ಮಾದಕ ವಸ್ತು ಸೇವನೆ ಪ್ರಕರಣ: ನಟಿ ಭಾರತಿ, ಪತಿಗೆ 14 ದಿನ ನ್ಯಾಯಾಂಗ ಬಂಧನ

ಮುಂಬೈ,ನ.22- ಮಾದಕ ವಸ್ತು ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರುತೆರೆ ನಟಿ ಭಾರತಿ ಸಿಂಗ್ ಹಾಗು ಅವರ ಪತಿ ಹರ್ಷ್ ಲಿಂಬಾಚಿಯಾ ಅವರಿಗೆ ಮುಂಬೈ ನ್ಯಾಯಾಲಯ 14ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಮಾದಕ ವಸ್ತು ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೆನ್ನೆಯಷ್ಟೇ ಭಾರತಿ ಮತ್ತು ಇಂದು ಬೆಳಗ್ಗೆ ಅವರ ಪತಿ ಹರ್ಷ್ ಅವರನ್ನು ಮಾದಕವಸ್ತು ನಿಗ್ರಹ ಪಡೆ ಬಂಧಿಸಿತ್ತು. ತೀವ್ರ ವಿಚಾರಣೆ ನಡೆಸಿದ ಬಳಿಕ ಇಬ್ಬರನ್ನೂ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿತ್ತು.

ಡಿಸೆಂಬರ್ 4ರವರೆಗೆ ಇಬ್ಬರಿಗೂ ನ್ಯಾಯಾಂಗ ಬಂಧನ ವಿಧಿಸಿ ವಿಶೇಷ ನ್ಯಾಯಾಲಯ ಆದೇಶಿಸಿದೆ.

ನೆನ್ನೆ ಮುಂಬೈನ ನಿವಾಸದ ಮೇಲೆ ಮಾದಕವಸ್ತು ನಿಗ್ರಹ ಪಡೆ ದಾಳಿ ನಡೆಸಿದ ಸಂದರ್ಭದಲ್ಲಿ 85 ಗ್ರಾಮ್ ಕೆನಾಬಿಸ್ ಗಾಂಜಾ ಪತ್ತೆಯಾಗಿತ್ತು ಅಲ್ಲದೆ ಇಬ್ಬರೂ ಕೂಡ ಮಾದಕವಸ್ತು ಸೇವನೆ ಮಾಡಿದ್ದಾಗಿ ಒಪ್ಪಿಕೊಂಡಿದ್ದರು.

ಎಲ್ಲಾ ಪ್ರಕರಣಗಳ ಹಿನ್ನೆಲೆಯಲ್ಲಿ ಪತಿ-ಪತ್ನಿ ಇಬ್ಬರನ್ನು ಸುದೀರ್ಘ ವಿಚಾರಣೆ ನಡೆಸಿದ ಮಾದಕವಸ್ತು ನಿಗ್ರಹ ಪಡೆ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿತ್ತು ನ್ಯಾಯಾಧೀಶರು ಡಿಸೆಂಬರ್ ನಾಲ್ಕರವರೆಗೆ ಇಬ್ಬರಿಗೂ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

ನಾಳೆ ಜಾಮೀನು ಅರ್ಜಿ:

ಕಿರುತೆರೆ ನಟಿ ಭಾರತಿ ಮತ್ತು ಅವರ ಪತಿ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ನಾಳೆ ನ್ಯಾಯಾಲಯದ ಮುಂದೆ ಬರಲಿದೆ.

ನ್ಯಾಯಾಲಯ ಜಾಮೀನು ನೀಡಿದರೆ ಜೈಲಿನಿಂದ ಬಿಡುಗಡೆಯಾಗುತ್ತಾರೆ ಇಲ್ಲದಿದ್ದರೆ ಇಲ್ಲ ಅಷ್ಟು ದಿನಗಳ ಕಾಲ ಜೈಲಿನಲ್ಲಿ ಕಾಲ ಕಳೆಯುವುದು ಅನಿವಾರ್ಯವಾಗಿದೆ.

ನಟಿ ಭಾರತೀಯ ಸಿಂಗ್ ಮನೆಯಲ್ಲಿ ಸಿಕ್ಕಿರುವುದು ಕೇವಲ 86 ಗ್ರಾಮ ಅಷ್ಟೇ 1000 ಗ್ರಾಮದ ಮಾದಕವಸ್ತು ಸಿಕ್ಕರೆ ಅದನ್ನು ಸಣ್ಣಪ್ರಮಾಣದ ಪ್ರಕರಣ ಎಂದು ಪರಿಗಣಿಸಲಾಗುತ್ತದೆ. ಇದಕ್ಕಾಗಿ ಆರು ತಿಂಗಳ ಕಾಲ ಜೈಲು ಇಲ್ಲವೇ ಹತ್ತು ಸಾವಿರ ದಂಡ ವಿಧಿಸಲಾಗುತ್ತದೆ.

20 ಕೆಜಿಗೂ ಅಧಿಕ ಗಾಂಜಾ ಅಥವಾ ಮಾದಕ ವಸ್ತು ಸಿಕ್ಕರೆ ಅದನ್ನು ವಾಣಿಜ್ಯ ಬಳಕೆಗೆ ಎನ್ನುವುದು ಖಚಿತವಾದ ನಂತರ ಅಂತವರಿಗೆ ಕನಿಷ್ಟ 10 ರಿಂದ 20 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸುವ ಅಧಿಕಾರ ಇದೆ.