ಸಂಜೆವಾಣಿ ವಾರ್ತೆ
ಹನೂರು: ಜೂ.30:- ಬೇಡಗಂಪಣ ಕುಲಸ್ಥರಿಂದ ಕಾವೇರಿ ನದಿಗೆ ವಿಶೇಷ ಪೂಜೆ ಬಾಗಿಣ ಸಮರ್ಪಣೆ
ಮಲೆ ಮಹದೇಶ್ವರ ಸ್ವಾಮಿಗೆ ಕಾವೇರಿ ಗಂಗಾ ಜಲಾಭಿಷೇಕ .
ಸಾಲೂರು ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರಭಿವೃದ್ಧಿ ಪ್ರಾಧಿಕಾರದ ನೂತನ ಕಾರ್ಯದರ್ಶಿಯಾದ ಶ್ರೀಮತಿ ಗೀತಾ ಹುಡೇದ ರವರ ಸಮ್ಮುಖದಲ್ಲಿ ವಿಶೇಷ ಪೂಜೆ ನೆರವೇರಿತು.ಇದರ ಜೊತೆಗ ಕಾರ್ಯದರ್ಶಿಯಾದ ಶ್ರೀಮತಿ ಗೀತಾ ಹುಡೇದ ರವರು ಬಸವವಾಹನ, ಹುಲಿವಾಹನ ಉತ್ಸವ ಕಾರ್ಯ ನೇರವೇರಿಸಿದ್ದರು.
ತಾಲ್ಲೂಕಿನ ಶ್ರೀ ಮಲೆ ಮಹದೇಶ್ವರ ಸ್ವಾಮಿಯ ದೇಗುಲದಲ್ಲಿ ಅಷಾಡ ಮಾಸದ ಪ್ರಥಮ ಏಕಾದಶಿ ಪ್ರಯುಕ್ತ ಗುರುವಾರ ಸುಮಾರು 30 ಕಿಲೋಮೀಟರ್ ದೂರದ ಕಾಡಿನಿಂದ ಕಾಲ್ನಡಿಗೆಯಲ್ಲಿ ಕಾವೇರಿ ನೀರು ತಂದು ಎಪ್ಪತ್ತೇಳು ಮಲೆ ಒಡೆಯ ಮಾದಪ್ಪನಿಗೆ ಅಭಿಷೇಕ ಮಾಡಲಾಯಿತು..
ಮಹದೇಶ್ವರರಿಗೆ ಪೂಜೆ ಮಾಡುವ ಬೇಡಗಂಪಣ ಸಂಪ್ರದಾಯದಂತೆ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಗೋಪಿನಾಥಂ ಬಳಿಯ ಕೋಟೆಯೂರಿನ ಕಾವೇರಿ ತೀರದಿಂದ ಗಂಗಾಜಲ ತರಲಾಯಿತು
ಬೇಡಗಂಪಣ ಕುಲದ ಕೊಲ್ಲೆಸಿದ್ದನ ಪಾಲು ಹಾಗೂ ಸರದಿ ತಮ್ಮಡಿಗಳಿಂದ ಈ ವರ್ಷ ಸಂಪ್ರದಾಯಿಕ ಸೇವೆ ಅಷಾಡ ಮಾಸದ ಪ್ರಥಮ ಏಕಾದಶಿಯಂದು ಮಾದಪ್ಪನಿಗೆ ಜಲಾಭಿಷೇಕ ಮಾಡಲು ಕಳೆದ ದಿನ ಬುಧವಾರ ಕಾವೇರಿ ತೀರದಲ್ಲಿ ಬೇಡಗಂಪಣ ತಮ್ಮಡಿಗಳು ತಂಗಿದ್ದು.
ಗುರುವಾರ ಬೆಳಿಗ್ಗೆ ಅಂದರೆ ಇಂದು ಪೂಜೆಯನ್ನು ಸಲ್ಲಿಸಿ ಕಾವೇರಿ ನದಿಗೆ ಭಾಗಿಣ ಸಮರ್ಪಣೆ ಮಾಡಿ ಒಂದು ಬಿಂದಿಗೆಯ ನೀರು ತುಂಬಿಟ್ಟುಕೊಂಡು ಬಿಂದಿಗೆಯ ಬಾಯಿಗೆ ಬಿಳಿಯ ಬಟ್ಟೆ ಕಟ್ಟಿ ಫಲ ತಾಂಬೂಲ ನೈವೇದ್ಯ ಮಾಡಿ ಕಾಡಿನ ದಾರಿಯಲ್ಲಿ ಸುಮಾರು 30 ಕಿಲೋಮೀಟರ್ ದೂರ ನಾಗುಮಲೆ ಬೆಟ್ಟದ ತಪ್ಪಲಿನ ಮಾರ್ಗವಾಗಿ ಆದಿ ಮಾದಪ್ಪನ ಬೆಟ್ಟವನ್ನು ಹತ್ತಿ ಕಾಲ್ನಡಿಗೆಯಲ್ಲಿ ಮಹದೇಶ್ವರ ಬೆಟ್ಟದ ಅಂತರ ಗಂಗೆಗೆ ತಲುಪಿತು.
