ಮಾದನಹಿಪ್ಪರಗಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನೆನಗುದಿಗೆ ಬಿದ್ದ ಆಕ್ಸಿಜನ್ ಸೌಲಬ್ಯ ಆರಂಭವಾಗಿದ್ದರೆ ಉಳಿಸಬಹುದು ಕೊರೊನಾ ರೋಗಿಗಳ ಪ್ರಾಣ

ಆಳಂದ:ಎ.27:ದಿನೆ ದಿನೆ ಕೊರೊನಾ ಹೆಚ್ಚಾಗುತ್ತಿರುವುದರಿಂದ ಸೋಂಕಿನಿಂದ ಸಾಯುವವರ ಸಂಖ್ಯೆಯು ಕೂಡಾ ಹೆಚ್ಚಾಗುತ್ತಿದೆ ಬೆಡ ಸಿಗದೆ ರೋಗಿಗಳು ಪರದಾಡುವಂತಾಗಿದೆ ಆದರೆ ಇದನ್ನು ಸ್ವಲ್ಪ ಮಟ್ಟಿಗಾದರೂ ತಪ್ಪಿಸಬಹುದು ಎಂದು ಸರಕಾರ ಆಳಂದ ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ 48 ಲಕ್ಷ ವೆಚ್ಚದ 30 ಹಾಸಿಗೆ ಆಕ್ಸಿಜನ್ ಸೌಲಬ್ಯ ಮಂಜೂರು ಮಾಡಿದೆ. ಬೆಂಗಳೂರಿನ ಕೆವಿಎಮ್ ಕಂಪನಿಯಿಂದ ಕಳೆದ 2020ರಲ್ಲಿ ಕೆಲಸ ಆರಂಭಿಸಿದೆ ಆದರೆ ಇದೂವರೆಗೂ ಕೂಡಾ ಅದು ಜನರಿಗೆ ಉಪಯೋಗವಾಗುತ್ತಿಲ್ಲ. ಕೊರೊನಾ ಎನ್ನುವ ಮಹಾಮಾರಿ ಸಾರ್ವಜನಿಕರನ್ನು ತೀರಾ ಸಂಕಷ್ಟಕ್ಕೆ ದೂಡಿದೆ ಪ್ರತಿನಿತ್ಯ ದೇಶದಲ್ಲಿ ಸಾವಿರಾರು ಜನರು ಉಸಿರಾಟದ ತೊಂದರೆಯಿಂದ ಸಾವನ್ನಪ್ಪತ್ತಿದ್ದಾರೆ. ಅವರಿಗೆ ಆಮ್ಲಜನಕ ಸಿಕ್ಕರೆ ಜೀವ ಉಳಿಸಬಹುದಾಗಿದೆ. ಕಳೆದ ವರ್ಷವೆ ಆರಂಭಮಾಡಿದ್ದರೂ ಕೂಡಾ ಕೆಲಸ ಮಾತ್ರ ಇನ್ನೂ ಕೂಡಾ ಪೂರ್ಣ ಪ್ರಮಾಣದಲ್ಲಿ ಜನರಿಗೆ ಉಪಯೋಗವಾಗುತ್ತಿಲ್ಲ. ಗ್ರಾಮದಲ್ಲಿ 35 ಕೊರೊನಾ ಪ್ರಕರಣಗಳು ಸಕ್ರಿಯವಾಗಿವೆ ಸುತ್ತಮುತ್ತ ಹಳ್ಳಿಗಳಲ್ಲಿ ಕೂಡಾ ಕೊರೊನಾ ಪ್ರಕರಣಗಳು ಹೆಚ್ಚಾಗಿತ್ತಿವೆ ಹಾಗೆ ಸಾವುಗಳು ಕೂಡಾ ಸಂಭವಿಸುತ್ತಿವೆ. 30 ಹಾಸಿಗೆ ಆಸ್ಪತ್ರೆ ಇದ್ದು ಸಾರ್ವಜನಿಕರಿಗೆ ವರದಾನವಾಗಬೇಕಿದೆ ಬಡಜನರೂ ಖಾಸಿಗೆ ಆಸ್ಪತ್ರೆಗೆ ಲಕ್ಷಾಂತರ ಹಣ ನೀಡಲು ಸಾದ್ಯವಾಗದ ಪರಸ್ಥಿಯಲ್ಲಿ ಪರದಾಡುವಂತಾಗಿದೆ. ಗ್ರಾಮೀಣ ಭಾಗದಲ್ಲೂ ಕೂಡಾ ಕೋವಿಡ್ ಕೇರ್ ಆರಂಭಿಸಿ ಸಾರ್ವಜನಿಕರಿಗೆ ಅನಕೂಲವಾಗಲೆಂದು ಆರಂಭಸಿದರೆ ಅಧಿಕಾರಿಗಳ ನಿರ್ಲಕ್ಷದಿಂದ ನೆನಗುದಿಗೆ ಬಿದ್ದದೆ ಇನ್ನೂ ಮೇಲಾದರೂ ಕೂಡಾ ಅಧಿಕಾರಿಗಳು ಎಚ್ಚತ್ತು ಕೊಂಡು ಬೆಡ್ ಇಲ್ಲದೆ ಪರದಾಡುತ್ತಿರುವ ನೂರಾರು ರೋಗಿಗಳಿಗೆ ಇಲ್ಲಿನ ಸಮಸ್ಯೆ ಬಗೆ ಹರಿಸಿಸಲು ಕ್ರಮವಹಸಿಬೇಕಿದೆ.

