ಮಾದಕ ವಸ್ತುಗಳ ಸಾಗಾಟಕ್ಕೆ ಕಡಿವಾಣ-ಜಾಗೃತಿ

ಹುಬ್ಬಳ್ಳಿ,ಏ11 : ಮಾದಕ ವಸ್ತುಗಳ ಸಾಗಾಣಿಕೆ ಕಡಿವಾಣ ಬಗ್ಗೆ ಸಾರ್ವಜನಿಕರಿಗೆ ಹಾಗೂ ಸಾರಿಗೆ ಸಿಬ್ಬಂದಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಾರಿಗೆ ಸಂಸ್ಥೆ ಹಾಗೂ ಪೆÇಲೀಸ್ ಇಲಾಖೆಯ ಸಹಯೋಗದಲ್ಲಿ ಗೋಕುಲ ರಸ್ತೆ ಬಸ್ ನಿಲ್ದಾಣದಲ್ಲಿ ಶ್ವಾನದಳದಿಂದ ಪರಿಶೀಲನೆ ಮಾಡಿ ಅನುಸರಿಸಬೇಕಾದ ಕ್ರಮಗಳ ಕುರಿತು ಸಾರಿಗೆ ಸಿಬ್ಬಂದಿಗಳಿಗೆ ಮಾಹಿತಿ ನೀಡಲಾಯಿತು.

ಸೈಬರ್ ಕ್ರೈಮ್ ವಿಭಾಗದ ಪೆÇಲೀಸ್ ಇನ್ಸ್ ಪೆಕ್ಟರ್ ಬಿ.ಕೆ.ಪಾಟೀಲ ಮಾತನಾಡಿ, ಸಾರ್ವಜನಿಕ ಸಾರಿಗೆ ಬಸ್ಸುಗಳಲ್ಲಿ ಗಾಂಜಾ ಮತ್ತಿತರ ಮಾದಕ ವಸ್ತುಗಳ ಸಾಗಣೆ ಸಾಧ್ಯತೆಗಳಿರುತ್ತವೆ. ಸಾರಿಗೆ ಸಿಬ್ಬಂದಿ ಇದರ ಬಗ್ಗೆ ಜಾಗರೂಕತೆ ವಹಿಸಬೇಕು. ಬಸ್ ನಿಲ್ದಾಣಕ್ಕೆ ಬರುವ ಹಾಗೂ ಬಸ್ಸುಗಳಲ್ಲಿ ಪ್ರಯಾಣ ಮಾಡವ ಜನರ ಬಗ್ಗೆ ನಿಗಾ ವಹಿಸಬೇಕು. ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಅವರ ಹಾವಭಾವ ಹಾಗೂ ನಡವಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಬೇಕು. ಅನುಮಾನ ದೃಢಪಟ್ಟರೆ ಕೂಡಲೇ ಪೆÇಲೀಸ್ ದೂರವಾಣಿ ಸಂಖ್ಯೆ 112 ಕ್ಕೆ ಕರೆ ಮಾಡಿ ಮಾಹಿತಿ ನೀಡಬೇಕು. ಪೆÇಲೀಸ್ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸುತ್ತಾರೆ.ಇದರಿಂದ ಮಾದಕ ವಸ್ತುಗಳ ಸಾಗಾಣಿಕೆಯನ್ನು ಪರಿಣಾಮಕಾರಿಯಾಗಿ ತಡೆಯಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮಾತನಾಡಿ ಸಾರಿಗೆ ಬಸ್ಸುಗಳಲ್ಲಿ ಮಾದಕ ವಸ್ತುಗಳ ಸಾಗಾಣಿಕೆ ಮಾಡುವುದಕ್ಕೆ ಅವಕಾಶ ನೀಡಬಾರದು. ಈ ಬಗ್ಗೆ ಸಿಬ್ಬಂದಿ ಜಾಗರೂಕರಾಗಿದ್ದು ಪ್ರಯಾಣಿಕ ರಹಿತ ಲಗ್ಗೇಜುಗಳ ಸಾಗಾಣಿಕೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಸಾರ್ವಜನಿಕ ಪ್ರಯಾಣಿಕರಿಗೆ ಸೂಕ್ತ ತಿಳುವಳಿಕೆ ನೀಡಬೇಕು ಎಂದು ಹೇಳಿದರು.

ಪೆÇಲೀಸ್ ಶ್ವಾನ ದಳದಿಂದ
ಬಸ್ ನಿಲ್ದಾಣದಲ್ಲಿನ ಕಾರ್ಗೋ ಕೇಂದ್ರದಲ್ಲಿನ ಸರಕುಗಳು, ಪಾರ್ಸಲ್ ಗಳು, ಉಪಹಾರಗೃಹ, ವಾಣಿಜ್ಯ ಮಳಿಗೆಗಳು, ಪ್ರಯಾಣಿಕರ ಲಗ್ಗೇಜುಗಳು, ಬಸ್ ಪಾರ್ಕಿಂಗ್ ಅಂಕಣಗಳು, ಪ್ರಯಾಣಿಕರ ನಿರೀಕ್ಷಣಾ ಸ್ಥಳಗಳು ಮತ್ತಿತರ ಕಡೆಗಳಲ್ಲಿ ತಪಾಸಣೆ ಮಾಡಲಾಯಿತು. ಸೈಬರ್ ಕ್ರೈಂ ವಿಭಾಗದ ಸಿಬ್ಬಂದಿಗಳಾದ
ಮಾಲತೇಶ ಅಡವಿ, ಡಾಗ್ ಸ್ಕ್ವಾಡ್ ಸಂಜು ಕುರಹಟ್ಟಿ, ಸುರೇಶ ಕುರಿ, ರವಿ ಕೋಳಿ, ಫಕ್ಕೀರೇಶ ಸುಣಗಾರ ಭಾಗವಹಿಸಿದ್ದರು.

ಸಾರಿಗೆ ಸಂಸ್ಥೆಯ ವಿಭಾಗೀಯ ಸಂಚಾರ ಅಧಿಕಾರಿ ಕೆ.ಎಲ್.ಗುಡೆಣ್ಣವರ, ಸಹಾಯಕ ಲೆಕ್ಕಾಧಿಕಾರಿ ಸುನಿಲ ವಾಡೇಕರ, ನಿಲ್ದಾಣಾಧಿಕಾರಿ ಹಂಚಾಟೆ, ಸಾರಿಗೆ ನಿಯಂತ್ರಕರುಗಳು ಇದ್ದರು.