ಮಾದಕ ವಸ್ತು ಪ್ರಕರಣ: ಕಿರುತೆರೆ ನಟಿ ಭಾರತಿ ಸಿಂಗ್ ಬಂಧನ

ಮುಂಬೈ,ನ.21- ಮಾದಕ ವಸ್ತು ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದಕ ವಸ್ತು ನಿಗ್ರಹದಳ – ಎನ್‌ಸಿಬಿ ಕಿರುತೆರೆ ನಟಿ ಭಾರತಿ ಸಿಂಗ್ ಅವರನ್ನು ಬಂಧಿಸಿದೆ.

ಬೆಳಗ್ಗೆಯಷ್ಟೇ ಮುಂಬೈನ ಅವರ ನಿವಾಸದ ಮೇಲೆ ರಾಷ್ಟ್ರೀಯ ಮಾದಕವಸ್ತು ನಿಗ್ರಹ ದಳ ದಾಳಿ ನಡೆಸಿತ್ತು. ಈ ವೇಳೆ ಅವರ ಮನೆಯಲ್ಲಿ ಗಾಂಜಾ ಸೇರಿದಂತೆ ಕೆನಾಬಿಸ್ ಮಾದಕವಸ್ತು ಪತ್ತೆಯಾಗಿತ್ತು.

ಈ ಹಿನ್ನೆಲೆಯಲ್ಲಿ ಕಚೇರಿಗೆ ವಿಚಾರಣೆಗೆ ಆಗಮಿಸುವಂತೆ ಭಾರತಿ ಸಿಂಗ್ ಮತ್ತು ಆಕೆಯ ಪತಿಗೆ ನೋಟಿಸ್ ಜಾರಿ ಮಾಡಲಾಗಿತ್ತು.

ಇಂದು ಮಧ್ಯಾಹ್ನ ವಿಚಾರಣೆಗೆ ಹಾಜರಾದ ಭಾರತಿ ಸಿಂಗ್ ಅವರನ್ನು ಸಂಜೆಯ ತನಕ ಸುದೀರ್ಘ ವಿಚಾರಣೆ ನಡೆಸಿ ನಂತರ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಬಂಧಿಸಲಾಗಿದೆ.

ಮಾದಕ ವಸ್ತು ಸೇವನೆ ಮತ್ತು ಮಾರಾಟ ಪ್ರಕರಣ ಬಾಲಿವುಡ್ ಅಂಗಳದಲ್ಲಿ ಭಾರಿ ಸದ್ದು ಮಾಡಿದ್ದು ಘಟಾನುಘಟಿ ನಾಯಕರನ್ನು ನಿರ್ಮಾಪಕರನ್ನು ರಾಷ್ಟ್ರೀಯ ಮಾದಕವಸ್ತು ನಿಗ್ರಹ ಪಡೆ ವಿಚಾರಣೆಗೆ ಒಳಪಡಿಸುವ ಅಲ್ಲದೆ ಅವರನ್ನು ಬಂಧಿಸಿದೆ.

ಭಾರತಿ ಸಿಂಗ್ ಮತ್ತು ಆಕೆಯ ಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು ಭಾರತೀಯರನ್ನು ಮತ್ತಷ್ಟು ಹೆಚ್ಚಿನ ವಿಚಾರಣೆಗೆ ಬಂಧಿಸಲಾಗಿದೆ ಎಂದು ತನಿಖಾಧಿಕಾರಿ ಸಮೀರ್ ವಾಖಂಡೆ ತಿಳಿಸಿದ್ದಾರೆ.

ಮಾದಕವಸ್ತು ಸರಬರಾಜುದಾರರು ಒಂದಿಗೆ ಕಿರುತೆರೆ ನಟಿ ಭಾರತಿ ಅವರ ಹೆಸರು ಕೇಳಿ ಬಂದಿದ್ದು ಅನುಮಾನದ ಮೇಲೆ ಅವರ ಮನೆಯ ಮೇಲೆ ದಾಳಿ ನಡೆಸಿದ ವೇಳೆ ಮಾದಕವಸ್ತು ಪತ್ತೆಯಾಗಿದ್ದು ಇದರಲ್ಲಿ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