ಮಹದೇಶ್ವರ ಬೆಟ್ಟದಲ್ಲಿ ವಿಶೇಷ ಪೂಜೆಯ ಸ್ವಾಗತ:
ಕಾಡಿನಲ್ಲಿ ಕಾಲ್ನಡಿಗೆಯಲ್ಲಿ ಕರೆತಂದ ಕಾವೇರಮ್ಮನಿಗೆ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸ್ವಾಗತಿಸಲಾಯಿತ್ತು.
ಅಂತರ ಗಂಗೆಯಲ್ಲಿ ಗಂಗಾಜಲ ಬಿಂದಿಗೆ ಇಟ್ಟು ದೇವಾಲಯದಿಂದ ಸರದಿಯ ತಮ್ಮಡಿಗಳು, ಅರ್ಚಕರುಗಳು,ಆಗಮಿಕರು ಮಂಗಳ ವಾದ್ಯಗಳ ಸಮೇತವಾಗಿ ನಗರಿ, ಜಾಗಟೆ ಮತ್ತು ದೀವಾಟಿಗೆಯ ಸೇವೆಯೂಂದಿಗೆ ದೊಡ್ಡ ಸತ್ತಿಗೆ,ಚಿಕ್ಕ ಸತ್ತಿಗೆ, ಬೆಳ್ಳಿ ಸತ್ತಿಗೆ ನಂದಿ ಕಂಬಗಳ ಸಮೇತವಾಗಿ ದೇವಾಲಯವನ್ನು ಒಂದು ಸುತ್ತು ಪ್ರದಕ್ಷಿಣೆ ಹಾಕಿ ಮೆರವಣಿಗೆಯಲ್ಲಿ ಹೋಗಿ ಕಾವೇರಮ್ಮನನ್ನು ತಂದೆಯ ತವರು ಮನೆಗೆ ಮಗಳನ್ನು ಕರೆತರುವ ರೀತಿಯಲ್ಲಿ ಬರಮಾಡಿಕೊಂಡು.
ಕಾವೇರಮ್ಮನಿಗೆ ಮಾದಪ್ಪನಿಗೆ ಏಕ ಕಾಲದಲ್ಲಿ ಪೂಜೆ:
ಕಾಡಿನಿಂದ ತಂದ ಕಾವೇರಿ ಗಂಗಾಜಲ ಮಹದೇಶ್ವರ ಸ್ವಾಮಿಯ ಗರ್ಭಗುಡಿಯ ಮುಖ್ಯದ್ವಾರ ಮುಂದೆ ಎದುರಿಗೆ ನಿಲ್ಲಿಸಿ.
ಮಾದಪ್ಪನೀಗೆ ಕಾವೇರಮ್ಮನಿಗೆ ಏಕಕಾಲದಲ್ಲಿ ಪೂಜೆಯನ್ನು ಸಲ್ಲಿಸಿ ಆಗಮಿಕರ ವೇದ ಮಂತ್ರಗಳ ಘೋಷದಲ್ಲಿ ಬೇಡಗಂಪಣ ಅರ್ಚಕರು ತ್ರಿಕಾಲ ಪೂಜೆಯ ಪ್ರಯುಕ್ತ ಕಾವೇರಿ ಗಂಗಾಜಲ ಮಹಾ ಮಜ್ಜನ ಅಭಿಷೇಕವನ್ನು ಮಾಡಲಾಯಿತು.
ಸಂಪ್ರದಾಯ ಹಿಂದಿದೆ ಪುರಾಣ ಕಥೆ :
ಮಲೆ ಮಹದೇಶ್ವರ ಸ್ವಾಮಿಯ ದೇವಾಲಯದಲ್ಲಿ ಅಷಾಡ ಮಾಸದ ಪ್ರಥಮ ಏಕಾದಶಿಯಂದು ಕಾಡಿನಿಂದ ಕಾವೇರಿ ಗಂಗಾಜಲ ತರುವ ಸಂಪ್ರದಾಯ ಹಿಂದೆ ಮಾದಪ್ಪನ ಪವಾಡದ ಪುರಾಣ ಕಥೆ ಅಡಗಿದೆ,
ಸನ್ನಿಧಾನದಲ್ಲಿ ಸಾಲೂರು ಮಠದ ಪೀಠಾಧಿಪತಿಗಳಾದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಪ್ರಾಧಿಕಾರದ ನೂತನ ಕಾರ್ಯದರ್ಶಿಯಾದ ಶ್ರೀಮತಿ ಗೀತಾ ಹುಡೇದ, ಲೆಕ್ಕ ಪತ್ರ ಪರಿಶೋಧಕ ನಾಗೇಶ್,ಉಪ ಕಾರ್ಯದರ್ಶಿ ಸರಗೂರು ಮಹಾದೇವ ಸ್ವಾಮಿ, ನಾಗರಾಜು ಬೆರಳಚ್ಚುಗಾರ ನಾಗರಾಜ್, ಎಂ.ಸ್ವಾಮಿ, ಎಂ. ಎನ್ ಶ್ರೀನಿವಾಸನ್, ಎಸ್ ಎಂ .ಕೃಷ್ಣ ಕುಮಾರ್ ಪ್ರಾಧಿಕಾರದ ನೌಕರರು, ಬೇಡಗಂಪಣ ಅರ್ಚಕ ವೃಂದದವರು, ಭಕ್ತಾದಿಗಳು ಭಾಗಿಯಾಗಿದ್ದರು.