ಮಾದನಹಿಪ್ಪರಗಾ ಆಸ್ಪತ್ರೆಯಲ್ಲಿ ಈಗಾಲೆ 48 ಲಕ್ಷದ ಆಕ್ಸಿಜನ್ ಪ್ಲಾಟ್ ಸಿದ್ದವಾಗಿದೆ ಆದರೆ ಇದುವರೆಗೂ ನಮಗೆ ಅದು ಹಸ್ತಾಂತ ನೀಡಲಿಲ್ಲ.ಕೇವ ಡೆಮೋ ಮಾತ್ರ ನೀಡಿದ್ದಾರೆ ನಮಗೆ 10 ಜಂಭೊ ಆಕ್ಸಿಜನ್ ಸಿಲಿಂಡರ್ ಬೇಕಾಗಿದ್ದು ಅವುಗಳಿಗಾಗಿ ಮೇಲಾಧಿಕಾರಿಗಳಿಗೆ ತಿಳಿಸಲಾಗಿದೆ.ವೆಂಟಿಲೆರ್ ಸಿಲಕಿಂಡರ್ ಬಂದರೆ ಜನರಿಗೆ ಸೇವೆ ನೀಡಬಹುದು -ಡಾ.ಇರ್ಫಾನ ಅಲಿ ಆಡಳಿತ ವೈದ್ಯಾಧಿಕಾರಿ


ಗ್ರಾಮದ ಆಸ್ಪತ್ರೆ ತಾಲೂಕಿನ ದೊಡ್ಡ ಆಸ್ಪತ್ರೆಯಾಗಿದ್ದು ಇಲ್ಲಿ ಸರಿಯಾದ ವ್ಯವಸ್ಥೆ ಇದ್ದರೆ ಜನರೂ ಖಾಸಗಿ ಆಸ್ಪತ್ರೆಗೆ ಹೋಗುವುದು ತಪ್ಪುತ್ತದೆ ಕೊರೊನಾ ರೋಗದಿಂದ ನೂರಾರು ರೋಗಿಗಳು ಸಾಯುತ್ತಿದ್ದು ಗ್ರಾಮದ ಆಸ್ಪತೆಯಲ್ಲು ಆಕಿಜನ್ ಸಿಗುವಂತೆ ಕ್ರಮವಹಿಸಬೇಕು-ಶ್ರೀಶೈಲ ಜಳಕೋಟಿ ಗ್ರಾಮಸ್ಥರು