ಮಾದನಹಿಪ್ಪರಗಾ ಚಕ್ ಪೋಸ್ಟ ಆರಂಭಿಸಿದರೂ ಸಿಬ್ಬಂದಿ ಮಾತ್ರ ಇಲ್ಲ

ಮಾದನಹಿಪ್ಪರಗಾ;ಎ.27:ಮಹಾರಾಷ್ಟರದಿಂದ ವಾಹನಗಳು ಕಲಬರಗಿ ಜಿಲ್ಲೆಗೆ ಬರದಂತೆ ಗಡಿ ಚಕ್ ಪೋಸ್ಟ ಸ್ಥಾಪಿಸಲಾಗಿದೆ ಆದರೆ ಮಾದನಹಿಪ್ಪರಗಾ ಗಡಿಯಲ್ಲಿ ಬಹಳದಿನಗಳ ನಂತರ ಎಚ್ಚತ್ತುಕೊಂಡು ಜಿಲ್ಲಾಡಳಿತ ರವಿವಾರ ಚಕ್ ಪೋಸ್ಟ ಆರಂಭಿಸಿದೆ ಆದರೆ ಚಕ್ ಇಂದು ಸೋಮವಾರ ಚಕ್ ಪೋಸ್ಟಗೆ ಬೆಟಿ ಬೇಡಿದಾಗ ಅಲ್ಲಿ ಟೆಂಟ್ ಮಾತ್ರ ಕಂಡು ಬಂದಿದ್ದು ಆದರೆ ಅಲ್ಲಿ ಯಾವ ಸಿಬ್ಬಂದಿಯೂ ಕೂಡಾ ಕೆಲಸ ನಿರ್ವಹಿಸದೆ ಇರವುದು ಕಂಡು ಬಂದಿತು. ಗಡಿ ಭಾಗದಲ್ಲಿ ದೊಡ್ಡದಾದ ಮಣ್ಣು ಡಿಗ್ಗಿ ಹಾಕಿದ್ದು ಅದರ ಮೇಲಿಂದಲೆ ವಾಹನಗಳು ಸಂಚಾರ ಮಾಡುತ್ತಿವೆ. ಚಕ್ ಪೋಸ್ಟಲ್ಲಿ ಕೆಲಸ ಮಾಡಬೇಕಾದ ಸಿಬ್ಬಂದಿ ಮಾತ್ರ ನಾಪತ್ತೆಯಾಗಿದ್ದಾರೆ. ಕೊರನಾ ತಡಗಟ್ಟುಲು ನಿಂಬಾಳ ಹಿರೋಳ್ಳಿ ಖಜೂರಿ ಗಡಿಯಲ್ಲೂ ಚಕ್ ಪೊಸ್ಟ ಆರಂಭಸಿಲಾಗಿದೆ ಆದರೆ ಮಾದನಹಿಪ್ಪರಗಾ ಗಡಿ ಮಾತ್ರ ಮುಕ್ತ ಇಡಲಾಗಿದೆ. ಹೀಗಾದರೆ ಚಕ್ ಪೋಸ್ಟ ಸ್ಥಾಪನೆಯ ಉದ್ದೇಶ ಆದರೆ ಏಕೆ ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಸ್ಥಳಕ್ಕೆ ಆಗಮಿಸಿದ ಪಿಎಸ್.ಐ ಇಂದುಮತಿಯನ್ನು ಮಾತನಾಡಿಸಿದಾಗ ಚಕ್ ಪೋಸ್ಟಗೆ ಇಬ್ಬರು ಹೋಮ್ ಗಾರ್ಡಗಳನ್ನಿ ನಿಯೋಜಸಿದೆ ಆದರೆ ಕಂದಾಯ ಆರೋಗ್ಯ ಇಲಾಖೆ ಸಿಬ್ಬಂದಿ ಮಾತ್ರ ನಿಯೋಜಿಲ್ಲ ಇಲ್ಲಿ ಯಾವುದೆ ಊಟದ ನೀರಿನ ವ್ಯವಸ್ಥೆ ಮಾಡಿಲ್ಲ ಹೀಗಾಗಿ ನಮ್ಮ ಬಂದಿಲ್ಲ ಅವರನ್ನು ಗೈರು ಹಾಜರಿ ಮಾಡಲಾಗಿದೆ ಎಂದರು.