ಮಾದರಿಯಾದ ಯುವಕರು

ಲಕ್ಷ್ಮೇಶ್ವರ,ಜೂ 6: ಕೊರೋನಾ ದ ಭೀತಿಯ ಮಧ್ಯೆಯೂ ತಾಲೂಕಿನ ಯಳವತ್ತಿ ಗ್ರಾಮದ ಯುವಕರು ನಿನ್ನೆ ಗ್ರಾಮದಲ್ಲಿನ ಒಂದನೇ ವಾರ್ಡಿನಲ್ಲಿರುವ ಗಟಾರಗಳನ್ನು ಸ್ವಚ್ಛಗೊಳಿಸುವ ಮೂಲಕ ತಮ್ಮನ್ನು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ತಾಲೂಕಿನ ಯಳವತ್ತಿ ಗ್ರಾಮದ ಶ್ರೀ ದುಂಡೇಶ್ವರ ಯುವಕ ಮಂಡಲದ ಸದಸ್ಯರು ಗ್ರಾಪಂ ಉಪಾಧ್ಯಕ್ಷ ಶಿವಯೋಗಿ ಹೊಸಕೇರಿ ಅವರ ನೇತ್ರತ್ವದಲ್ಲಿ ಮಳೆಗಾಲ ಮತ್ತು ಸ್ವಚ್ಛತೆಯ ದೃಷ್ಟಿಯಿಂದ ಯುವಕರು ಒಗ್ಗೂಡಿ ಉತ್ತಮ ಕಾರ್ಯವನ್ನು ಮಾಡುವ ಮೂಲಕ ಗ್ರಾಮದ ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಯುವಕ ಮಂಡಲದ ಸದಸ್ಯರಾದ ಚಂದ್ರು ಕಪಲಟ್ಟಿ, ಹುಸೇನ್ ಸಾಬ್ ಮಸೂತಿ, ಮಂಜುನಾಥ ನಿಮ್ ನಾಯ್ಕರ, ಗಣೇಶ ಹತ್ತಿಕಾಳ, ಶಂಕ್ರಯ್ಯ ಮಠಪತಿ ಹಾಗೂ ಗ್ರಾಪಂ ಸದಸ್ಯರು, ಗ್ರಾಪಂ ಸಿಬ್ಬಂದಿ ಭಾಗವಹಿಸಿದ್ದರು.