ಮಾದಕ ವಸ್ತುಗಳಿಂದ ದೂರ ಇರಲು ಕಾನೂನು ಅರಿವು ಕೂಡ ಮುಖ್ಯ:ನ್ಯಾ. ಶ್ರೀನಿವಾಸ ನವಲೆ

ಕಲಬುರಗಿ: ಸೆ.16 : ಮಾದಕ ವಸ್ತುಗಳಿಂದ ಬಡವರಿಗೆ, ದೂರ ಇರಲು ಕಾನೂನು ಅರಿವು ಕೂಡ ಮುಖ್ಯವಾಗಿದೆ ಹಾಗೂ ಮಕ್ಕಳಿಗೆ ಕಾನೂನು ಅರಿವು ಕೂಡ ಮುಖ್ಯವಾಗಿದೆ ಕಾನೂನು ನ್ಯಾಯ ಕೊಡಿಸುವ ಕೆಲಸ ಮಾಡುತ್ತದೆ ಆರೋಗ್ಯ ಇಲಾಖೆಯಲ್ಲಿ ಕಾನೂನು ಪ್ರಮುಖ ಪಾತ್ರ ವಹಿಸುತ್ತದೆ. ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀನಿವಾಸ ನವಲೆ ಹೇಳಿದರು.
ಶನಿವಾರದಂದು ಸರ್ಕಾರಿ ನರ್ಸಿಂಗ ಕಾಲೇಜು ಸಭಾಂಗಣದ ಆಯೋಜಿಸಿದ ಜಿಲ್ಲಾ ಕಾನೂನು ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಮ್ಸ್ ಆಸ್ಪತ್ರೆ, ಸರ್ಕಾರಿ ಸ್ಕೂಲ್ ಆಫ್ ನರ್ಸಿಂಗ್, ಆಫ್ ನರ್ಸಿಂಗ್, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಸಸಿಗೆ ನೀರೆರೆಯುವ ಮೂಲಕ ಉದ್ಫಾಟಿಸಿ ಮಾತನಾಡಿದರು
ಇಂದಿನ ಸಮಾಜದಲ್ಲಿ ಬೆಳೆಯುವದು ತುಂಬಾನೆ ಕಷ್ಟವಾಗಿದೆ ಜೀವನದಲ್ಲಿ ಬರುವ ಕಷ್ಟಗಳು ಎದುರಿಸುವಂತಹ ಸಮರ್ಥ ಬೆಳಿಸಿಕೊಳ್ಳÀಬೇಕು ಮಾನಸಿಕ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಇರುತ್ತದೆ ಎಲ್ಲದಕ್ಕೂ ಆತ್ಮಹತ್ಯೆ ಪರಿಹಾರ ಅಲ್ಲ ಹಾಗೂ ಮಾದಕ ವಸ್ತುಗಳ ಸೇವನೆಯಿಂದ ನಿಮ್ಮ ಭವಿಷ್ಯ ಹಾಳುಮಾಡಿಕೊಳ್ಳಬಾರದು ಮಾದಕ ಸೇವನೆ ಆರೋಗ್ಯದ ಮೇಲೆ ಗಂಭೀರವಾದ ಸಮಸ್ಯೆಗಳನ್ನು ಉಂಟುಮಾಡುತ್ತಿದೆ ಎಂದರು
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜಶೇಖರ ಮಾಲಿ ಮಾತನಾಡಿ,ಯಾಕೆ ಹೆಚ್ಚು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದರೆ ಅತಿಯಾಗಿ ಯೋಚನೆ ಮಾಡುವುದರಿಂದ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆ ಕಾರಣವಾಗಿದೆ ತಂದೆ ತಾಯಿ ಮಕ್ಕಳ ಮೇಲೆ ಒತ್ತಡ ಏರುವುದರಿಂದ ಕೂಡ ಸಮಸ್ಯೆಯಾಗುತ್ತಿವೆ ವಿದ್ಯಾರ್ಥಿಗಳು ಸರ್ಕಾರದಿಂದ ಸೌಲಭ್ಯಗಳು ಇವೆ ಅವುಗಳು ಸದುಪಯೋಗ ಪಡೆದುಕೊಳ್ಳಿ ಮಾನಸಿಕ ಕಾಯಿಲೆ ಇರುವವರಿಗೆ ಚಿಕಿತ್ಸೆ ನೀಡಲು ಸಿದ್ದರಿರಬೇಕೆಂದರು
ಮಾದಕ ವಸ್ತುಗಳ ಸೇವನೆಯಿಂದ ಸಾಕಷ್ಟು ದುಷ್ಪರಿಣಾಮಗಳನ್ನು ಉಂಟುಮಾಡುತ್ತದೆ. ಮಾದಕ ಪದಾರ್ಥಗಳ ಸೇವನೆಯಿಂದ ಮನುಷ್ಯನ ಜೀವನ ಹಾಳುಮಾಡುತ್ತದೆ ಎಂದು ಜಿಮ್ಸ್ ಆಸ್ಪತ್ರೆ ಮನೋವೈದ್ಯರು ಹಾಗೂ ಮುಖ್ಯಸ್ಥರು ಮನೋವೈದ್ಯಕೀಯ ವಿಭಾಗ ಪ್ರಭುಕಿರಣ ವ್ಹಿ ಗೋಗಿ ಉಪನ್ಯಾಸಕ ನೀಡಿದರು.
ಜೆಮ್ಸ್ ಜಿಲ್ಲಾ ಶಸ್ತ್ರಜ್ಞರು ಅಂಬರಾಯ ರುದ್ರವಾಡಿ ಮಾತನಾಡಿದರು
ಮನೋವೈದ್ಯರು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಮಹಮ್ಮದ್ ಇರಫಾನ್ ಮಹಾಗಾವಿ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ರಾಜಕುಮಾರ ಎ ಕುಲಕರ್ಣಿ, ಸರ್ಕಾರಿ ನರ್ಸಿಂಗ ಕಾಲೇಜು ಪ್ರಾಶುಪಾಲರು ಸುಭದ್ರ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದರು.