ಮಾದಪ್ಪನ ತಪ್ಪಲಿನಲ್ಲಿ ಪುಂಡಾನೆಗಳ ಸೆರೆಗೆ ಕಾರ್ಯಾಚರಣೆ

ಚಾಮರಾಜನಗರ, ಜು.18:- ಗ್ರಾಮಕ್ಕೆ ಲಗ್ಗೆ ಇಟ್ಟು ಬೆಳೆ ಹಾನಿ ಮಾಡುತ್ತಿದ್ದಎರಡು ಪುಂಡಾನೆಗಳನ್ನು ಸೆರೆ ಹಿಡಿಯುವಕಾರ್ಯಾಚರಣೆ ಮಾದಪ್ಪನ ಬೆಟ್ಟದತಪ್ಪಲಿನ ಹನೂರು ತಾಲೂಕಿನ ಪೆÇನ್ನಾಚಿ ಗ್ರಾಮದಲ್ಲಿ ನಡೆಯುತ್ತಿದೆ. ಮಲೆಮಹದೇಶ್ವರ ವನ್ಯ ಜೀವಿಧಾಮದ ಡಿಎಫ್‍ಓ ಏಡುಕುಂಡಲು ನೇತೃತ್ವದಲ್ಲಿ ಎರಡು ಸಾಕಾನೆಗಳ ಮೂಲಕ ಪುಂಡಾನೆಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಆಪರೇಷನ್ ಎಲಿಫ್ಯಾಂಟ್: ಮಾದಪ್ಪನ ಬೆಟ್ಟದತಪ್ಪಲಿನಲ್ಲಿ ಪುಂಡಾನೆ ಸೆರೆಗೆ ಕಾರ್ಯಾಚರಣೆ ಸದ್ಯ ಒಂದು ಆನೆಯನ್ನು ಗುರುತಿಸಿ ಅದನ್ನು ಸೆರೆ ಹಿಡಿಯುವ ಕಾರ್ಯ ನಡೆಯುತ್ತಿದೆ. ಸಂಜೆ ವೇಳೆಗೆ, ಅರವಳಿಕೆ ಮದ್ದುಕೊಟ್ಟು ಆನೆಗೆ ರೇಡಿಯೋಕಾಲರ್ ಅಳವಡಿಸಿ, ಜಿಪಿಎಸ್ ಮೂಲಕ ಆನೆ ಗ್ರಾಮದ ಸರಹದ್ದಿಗೆ ಬಂದಾಗ ಮತ್ತೆ ಅದನ್ನುಕಾಡಿಗಟ್ಟುವ ಯೋಜನೆಯನ್ನು ಅರಣ್ಯ ಇಲಾಖೆ ರೂಪಿಸಿದೆ.
ಪೆÇನ್ನಾಚಿ ಗ್ರಾಮದಲ್ಲಿ ಈ ಎರಡು ಪುಂಡಾನೆಗಳ ಆಟಾಟೋಪಕ್ಕೆ ಗ್ರಾಮಸ್ಥರು ರೋಸಿ ಹೋಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಯಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದರು. ಈ ಬಗ್ಗೆ ಡಿಸಿ ಚಾರುಲತಾ ಸೋಮಲ್ ಅವರು ಪರಿಹಾರ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ರೇಡಿಯೋ ಕಾಲರ್ ಅಳವಡಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಿರ್ಧರಿಸಲಾಗಿದೆ. ಆಪರೇಷನ್ ಎಲಿಫ್ಯಾಂಟ್ ಕಾರ್ಯಾಚರಣೆ ನಿನ್ನೆಯಿಂದ ನಡೆಯುತ್ತಿದ್ದು, ಇಂದೂ ಕೂಡ ನಡೆಯುತ್ತಿದೆ.