ಮಾದಕ ವಸ್ತುಗಳ ಸೇವನೆ ಜಾಗೃತಿ ಕಾರ್ಯಕ್ರಮ

ಕಲಬುರಗಿ,ಡಿ.20: ಯಡ್ರಾಮಿ ಪಟ್ಟಣದಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸ್ಥಳೀಯ ಪೊಲೀಸ್ ಠಾಣೆಯ ವತಿಯಿಂದ ಬುಧವಾರ ಮಾದಕ ವಸ್ತುಗಳ ಸೇವೆನೆ, ದುಷ್ಪರಿಣಾಮಗಳು, ಅದನ್ನು ತಡೆಯುವುದು, ಕಾಯ್ದೆ-ಕಾನೂನುಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಜರುಗಿತು.
ಪಿಎಸ್‍ಐ ಸುಖಾನಂದ ಸಿಂಧೆ ಅವರು ವಿವರವಾಗಿ ಮಾಹಿತಿ ನೀಡಿದರು.

ಕಾಲೇಜಿನ ಪ್ರಾಚಾರ್ಯ ಮೊಹ್ಮದ್ ಅಲ್ಲಾಉದ್ದೀನ್ ಸಾಗರ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಉಪನ್ಯಾಸಕರಾದ ಇಮಾಮ್ ಪಟೇಲ್, ಅಂಬರೀಶ್, ಬಸವರಾಜ ಗೆಜ್ಜಿ, ಜಯಲಕ್ಷ್ಮಿ, ಮುಖ್ಯ ಶಿಕ್ಷಕ ಮಹೇಶ ಭಜಂತ್ರಿ, ಪ್ರ.ದ.ಸ ನೇಸರ ಎಂ.ಬೀಳಗಿಮಠ ಹಾಗೂ ಕಾಲೇಜಿನ ವಿದ್ಯಾರ್ಥಿಗಳು, ಪೊಲೀಸ್ ಠಾಣೆಯ ಸಿಬ್ಬಂದಿಗಳು ಭಾಗವಹಿಸಿದ್ದರು.