ಮಾದಕ ವಸ್ತುಗಳ ವ್ಯಸನ- ನಾಗರಿಕತೆಯ ಅಧ: ಪತನ

ಧಾರವಾಡ,ಜು.4: ಮಾದಕ ವಸ್ತುಗಳ ದುರ್ಬಳಕೆ ಹಾಗೂ ವ್ಯಸನವು ನಾಗರಿಕತೆಯಅಧಃಪತನದ ಸಂಕೇತವಲ್ಲದೆ 21ನೇ ಶತಮಾನದ ನಾಗರಿಕ ಸಮಾಜದದುರಂತಎಂದುಧಾರವಾಡಡಿಮ್ಹಾನ್ಸ ಮನೋಆರೋಗ್ಯ ಸಾಮಾಜಿಕಕಾರ್ಯಕರ್ತ ಪ್ರಶಾಂತ ಪಾಟೀಲ ಅಭಿಪ್ರಾಯಪಟ್ಟರು.
ಅವರು ಕ.ವಿ.ವ. ಸಂಘದ ಮಕ್ಕಳ ಮಂಟಪವು, ಸಂಶಿಯ ಕೆ.ಎಲ್.ಇ. ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ‘ವ್ಯಸನಮುಕ್ತ ಸಮಾಜ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ’ ವಿಷಯಕುರಿತುಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದಅವರು, ಈ ನಾಡಿನ ನಿಜವಾದ ಆಸ್ತಿ ನವಯುವಕರು, ಈ ಕರಾಳ ಛಾಯೆಯಲ್ಲಿ ಸಿಲುಕಿಕೊಂಡಿರುವುದು ದಿಗಿಲು ಹುಟ್ಟಿಸುವ ಸಂಗತಿಯಾಗಿದೆ.ಮಾದಕ ವಸ್ತುಗಳ ಸೇವನೆ ಕೇವಲ ಭಾರತದಲ್ಲಿ ಮಾತ್ರವಲ್ಲ, ಪಶ್ಚಿಮ ರಾಷ್ಟ್ರಗಳಲ್ಲೂ ಸಹ ವ್ಯಾಪಕವಾಗಿ ಹರಡಿದೆ.ಯುವಕರು ಪರಿಸರದ ಪ್ರಭಾವ, ಸ್ನೇಹಿತರಒತ್ತಡ, ಜೀವನದಜಂಜಾಟ, ಕೌಟುಂಬಿಕ ವಿಘಟನೆಗಳಿಂದ ಈ ದುಶ್ಚಟಕ್ಕೆ ಬಲಿಯಾಗುತ್ತಿರುವುದು ವಿಷಾದನೀಯ.ಈ ಅಮಲಿನ ಪದಾರ್ಥಗಳ ಸೇವನೆಯಿಂದಯುವಕರು ಕೊಲೆ, ಸುಲಿಗೆ, ಅಪಘಾತ, ಲೈಂಗಿಕ ಅತ್ಯಾಚಾರದಂತಹಕೃತ್ಯ ಮಾಡುವ ಸಾಧ್ಯತೆಇದೆ.
ಮಾದಕ ವಸ್ತುಗಳ ಸೇವನೆಯಿಂದ ಹೃದಯಾಘಾತ, ನರದೌರ್ಬಲ್ಯ, ಜೀರ್ಣಕ್ರಿಯೆ ನಷ್ಟ, ರಕ್ತ ಹೀನತೆಯಂತಹಗಂಭೀರ ಕಾಯಿಲೆಗೆ ಬಲಿಯಾಗಬೇಕಾಗುತ್ತದೆ.ವಿದ್ಯಾರ್ಥಿಗಳು ದುಶ್ಚಟಗಳ ದಾಸರಾಗದೇಆರ್ಯೋಗ್ಯ ಪೂರ್ಣಜೀವನ ನಡೆಸಬೇಕು.ಜೊತೆಗೆಚರ್ಚಾಕೂಟ, ವಿಚಾರ ಸಂಕಿರಣ, ಉಪನ್ಯಾಸ, ಬೀದಿ ನಾಟಕಗಳ ಮೂಲಕ ಜನಜಾಗೃತಿ ಸಮಾಜದಲ್ಲಿಉಂಟು ಮಾಡಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಸಂಶಿಯ ಕೆ.ಎಲ್.ಇ. ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ À ಎ.ಬಿ. ಉಪ್ಪಿನಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿಗ್ರಾಮೀಣ ಪ್ರದೇಶದಲ್ಲಿಆಯೋಜಿಸುತ್ತಿರುವ ಈ ಕಾರ್ಯಕ್ರಮಅರ್ಥಪೂರ್ಣವಾಗಿದ್ದು, ಯುವಕರನ್ನುಎಚ್ಚರಿಸುವಲ್ಲಿ ಕ.ವಿ.ವ. ಸಂಘದ ಮಕ್ಕಳ ಮಂಟಪದಕಾರ್ಯ ಶ್ಲಾಘನೀಯಎಂದರು.
ಶಂಕರ ಕುಂಬಿ, ವೀರಣ್ಣಒಡ್ಡೀನ ಉಪಸ್ಥಿತರಿದ್ದು ಮಾತನಾಡಿದರು.ಕಾಲೇಜಿನ ಪ್ರಾಚಾರ್ಯ ಪ್ರೊ.ರಮೇಶಅತ್ತಿಗೇರಿ ಸ್ವಾಗತಿಸಿದರು. ಮಕ್ಕಳ ಮಂಟಪದ ಸಂಚಾಲಕ ಡಾ.ಧನವಂತ ಹಾಜವಗೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಸಿ. ಅಂಗಡಿ ನಿರೂಪಿಸಿದರು.ಶ್ರೀಮತಿ ಚನ್ನಮ್ಮಗುರುಮಠ ವಂದಿಸಿದರು.