ಮಾದಕ ವಸ್ತುಗಳ ಚಟಕ್ಕೆ ಯುವಕರು ಬಲಿ

ಸಿಂಧನೂರು,ಜೂ.೨೭-
ಮಾದಕ ವಸ್ತುಗಳ ಚಟಕ್ಕೆ ಯುವಕರು ಬಲಿಯಾಗಿ ತಮ್ಮ ಅಮೂಲ್ಯ ವಾದ ಸುಂದರ ಜೀವನವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ ಎಂದು ತಾಲುಕಾ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಯಾದ ಗೀತಾ ಹಿರೇಮಠ ಮಾತನಾಡಿದರು.
ತಾಲೂಕಾ ಆರೋಗ್ಯ ಅಧಿಕಾರಿಗಳ ಕಾರ್ಯಲಯ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ರಾಜೇಂದ್ರ ಕುಮಾರ ಮೆಮೊರಿಯಲ್ ಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ಶಾಲೆಯ ಅವರಣದಲ್ಲಿ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಹಾಗೂ ಮಕ್ಕಳ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಹದಿಹರೆಯದ ವಯಸ್ಸಿನಲ್ಲಿ ಕ್ಷಣಿಕ ಸುಖ ನೀಡುವ ಮಾದಕ ವಸ್ತುಗಳ ಮೋಹಕ್ಕೆ ಬಿದ್ದು ವಿದ್ಯಾರ್ಥಿ ಯುವಜನರು ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದರು.
ಮಾದಕ ವಸ್ತುಗಳ ಸೇವನೆಯಿಂದ ನೆಮ್ಮದಿಯ ಜೀವನ ಮಾಡುವ ಕುಟುಂಬಗಳು ಬೀದಿಗೆ ಬಂದಿವೆ ಮಾದಕ ವಸ್ತುಗಳ ಸೇವನೆಯಿಂದ ಮೆದುಳು ಹಾಗೂ ನಡವಳಿಕೆ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಶಾಲಾ ಕಾಲೇಜಿನ ಮಕ್ಕಳು ಹಾಗೂ ಯುವ ಪೀಳಿಗೆ ಮಾದಕ ವಸ್ತುಗಳ ಸಹವಾಸ ಮಾಡದೆ ಶಿಕ್ಷಣ ಕಲಿತು ದೇಶದ ಸತ ಪ್ರಜೆಗಳಾಗಿ ದೇಶಕ್ಕೆ ಉತ್ತಮ ಹೆಸರು ತರಬೇಕು ಎಂದು ಗೀತಾ ಹಿರೇಮಠ ಶಾಲೆಯ ಮಕ್ಕಳಲ್ಲಿ ಅರಿವು ಮೂಡಿಸುವ ಮೂಲಕ ಮಾತನಾಡಿದರೆ.
ಡಾ.ಸೂರ್ಯವಂಶಿ ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಯಾದ ಬಸಯ್ಯ ಇವರು ಮಾದಕ ವಸ್ತುಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮಕ್ಕಳಿಗೆ ತಿಳಿಸಿ ಹೇಳಿದರು ಆರೋಗ್ಯ ಇಲಾಖೆಯ ಶಮೀನ, ಹನುಮಂತ, ಶಾಲೆಯ ಶಿಕ್ಷಕರು ಮಕ್ಕಳು, ಆಶಾ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.