ಮಾದನಹಿಪ್ಪರಗಾ ; ಸರಳ ಬಸವ ಜಯಂತಿ ಆಚರಣೆ

ಆಳಂದ ;ಮೇ.14: ತಾಲೂಕಿನ ಮಾದನಹಿಪ್ಪರಗಾ ಗ್ರಾಮದಲ್ಲಿ ಬಸವ ಸಮಿತಿ ವತಿಯಿಂದ ಸರಳವಾಗಿ ಬಸವ ಜಯಂತಿಯನ್ನು ಆಚರಣೆ ಮಾಡಲಾಯಿತು.ಬಸವ ವೃತ್ತದ ಬಳಿ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಈ ಸಂದರ್ಬದಲ್ಲಿ ಮಾತನಾಡಿದ ಯುವ ªಮುಖಂಡ ಬಸವರಾಜ ಶಾಸ್ತ್ರಿ 12 ಶತಮಾನದಲ್ಲಿ ಹೊಸ ಕ್ರಾಂತಿಯ ಮುಖಾಂತರ ಶೋಷಿತ ಬಡವರ ಪಾಲಿಗೆ ತಮ್ಮ ಸರಳ ವಚನಗಳ ಮುಖಾಂತರ ಹೊಸ ಭಾಷ್ಯ ಬರೆದಿದ್ದಾರೆ. ಆಚಾರ ವಿಚಾರ ಸಂಸ್ಕಾರ ತುಂಬಿದ ವಚನ ಸಾಹಿತ್ಯ ಮಾನವ ಬದುಕಿನಲ್ಲಿ ಅಳವಡಿಕೊಳ್ಳಬೇಕಾದೆ. ಅಂಧ ಶ್ರದ್ದೆ ಮೌಡ್ಯತೆಯ ವಿರುದ್ದ ಸಮರ ಸಾರಿದ ಬಸವೇಶ್ವರರು ಸಾಮಾಜಿಕವಾಗಿ ದೂರ ತಳ್ಳಲ್ಲಪಟ್ಟಿದ್ದ ಜನರು ಅಪ್ಪಿಕೊಂಡು ಅವರಿಗೆ ಪಾಲಿಗೆ ಬೆಳಕಿನ ಆಶಾಕಿರಣ ಮೂಡಿಸಿದ್ದಾರೆ, ಅಂಥ ಆದರ್ಶ ಪುರುಷನ ವಿಚಾರಗಳು ಜೀವನದಲ್ಲಿ ಅಳವಡಿಕೊಂಡರೆ ಬದುಕು ಬಂಗಾರವಾಗುತ್ತದೆ ಎಂದರು. ಕರೊನಾ ಸೊಂಕು ಹೆಚ್ಚುತ್ತಿರುವುದರಿಂದ ನಮ್ಮ ಜೀವ ಉಳಿಸಿಕೊಳ್ಳುವುದು ಮುಖ್ಯವಾಗಿದ್ದು ಸರಕಾರದ ನಿಯಮ ಎಲ್ಲರು ಪಾಲನೆ ಮಾಡಬೇಕು ಎಂದರು. ಗ್ರಾ.ಪಂ ಉಪಾಧ್ಯಕ್ಷ ಚನ್ನಪ್ಪ ಹಾಲೆನವರ ಗ್ರಾ.ಪಂ ಸದಸ್ಯ ಮಹಾದೇವಯ್ಯ ಸ್ವಾಮಿ ಯುವಕರಾದ ಮಲ್ಲಿನಾಥ ಪವನಕುಮಾರ ಮಹಾಂತೇಶ ಇತರರು ಇದ್ದರು.