ಮಾದನಹಿಪ್ಪರಗಿ ಗ್ರಾ.ಪಂ: ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಸುವರ್ಣಾ ಅಧ್ಯಕ್ಷೆ ಶಿವಲಿಂಗಪ್ಪ ಉಪಾಧ್ಯಕ್ಷ

ಮಾದನಹಿಪ್ಪರಗಿ:ಆ.5: ಸ್ಥಳೀಯ ಗ್ರಾಮ ಪಂಚಾಯಿತಿಯ ಎರಡನೆ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಅಧ್ಯಕ್ಷರಾಗಿ ಶ್ರೀಮತಿ ಸುವರ್ಣಾ ಈರಪ್ಪ ಮೈಂದರಗಿ, ಉಪಾಧ್ಯಕ್ಷರಾಗಿ ಶಿವಲಿಂಗಪ್ಪ ಇಂಗಳೆ ಆಯ್ಕೆಯಾದರು.

ಮಾದನಹಿಪ್ಪರಗಿ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು ಸದಸ್ಯರ ಬಲ 24 ಇದ್ದು, ಸರ್ವ ಸದಸ್ಯರು ಚುನಾವಣೆಯಲ್ಲಿ ಹಾಜರಿದ್ದರು. ಅಧ್ಯಕ್ಷ ಸ್ಥಾನಕ್ಕೆ ಮೂರು ನಾಮ ಪತ್ರಗಳು ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಎರಡು ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಸುವರ್ಣಾ ಮೈಂದರಗಿ ಇವರು 17 ಮತಗಳನ್ನು ಪಡೆದರೆ, ಗೀತಾ ಶರಣಬಸಪ್ಪ ಜಿಡ್ಡಮನಿ ಇವರಿಗೆ 4 ಮತಗಳು ಮತ್ತು ಚೆನ್ನಮ್ಮ ಭಕರೆ ಇವರು 3 ಮತಗಳು ಪಡೆದರು. ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಶಿವಲಿಂಗಪ್ಪ ಇಂಗಳೆ 14 ಮತಗಳನ್ನು ಪಡೆದರೆ, ಪ್ರತಿಸ್ಪರ್ಧಿ ಧರ್ಮಣ್ಣ ಕೌಲಗಿ 10 ಮತಗಳನ್ನು ಪಡೆದರು. ಚುನಾವಣಾಧಿಕಾರಿಯಾಗಿದ್ದ ಆಳಂದ ತಾಲೂಕ ಕೃಷಿ ನಿರ್ದೇಶಕರು ಶರಣಗೌಡ ಪಾಟೀಲರು ಸುವಣಾ ಈರಪ್ಪ ಮೈಂದರಗಿ ಅಧ್ಯಕ್ಷರಾಗಿ, ಶಿವಲಿಂಗಪ್ಪ ಇಂಗಳೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿದರು. ಪಂಚಾಯತ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸುಕನ್ಯಾ ಹಾಗೂ ಪಂಚಾಯಿತ ಸಿಬ್ಬಂಧಿಗಳು , ಪಿಎಸ್‍ಐ ದಿನೇಶ ಹಾಗು ಸಿಬ್ಬಂಧಿಗಳು, ಮುಖಂಡರಾದ ಮಲ್ಲಯ್ಯ ಸ್ವಾಮಿ, ಸಿದ್ದರಾಮ ಅರಳಿಮಾರ, ದೊಂಡಿಬಾ ಜಿಡ್ಡಿಮನಿ, ಹರಿದಾಸ ಹಜಾರೆ, ನಿಲೇಶ್ ತೋಳನೂರ, ಸಿದ್ದು ಆಲೂರೆ, ಗುರಯ್ಯ ಸ್ವಾಮಿ, ಶಿವಲಿಂಗಪ್ಪ ಖೈರಾಟೆ, ಮಹಿಬೂಬ್ ಬಾಹವಾನ್, ಮೌಲಾಸಾಬ್ ಹಾರಕೂಡ್, ಈರಣ್ಣ ಮೈಂದರಗಿ, ಮಾಣಿಕ ಮಾನೆ, ಶ್ರೀಶೈಲ ಸಾಲಿ ಈ ಸಂದರ್ಭದಲ್ಲಿ ಹಾಜರಿದ್ದರು.