ಸಂಜೆವಾಣಿ ವಾರ್ತೆ
ಸಂಡೂರು: ಜೂ:24: ಆರೋಗ್ಯ ಇಲಾಖೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ತಾಲೂಕಿನ ತಾಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಅಂತರಾಷ್ಟ್ರೀಯ ಮಾದಕ ವ್ಯಸನ ಹಾಗೂ ಅಕ್ರಮ ಸಾಗಣೆ ವಿರೋಧಿ ದಿನ ಪ್ರಯುಕ್ತ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ,ಯುವ ಸಮುದಾಯಕ್ಕೆ ಮಾರಕವಾಗಿರುವ, ಮತ್ತು ಅವರ ಜೀವನದ ಹಾದಿ ತಪ್ಪಿಸುತ್ತಿರುವ ಮಾದಕ ದ್ರವ್ಯಗಳ ಹಾವಳಿ ತಪ್ಪಿಸಿ “ನಶೆ ಮುಕ್ತ ರಾಷ್ಟ್ರ” ನಿರ್ಮಾಣ ಮಾಡಲು ಸರ್ವರೂ ಸಂಕಲ್ಪ ಮಾಡಬೇಕಿದೆ, ಮುಖ್ಯವಾಗಿ ಯುವಜನತೆಯನ್ನು ಮಾದಕವಸ್ತುಗಳಿಂದ ರಕ್ಷಿಸಬೇಕಿದೆ,ಮಾದಕ ವಸ್ತುಗಳ ಸೇವನೆಯಿಂದ ಕುಟುಂಬ ಸರ್ವನಾಶವಾಗುವುದಲ್ಲದೇ ದೇಶದ ಅಭಿವೃದ್ಧಿಗೆ ಮಾರಕವಾಗಿದೆ, ಮಾದಕ ವಸ್ತುಗಳ ಉತ್ಪಾದನೆ ಮತ್ತು ಮಾರಾಟ ಜಾಲಗಳ ಪತ್ತೆಗೆ ಪ್ರತಿಯೊಬ್ಬರೂ ಸಹಕಾರ ನೀಡಬೇಕಿದೆ, ಯುವಕರು ತಮ್ಮ ಭವಿಷ್ಯದ ಹೆಚ್ಚಿನ ಗಮನವಿಟ್ಟು ಉತ್ತಮ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕು,ಮಾದಕ ದ್ರವ್ಯಗಳ ಸೇವನೆಯ ಇತರರನ್ನು ಅನುಕರಣೆ ಮಾಡುವುದಾಗಲಿ, ಸೇವಿಸುವಂತೆ ಪ್ರಚೋದಿಸುವುದಾಗಲಿ ಮಾಡುವವರನ್ನು ವಿರೋಧಿಸ ಬೇಕು, ಎನ್.ಡಿ.ಪಿ.ಎಸ್ ಆಕ್ಟ್ 1985 ಕಾಯ್ದೆಯನ್ನು ಕಠಿಣವಾಗಿ ಜಾರಿಗೊಳಿಸಲು ಸರ್ಕಾರ ಕ್ರಮ ಕೈಗೊಂಡಾಗ ಯುವಜನತೆಯ ಆರೋಗ್ಯ ರಕ್ಷಣೆ ಸಾಧ್ಯ ವಿದೆ ಎಂದು ತಿಳಿಸಿದರು,
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ನವೀನ್ ಕುಮಾರ್ ಅವರು ಮಾತನಾಡಿ ಯುವ ಸಮುದಾಯಕ್ಕೆ ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಇರಬೇಕು, ವಿದ್ಯಾರ್ಥಿಗಳಿಗೆ ಇಂತಹ ಜಾಗೃತಿ ಕಾರ್ಯಕ್ರಮಗಳ ಅವಶ್ಯಕತೆ ಇದೆ ಅವರ ಜೀವನ ಉತ್ತಮವಾದ ದಾರಿಯಲ್ಲಿ ಸಾಗಲು ಸಹಕಾರಿಯಾಗಲಿವೆ, ಮಾದಕ ದ್ರವ್ಯ ಸೇವನೆಯಿಂದ ತಂದೊಡ್ಡಬಹುದಾದ ಅನಾಹುತಗಳನ್ನು ಯುವಕರಿಗೆ ತಿಳಿಸುವ ಇಲಾಖೆಯ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದರು,
ನಂತರ “ನಶೆ ಮುಕ್ತ ಸಮಾಜ ನಿರ್ಮಾಣ ಕುರಿತು ಪ್ರತಿಜ್ಞೆಯನ್ನು ಕೈಗೊಳ್ಳಲಾಯಿತು,ಪ್ರತಿಜ್ಞೆಯನ್ನು ಆಪ್ತ ಸಮಾಲೋಚಕ ಪ್ರಶಾಂತ್ ಕುಮಾರ್ ಭೋದಿಸಿದರು,ವಿದ್ಯಾರ್ಥಿ ಚಂದ್ರು ಮತ್ತು ಕುಮಾರಸ್ವಾಮಿ ಪ್ರಾರ್ಥನೆ ಹೇಳಿದರು,ವಿದ್ಯಾವತಿ ಸ್ವಾಗತಿಸಿದರು ಕಾರ್ಯಕ್ರಮವನ್ನು ಶಶಿಕಲಾ ನಡೆಸಿಕೊಟ್ಟರು,ಶಿಕ್ಷಕ ಓಬಜ್ಜ ವಂದಿಸಿದರು,
ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಆರ್.ಕೆ.ಎಸ್.ಕೆ ಆಪ್ತ ಸಮಾಲೋಚಕ ಪ್ರಶಾಂತ್ ಕುಮಾರ್, ಪ್ರೌಢಶಾಲೆಯ ಸಹ ಶಿಕ್ಷಕರಾದ ಅಕ್ಕನಾಗಮ್ಮ,ಸುಕನ್ಯಾ,ಸುಮಿತ್ರಾ,ಓಬಜ್ಜ ಇತರರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು