ಮಾದಪ್ಪನ ಸನ್ನಿಧಿಯಲ್ಲಿ ಗಡಿನಾಡು ಸಾಂಸ್ಕೃತಿಕ ಉತ್ಸವ

ಹನೂರು: ಜೂ.23:- ಗಡಿ ಜಿಲ್ಲೆಯ ಮಾದಪ್ಪನ ಸನ್ನಿಧಿಯಲ್ಲಿ ಗಡಿನಾಡು ಸಾಂಸ್ಕೃತಿಕ ಉತ್ಸವವ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು (ರಿ.)ಮೈಸೂರು,ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇವರ ಸಹಯೋಗದಿಂದ ಭಾರತದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸವಿನೆನಪಿನಲ್ಲಿ ಈ ಸಂಭ್ರಮವನ್ನು ಮಾಡುತ್ತಿರುವುದು ನಮ್ಮೆಲ್ಲರಿಗೂ ಸಂತೋಷದ ವಿಷಯ.
ಸಮಾರಂಭ ಉದ್ಘಾಟನೆ ಮಾಡಿ ಮಾತನಾಡಿದ ಕ್ಷೇತ್ರದ ಶಾಸಕ ಮಂಜುನಾಥ್ ಶಾಸಕನಾಗಿ ಮೊದಲ ಬಾರಿಗೆ ಇಂತಹ ಐತಿಹಾಸಿಕ ಸರ್ಕಾರಿ ಕಾರ್ಯಕ್ರಮದಲ್ಲಿ ಉದ್ಘಾಟನೆ ಮಾಡುತ್ತಿರುವುದು ತುಂಬಾ ಸಂತೋಷ ಸಾಂಸ್ಕೃತಿಕ ಮತ್ತು ಜಾನಪದ ಕಲೆಗೆ ಚಾಮರಾಜನಗರ ಜಿಲ್ಲೆ ಹೆಸರುವಾಸಿಯಾಗಿದೆ ನಾಡು ನುಡಿ ಸಂಸ್ಕೃತಿಯನ್ನು ಬೆಳೆಸಿ ಅದಕ್ಕೆ ಪ್ರಾತ್ಯನಿಧ್ಯ ಕೊಟ್ಟು ಜಾನಪದ ಮತ್ತು ಕಲೆ ಸಂಸ್ಕೃತಿಯನ್ನು ಇನ್ನೂ ಹೆಚ್ಚಾಗಿ ಉಳಿಸಿ ಬೆಳೆಸಬೇಕು ಎಂದರು.
ಇದೇ ರೀತಿಯಲ್ಲಿ ಸರ್ಕಾರದ ವತಿಯಿಂದ ಇಂತಹ ಎಲ್ಲಾ ಕಾರ್ಯಕ್ರಮಗಳಿಗೆ ಸಂಪೂರ್ಣ ಬೆಂಬಲವಿದೆ ಎಂದು ಶಾಸಕ ಎಂ.ಆರ್ ಮಂಜುನಾಥ್ ತಿಳಿಸಿದರು.
ಹನೂರು ತಾಲೂಕಿನ ಮಹದೇಶ್ವರ ಬೆಟ್ಟದ ಶ್ರೀ ಮಹದೇಶ್ವರ ಕಲ್ಯಾಣ ಮಂಟಪದಲ್ಲಿ ಗಡಿನಾಡು ಸಾoಸ್ಕೃತಿಯ ಉತ್ಸವ ಸಮಾರಂಭ ಉದ್ಘಾಟನೆ ಮಾಡಲಾಯಿತು ಈ ಕಾರ್ಯಕ್ರಮ ಆರಂಭಕ್ಕೂ ಮೊದಲು ವಿವಿಧ ಕಲಾ ತಂಡಗಳಿಂದ ಮಂಗಳವಾದ್ಯ, ವಿರಾಗಸೆ , ಕಂಸಾಳೆ ,ಡೊಳ್ಳು ಕುಣಿತ,ಗೊರವರ ಕುಣಿತ,ಬಿಲ್ಲು ಕುಣಿತ, ಬೇಡಗಂಪಣರ ನೃತ್ಯ ಮುಂತಾದ ಕಲಾ ಉತ್ಸವಕ್ಕೆ ಅಪರ ಜಿಲ್ಲಾಧಿಕಾರಿ, ಮಹದೇಶ್ವರ ಬೆಟ್ಟ ಪ್ರಾಧಿಕಾರ ಕಾರ್ಯದರ್ಶಿ ಕ್ಯಾತ್ಯಯಿನಿ ದೇವಿ ಚಾಲನೆ ನೀಡಿದ್ದರು.
ನಂತರ ವೇದಿಕೆಯಲ್ಲಿ ಮಾತನಾಡಿದ ಸುತ್ತೂರು ಮಹಾಸಂಸ್ಥಾನ ಮಠದ ಶಿವರಾತ್ರಿ ದೇಸಿಕೇಂದ್ರದ ಮಹಾಸ್ವಾಮಿಗಳು ದೇಶ ಏಕತೆಯಿಂದ ಬೆಳೆಯಬೇಕು ನಾವೆಲ್ಲರೂ ಒಂದೇ ಕಲೆಗೆ ಭಾಷೆಯ ಯಾವುದೆ ಜಾತಿ ಜನಾಂಗದ ಬಣ್ಣವಿಲ್ಲ ನಾವೆಲ್ಲರೂ ಮಾನವರು ಎಂಬ ವಾಕ್ಯವನ್ನು ಸದಾ ಮನಸಿನಲ್ಲಿಟ್ಟುಕೊಂಡು ಜೀವಿಸಬೇಕು. ಇವತ್ತಿನ ಕಾರ್ಯಕ್ರಮ ಗಡಿನಾಡು ಗಡಿ ತಾಲೂಕಿನಲ್ಲಿ ಆಯೋಜನೆ ಮಾಡಿದ್ದೂ ತುಂಬಾ ಒಳ್ಳೆಯ ಸಂಗತಿ ಕಲೆ ಸಂಸ್ಕೃತಿ ಅನ್ನೋದು ಮನುಷ್ಯನ ಭವ್ಯವಾದ ಒಂದು ಅಂಗವಾಗಿದೆ ಅದರದೇ ಆದ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯುತ್ತದೆ. ಇವತ್ತಿನ ದಿನಗಳಲ್ಲಿ ಜಾನಪದ ಕಲೆ ಸಾಹಿತ್ಯವನ್ನು ಮನುಷ್ಯ ಮರೆಯುತ್ತಿದ್ದಾನೆ ಆದ್ದರಿಂದ ಕಲೆ ಸಂಸ್ಕೃತಿ ಸಾಹಿತ್ಯಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು ಎಂದು ಹೇಳಿದರು.
ಮಳವಳ್ಳಿ ಮಹದೇವಸ್ವಾಮಿ ರವರು ರಾಜ್ಯಾದಂತ್ಯ ತಮ್ಮ ಜಾನಪದ ಕಲೆಯಿಂದ ಹೆಸರುವಾಸಿಯಾಗಿದ್ದಾರೆ ಕಳೆದ ಒಂದು ವಾರದಿಂದ ಅವರು ಹಾಡಿರುವ ” ಅನ್ಯಾಯಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೇ ” ಎಂಬ ಹಾಡೊಂದು ರಾಜ್ಯದಿಂದ ದಾಟಿ ದೇಶದಿಂದಾಚೆಗೆ ತಲುಪಿದೆ ಆಗಾಗಿ ಜಾನಪದ ಸಾಹಿತ್ಯ ಕಲೆಗೆ ಹೆಚ್ಚಿನ ಆದ್ಯತೆ ಕೊಡಬೇಕು ಎಂದರು.
ಕ್ಷೇತ್ರದ ಶಾಸಕ ಮಂಜುನಾಥ್ ತಾಲೂಕಿನಲ್ಲಿ ಗ್ರಾಮೀಣ ಭಾಗದಲ್ಲಿನ ಬಡತನ ಮತ್ತು ಸೌಲಭ್ಯ ವಂಚಿತ ಗ್ರಾಮಗಳಿಗೆ ಮೂಲಭೂತ ಸೌಕರ್ಯ ನೀಡುವ ನಿಟ್ಟಿನಲ್ಲಿ ಹೆಚ್ಚಿನ ಅಭಿವೃದ್ಧಿ ಮಾಡುವ ಕನಸೊತ್ತಿದ್ದಾರೆ ಈ ಕುರಿತು ವೇದಿಕೆಯಲ್ಲಿ ನನ್ನ ಜೊತೆ ಚರ್ಚೆ ಮಾಡಿದ್ದಾರೆ ಕ್ಷೇತ್ರಕ್ಕೆ ಸಾಮಾಜಿಕ ಕಳ ಕಳಿಯುಳ್ಳ ಶಾಸಕ ಸಿಕ್ಕಿದ್ದಾರೆ ಎಂದು ಹೇಳಿದರು
ಕಾರ್ಯಕ್ರಮದಲ್ಲಿ ದಿವ್ಯ ಸಾನಿದ್ಯವಹಿಸಿದ್ದ ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳವರು ಹಾಗೂ ಶ್ರೀ ಸಾಲೂರು ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ಮತ್ತು ಗಡಿ ನಾಡು ಸಂಸ್ಥೆಯ ಮಾಜಿ ಅಧ್ಯಕ್ಷ ರಾದ ಡಾ.ಸಿ.ಸೋಮಶೇಖರ್,ಐ ಎ ಎಸ್ (ನಿ) , ಶ್ರೀ ಹೊನ್ನೂರು ಪ್ರಕಾಶ್ ಪ್ರಗತಿಪರ ರೈತರು ಹಾಗೂ ರೈತ ಮುಖಂಡರು, ಶ್ರೀ ಎಂ. ಶಿವರಾಜು ಕ್ಷೇತ್ರ ಶಿಕ್ಷಣಾಧಿಕಾರಿಗಳು ಶ್ರೀ ಮಲೆ ಮಹದೇಶ್ವರ ದೇವರಗುಡ್ಡರ ಸಂಸ್ಕೃತಿ, ಶ್ರೀ ಮಲ್ಲೇಶ ಮಾಲಿಂಗನಕಟ್ಟೆ, ಶ್ರೀ ಗುರುಸ್ವಾಮಿ ಹಲಗಪುರ, ಡಾ. ಮಹೇಶ ಚಿಕ್ಕಲ್ಲೂರು, ಶ್ರೀ ಕೆ.ಎಂ. ವೀರಶೆಟ್ಟಿ, ಶ್ರೀ ಪ್ರಕಾಶ ಮೊನ್ನಾಚಿ ಶ್ರೀ ಶಿವಣ್ಣ ಇಂದ್ವಾಡಿ ಕವಿಗಳು ಹಾಗೂ ಶಿಕ್ಷಕರು, ನಿ.ಪ್ರ.ಸ್ವ. ಶ್ರೀ ಶಿವಲಿಂಗೇಂದ್ರ ಸ್ವಾಮಿಗಳು, ಪ.ಬ್ರ. ಶ್ರೀ ನಂದೀಶ್ವರ ಶಿವಾಚಾರ್ಯ ಸ್ವಾಮಿಗಳು ಶ್ರೀ ಪಟ್ಟದ ಮಠ ಅಜೀಪುರ, ಶ್ರೀ ಎನ್. ಗುರುಲಿಂಗಯ್ಯ, ಶ್ರೀ ಎಚ್.ಕೆ. ಪಾಂಡು, ಶ್ರೀ ಪ್ರಕಾಶ್ ಮತ್ತೀಹಳ್ಳಿ, ಶ್ರೀಮತಿ ಎಸ್. ಕಾತ್ಯಾಯಿನಿದೇವಿ ಅಪರ ಜಿಲ್ಲಾಧಿಕಾರಿಗಳು, ಚಾಮರಾಜನಗರ ಮತ್ತು ಕಾರ್ಯದರ್ಶಿಗಳು, ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವರು, ಶ್ರೀ ಹನೂರು ಚನ್ನಪ್ಪ ಸಾಹಿತಿಗಳು, ಶ್ರೀಮತಿ ವಸಂತಮ್ಮ, ಮತ್ತು ರಾಜಕೀಯ ಗಣ್ಯರು ಉಪಸ್ಥಿತರಿದ್ದರು.