
ಮಾದನಹಿಪ್ಪರಗಿ:ಏ.28: ಮೇ 1 ರಿಂದ 7ರವರೆಗೆ ಜರುಗುವ ಸ್ಥಳೀಯ ಶಿವಲಿಂಗೇಶ್ವರ ವಿರಕ್ತ ಮಠದ ಜಾತ್ರಾ ಮಹೋತ್ಸವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ದೇಶಿ ಕ್ರೀಡೆಗಳು ಮ್ಯಾರಾಥನ ಕ್ರಿಡೆಗಳು ಜರುಗಲಿವೆ ಎಂದು ಮಠದ ಪೀಠಾಧಿಪತಿ ಅಭಿನವ ಶಿವಲಿಂಗ ಸ್ವಾಮಿಗಳು ತಿಳಿಸಿದ್ದಾರೆ.
ಮೇ.ರಂದು ಸೋಮವಾರ ಬೆಳಿಗ್ಗೆ 6 ಗಂ. ಮ್ಯಾರಾಥನ ಓಟ. ಮೇ. 2.ರಂದು ಮಂಗಳವಾರ 6.00 ಗಂ. ಸೈಕ್ಲಿಂಗ ಮ್ಯಾರಾಥನ. 3 ರಂದು ಸಂಜೆ 4.00 ಗಂ. ಹೊನಲು ಬೆಳಿಕಿನ ಕಬ್ಬಡ್ಡಿ ಪಂದ್ಯಾವಳಿಗಳು ಜರುಗಲಿವೆ. 4ರಂದು ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಮತ್ತು ಮೇ 1ರಿಂದ 4ರವರೆಗೆ ಪ್ರತಿ ದಿನ ಸಂಜೆ 7.00 ಗಂ. ಉಚ್ಚಾಯಿ( ಲಘು ರಥೋತ್ಸವ) ಎಳೆಯುವುದು. ಮೇ 5ರಂದು ಬೆಳಿಗೆ 4 -30 ಕ್ಕೆ ನಿರ್ವಿಕಲ್ಪ ಸಮಾದಿಸ್ಥ ಶ್ರೀ ಶಿವಲಿಂಗೇಶ್ವರ ಗದ್ದುಗೆಗೆ ಮಹಾರುದ್ರಾಭಿಷೇಕ. ಸಂಜೆ 4.00 ಗಂ. ಗ್ರಾಮದ ಪ್ರಮುಖ ಬೀದಿಗಳಲ್ಲಿ ಕಳಸದ ಮೆರವಣಿಗೆ ಹಾಗೂ ರಥಕ್ಕೆ ಕಳಸಾರೋಹಣ. ಸಂಜೆ 7.00 ಗಂ. ಶ್ರೀ ಮಠದ ಪಲ್ಲಕ್ಕಿಯು ಪುರವಂತರೊಂದಿಗೆ ರಥದ ಕಡೆ ಬಿಜಂಗೈಯುವುದು. ನಂತರ ಶ್ರೀಗಳ ಶುಭ ಸಂದೇಶದೊಂದಿಗೆ 8.00 ಗಂ. ಮಹಾರಥೋತ್ಸವ ಜರುಗುವುದು.
ಮೇ6 ರಂದು ಪ್ರಸಿದ್ಧ ಜಂಗಿ ಪೈಲ್ವಾನರಿಂದ ಕುಸ್ತಿಗಳು. ಸುತ್ತ ಮುತ್ತಲಿನ ಗ್ರಾಮಸ್ಥರಿಂದ ಹರಜಾತ್ರೆ ಜರುಗುವುದು. ಮೇ.7ರಂದು ರಥೋತ್ಸವಕ್ಕೆ ಕಡುಬಿನ ಕಾಳಗ ನಡೆಯುತ್ತದೆ. ಎಂದು ಮಠದ ಶ್ರೀಗಳು ತಿಳಿಸಿದ್ದಾರೆ.