾವಣಾ ಅಧಿಕಾರಿಗಳು, ಸಹಾಯಕ ಚುನಾವಣಾ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಎಲ್ಲಿಯೇಕಂಡುಬಂದರೂ ನಿರ್ದಾಕ್ಷಿಣ್ಯವಾಗಿಕ್ರಮ ಜರುಗಿಸಬೇಕು. ನಿಷ್ಪಕ್ಷಪಾತ, ಪಾರದರ್ಶಕ ಹಾಗೂ ಮುಕ್ತ ಚುನಾವಣೆಗೆ ಕಟ್ಟುನಿಟ್ಟಿನ ಬಿಗಿ ಕ್ರಮಗಳನ್ನು ಅನುಸರಿಸಬೇಕು. ಎಲ್ಲಿಯೂ ಲೋಪಕ್ಕೆ ಆಸ್ಪದ ನೀಡಬಾರದು ಎಂದು ಜಿಲ್ಲಾಧಿಕಾರಿಯವರು ನಿರ್ದೇಶನ ನೀಡಿದರು.
ವಿಧಾನಸಭಾಕ್ಷೇತ್ರವಾರು ಚುನಾವಣಾ ಅಧಿಕಾರಿಗಳ ಕಚೇರಿ ಸಕ್ರಿಯವಾಗಬೇಕು. ಆಯಾಕ್ಷೇತ್ರದಲ್ಲಿ ಕಂಟ್ರೋಲ್‍ರೂಂ, ಸಿವಿಜಿಲ್ ಕೂಡ ಸಕ್ರಿಯವಾಗಬೇಕು. ಚುನಾವಣೆಕುರಿತು ಪಕ್ಷಗಳಿಗೆ ಹಾಗೂ ಅಭ್ಯರ್ಥಿಗಳಿಗೆ ಪರವಾನಗಿ, ಸಭೆ ಸಮಾರಂಭಆಯೋಜನೆಗೆಅನುಮತಿ ನೀಡುವ ಸಿಂಗಲ್ ವಿಂಡೋ ವ್ಯವಸ್ಥೆ ಲಭ್ಯವಾಗಬೇಕು ಎಂದರು.
ಚೆಕ್‍ಪೋಸ್ಟ್ ಗಳ ಕಾರ್ಯಾಚರಣೆ ಬಗ್ಗೆ ನಿಗಾ ವಹಿಸಬೇಕು. ವಿಧಾನಸಭಾಕ್ಷೇತ್ರ ಮಟ್ಟದಲ್ಲಿ ವೀಡಿಯೋ ವೀವಿಂಗ್ ಸೇರಿದಂತೆ ಮಾದರಿ ನೀತಿ ಸಂಹಿತೆ ಪಾಲನೆಗೆ ನಿಯೋಜಿತರಾಗಿರುವಎಲ್ಲ ತಂಡಗಳ ಕಾರ್ಯನಿರ್ವಹಣೆಉಸ್ತುವಾರಿ ಮಾಡಬೇಕುಎಂದುಜಿಲ್ಲಾಧಿಕಾರಿಯವರು ಸೂಚಿಸಿದರು.
ವಿಧಾನಸಭಾಕ್ಷೇತ್ರವಾರು ನಿಯೋಜಿತರಾಗಿರುವ ಅಧಿಕಾರಿಗಳು, ಸಿಬ್ಬಂದಿ ತಂಡಕ್ಕೆ ಉಳಿದ ಹಂತದಲ್ಲಿ ನೀಡಬೇಕಿರುವತರಬೇತಿ, ಚುನಾವಣಾ ಆಯೋಗದ ಅನುಸಾರ ವಹಿಸಬೇಕಿರುವ ಇನ್ನಿತರ ಅಗತ್ಯ ಕ್ರಮಗಳಿಗೆ ಕಾರ್ಯೋನ್ಮುಖರಾಗುವಂತೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಉಪವಿಭಾಗಾಧಿಕಾರಿ ಗೀತಾ ಹುಡೇದ, ವಿಧಾನಸಭಾಕ್ಷೇತ್ರವಾರು ಚುನಾವಣಾಧಿಕಾರಿಗಳಾಗಿರುವ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಮಲ್ಲಿಕಾರ್ಜುನ್, ಜಂಟಿ ಕೃಷಿ ನಿರ್ದೇಶಕರಾದ ಮಧುಸೂಧನ್, ಆಹಾರ ಇಲಾಖೆ ಉಪನಿರ್ದೇಶಕರಾದ ಯೋಗಾನಂದ್, ಸಹಾಯಕ ಚುನಾವಣಾÀಧಿಕಾರಿಗಳಾಗಿರುವ ತಹಶೀಲ್ದಾರರಾದ ಬಸವರಾಜು, ಮಂಜುಳಾ, ಮಲ್ಲಿಕಾರ್ಜುನ್, ಶ್ರೀಶೈಲ್ ತಳವಾರ್, ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.